ಪಾಕಿಸ್ತಾನದೊಂದಿಗೆ ವ್ಯಾಪಾರ ಸ್ಥಗಿತಗೊಂಡ ನಂತರ ಈ ಪ್ರವಾಸ ಆಫ್ಘಾನಿಸ್ತಾನಕ್ಕೆ ಐತಿಹಾಸಿಕ!

ನವದೆಹಲಿ – ಕಳೆದ ತಿಂಗಳಲ್ಲಿ ಆಫ್ಘಾನಿಸ್ತಾನದ ತಾಲಿಬಾನ್ ಸರಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರ ಭಾರತ ಭೇಟಿಯ ನಂತರ, ಈಗ ಅವರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಅಲ್ಹಾಜ್ ನೂರುದ್ದೀನ್ ಅಝೀಝಿ ಈಗ ೫ ದಿನಗಳ ಭಾರತ ಪ್ರವಾಸಕ್ಕೆ ಬಂದಿದ್ದಾರೆ. ನವೆಂಬರ್ ೧೯ ರಿಂದ ಪ್ರಾರಂಭವಾದ ಈ ಪ್ರವಾಸ ನವೆಂಬರ್ ೨೩ ರವರೆಗೆ ನಡೆಯಲಿದೆ. ಈ ಭೇಟಿಯ ಸಮಯದಲ್ಲಿ, ಅಝೀಝಿ ಅವರು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರನ್ನೂ ಭೇಟಿ ಮಾಡಲಿದ್ದಾರೆ.
೧. ಈ ಭೇಟಿಯ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಮಾತನಾಡಿ, ಎರಡೂ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
೨. ಭಾರತವು ಇತ್ತೀಚೆಗೆ ಕಾಬೂಲ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು ಮರು ಸ್ಥಾಪಿಸಿದೆ.
೩. ಪ್ರಸ್ತುತ, ಭಾರತವು ಆಫ್ಘಾನಿಸ್ತಾನದ ಪ್ರಮುಖ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ. ಭಾರತವು ಆಫ್ಘಾನಿಸ್ತಾನಕ್ಕೆ ಔಷಧಗಳು, ಬಟ್ಟೆ, ಸಕ್ಕರೆ, ಚಹಾ, ಅಕ್ಕಿ ಮತ್ತು ಯಂತ್ರೋಪಕರಣಗಳನ್ನು ರಫ್ತು ಮಾಡುತ್ತದೆ, ಆದರೆ ಒಣ ಹಣ್ಣುಗಳು, ಹಣ್ಣುಗಳು ಮತ್ತು ಖನಿಜಗಳನ್ನು ಆಮದು ಮಾಡಿಕೊಳ್ಳುತ್ತದೆ.
ಉದ್ವಿಗ್ನತೆಯಿಂದಾಗಿ ಆಫ್ಘಾನಿಸ್ತಾನ-ಪಾಕಿಸ್ತಾನ ವ್ಯಾಪಾರ ಸ್ಥಗಿತ!
ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ, ವ್ಯಾಪಾರಕ್ಕಾಗಿ ಗಡಿಗಳನ್ನು ಮುಚ್ಚಿರುವ ಈ ಸಮಯದಲ್ಲಿ ತಾಲಿಬಾನ್ ಸಚಿವರು ಭಾರತ ಭೇಟಿ ನಡೆಸುತ್ತಿದ್ದಾರೆ. ತಾಲಿಬಾನ್ ಸರಕಾರವು ವ್ಯಾಪಾರಕ್ಕಾಗಿ ಇತರ ಆಯ್ಕೆಗಳನ್ನು ಹುಡುಕುತ್ತಿರುವುದರಿಂದ, ಈ ಪ್ರವಾಸವು ಆಫ್ಘಾನಿಸ್ತಾನಕ್ಕೆ ಐತಿಹಾಸಿಕ ಎಂದು ಪರಿಗಣಿಸಲಾಗಿದೆ. ಪಾಕಿಸ್ಥಾನವು ತನ್ನ ಗಡಿಗಳನ್ನು ಮುಚ್ಚಿರುವುದು, ‘ಆರ್ಥಿಕ ಯುದ್ಧ’ವಾಗಿದೆ ಎಂದು ತಾಲಿಬಾನ್ ಸರಕಾರದ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದರ್ ಈ ಹಿಂದೆ ಹೇಳಿದ್ದರು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ