
ತಿರುವನಂತಪುರಂ (ಕೇರಳ) – ಕೇರಳ ಪೊಲೀಸರು ಇತ್ತೀಚೆಗೆ ಒಬ್ಬ ಮುಸ್ಲಿಂ ಮಹಿಳೆ ಮತ್ತು ಆಕೆಯ ‘ಲಿವ್-ಇನ್ ಪಾರ್ಟ್ನರ್’ (ವಿವಾಹವಾಗದೆ ಒಟ್ಟಿಗೆ ವಾಸಿಸುವ ಸಂಗಾತಿ) ವಿರುದ್ಧ ‘ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ’ಯ (ಯುಎಪಿಎ – Unlawful Activities Prevention Act) ಅಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಈ ಮಹಿಳೆಗೆ ೧೬ ವರ್ಷದ ಒಬ್ಬ ಮಗನಿದ್ದಾನೆ. ಈಕೆಯ ಪಾರ್ಟ್ನರ್ ಬ್ರಿಟನ್ ನಲ್ಲಿರುತ್ತಾನೆ. ಇವರಿಬ್ಬರೂ ಸೇರಿ ಮಗನನ್ನು ‘ಇಸ್ಲಾಮಿಕ್ ಸ್ಟೇಟ್’ ಎಂಬ ಭಯೋತ್ಪಾದಕ ಸಂಘಟನೆಗೆ ಸೇರಲು ಪ್ರೇರೇಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
🚨 Kerala ISIS Radicalisation Shock!
A 16-year-old boy has told police that his own mother and her stepfather tried to radicalise him and push him towards ISIS. Police have booked a case under UAPA.
🛑 He says he was shown ISIS videos and urged to join the terror outfit… and… pic.twitter.com/P5fOjSi4u4
— Sanatan Prabhat (@SanatanPrabhat) November 21, 2025
ಬ್ರಿಟನ್‌ನಲ್ಲಿರುವ ಮಹಿಳೆಯ ಪಾರ್ಟ್ನರ್ ತಮ್ಮ ಮಗನಿಗೆ ‘ಇಸ್ಲಾಮಿಕ್ ಸ್ಟೇಟ್’ನ ವಿಡಿಯೋಗಳನ್ನು ತೋರಿಸುತ್ತಿದ್ದ ಮತ್ತು ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗೆ ಸೇರಲು ಪ್ರೋತ್ಸಾಹಿಸುತ್ತಿದ್ದ ಎಂದು ಮಹಿಳೆಯ ಪತಿಯ ಕುಟುಂಬದವರು ಆರೋಪಿಸಿದ್ದಾರೆ. ಆರೋಪಿ ಮಹಿಳೆಯು ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾಳೆ. ‘ನನ್ನ ಪತಿ ಮತ್ತು ಅತ್ತೆಯ ಮನೆಯವರು ವೈವಾಹಿಕ ವಿವಾದಗಳಿಂದಾಗಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!