|

ನವದೆಹಲಿ: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ 2020 ರಲ್ಲಿ ದೆಹಲಿಯಲ್ಲಿ ನಡೆದ ಚಳುವಳಿಯು ಕೇವಲ ಸಾಧಾರಣ ಧರಣಿ ಅಥವಾ ಪ್ರತಿಭಟನೆ ಆಗಿರಲಿಲ್ಲ. ಈ ಆಂದೋಲನದ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಿ, ಆ ಮೂಲಕ ಸರಕಾರವನ್ನು ಬದಲಾಯಿಸುವ ಸಂಚು ರೂಪಿಸಲಾಗಿತ್ತು. ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಲ್ಲೂ ನಂತರ ಇದೇ ರೀತಿಯ ಪ್ರಯತ್ನಗಳನ್ನು ಮಾಡಲಾಯಿತು. ದೆಹಲಿ ಗಲಭೆಗಳ ಸಮಯದಲ್ಲಿ ಪ್ರತಿಭಟನೆಗೆ ಬಂದ ಜನರು ಕೋಲುಗಳು ಮತ್ತು ಆಮ್ಲದ (ಆ್ಯಸಿಡ್) ಬಾಟಲಿಗಳನ್ನು ಹಿಡಿದು ಬಂದಿದ್ದರು. ಅವರು ದೊಡ್ಡ ದಾಳಿಗೆ ಸಿದ್ಧತೆ ಮಾಡಿಕೊಂಡು ಬಂದಿದ್ದರು ಎಂದು ದೆಹಲಿ ಪೊಲೀಸರು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದ್ದಾರೆ.
🚨 Delhi Riots = Regime Change Conspiracy? 🇮🇳🔥
In a major revelation before the Supreme Court, Delhi Police has indicated that the 2020 Delhi Riots were part of a larger high-level plot aimed at destabilising and overthrowing the Indian government.
Similar “regime change”… pic.twitter.com/N37fkzlOPK
— Sanatan Prabhat (@SanatanPrabhat) November 22, 2025
ಪೊಲೀಸರು ಸರ್ವೋಚ್ಚ ನ್ಯಾಯಾಲಯದಲ್ಲಿ ಉಮರ ಖಾಲಿದ್ ನನ್ನು ‘ದೇಶದ್ರೋಹಿಗಳ ಬೆಂಬಲಿಗ’ ಎಂದು ಕರೆದಿದ್ದಾರೆ.
1. ವಿಚಾರಣೆಯ ಸಮಯದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ಈ ಪ್ರಕರಣ ವಿಳಂಬವಾಗುತ್ತಿರುವುದರಿಂದ ಆರೋಪಿಗಳ ಜಾಮೀನು ಮಂಜೂರಾಗಿಲ್ಲ. ಇದಕ್ಕೆ ಆರೋಪಿಗಳೇ ಸ್ವತಃ ಜವಾಬ್ದಾರರು. ಅವರು ಸಹಕರಿಸಿದರೆ, ಎರಡು ವರ್ಷಗಳಲ್ಲಿ ಎಲ್ಲವೂ ಮುಗಿಯುತ್ತದೆ ಎಂದು ಹೇಳಿದರು.
2. ಈ ವಿಚಾರಣೆಯಲ್ಲಿ ಶರಜೀಲ ಇಮಾಮ್ ಅವರ ಪ್ರಚೋದನಕಾರಿ ಭಾಷಣಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ, ಉಮರ ಖಾಲಿದ್ ಅವರ ಮೇಲೆ ‘ಭಾರತ ತೇರೇ ತುಕ್ಡೇ ಹೋಂಗೆ’ ಎಂಬ ಘೋಷಣೆಗಳನ್ನು ಕೂಗಿದ ಆರೋಪವನ್ನು ಪುನರುಚ್ಚರಿಸಲಾಯಿತು. ಖಾಲಿದ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ.
3. ಖಾಲಿದ್ ಅನೇಕ ಮುಸ್ಲಿಂ ವಿದ್ಯಾರ್ಥಿಗಳ ವಾಟ್ಸ್ ಆ್ಯಪ್ ಗುಂಪುಗಳನ್ನು ರಚಿಸಿದ್ದ ವಿಷಯ ಪೊಲೀಸ ತನಿಖೆಯಲ್ಲಿ ಬಹಿರಂಗವಾಗಿದೆಯೆಂದು ರಾಜು ಅವರು ಹೇಳಿದರು.
4. ಪೊಲೀಸರು ಈ ಸಂದರ್ಭದಲ್ಲಿ ತಾಹಿರ್ ಹುಸೇನ್, ಇಶ್ರತ್ ಜಹಾನ್, ಖಾಲಿದ್ ಸೈಫಿ, ಶಿಫಾ ಉರ್ ರೆಹಮಾನ್ ಮತ್ತು ಮೀರಾನ್ ಹೈದರ್ ಅವರ ಮೇಲೆ ಗಲಭೆಗಳಿಗಾಗಿ ಹಣಕಾಸು ಒದಗಿಸಿರುವ ಆರೋಪ ಹೊರಿಸಿದ್ದಾರೆ. ತಾಹಿರ್ ಹುಸೇನ್ 1 ಕೋಟಿ 30 ಲಕ್ಷ ಮತ್ತು ಶಿಫಾ 89 ಲಕ್ಷ ನೀಡಿರುವ ಆರೋಪವಿದೆ.
ಸಂಪಾದಕೀಯ ನಿಲುವುಈ ಸಂಚಿನ ಹಿಂದೆ ಇರುವ ಪ್ರತಿಯೊಬ್ಬರಿಗೂ ಗಲ್ಲು ಶಿಕ್ಷೆ ನೀಡಿದರೆ, ಮುಂದೆ ಇಂತಹ ಸಂಚು ರೂಪಿಸಲು ಯಾರೂ ಪ್ರಯತ್ನಿಸುವುದಿಲ್ಲ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ