ಶಿಮ್ಲಾದ (ಹಿಮಾಚಲ ಪ್ರದೇಶ) ಅನಧಿಕೃತ ಸಂಜೌಲಿ ಮಸೀದಿ ಪ್ರಕರಣ

ಶಿಮ್ಲಾ (ಹಿಮಾಚಲ ಪ್ರದೇಶ) – ಇಲ್ಲಿನ ಸಂಜೌಲಿ ಪ್ರದೇಶದಲ್ಲಿನ ಅನಧಿಕೃತ ಮಸೀದಿಗೆ ಬೀಗ ಜಡಿಯಬೇಕೆಂದು ಒತ್ತಾಯಿಸಿ ‘ದೇವಭೂಮಿ ಸಂಘರ್ಷ ಸಮಿತಿ’ಯು ನವೆಂಬರ್ 21 ರಂದು ಪ್ರತಿಭಟನೆಗೆ ಕರೆ ನೀಡಿದೆ. ನ್ಯಾಯಾಲಯವು ಈ ಮಸೀದಿಯ ನಿರ್ಮಾಣವು ಅನಧಿಕೃತ ಎಂದು ತೀರ್ಪು ನೀಡಿ, ಅದರ ವಿರುದ್ಧ ಕ್ರಮ ಕೈಗೊಳ್ಳಲು ಆಡಳಿತಕ್ಕೆ ಆದೇಶ ನೀಡಿತ್ತು; ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಮಿತಿಯು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಸಮಿತಿಯ ಸದಸ್ಯರು ನವೆಂಬರ್ 18 ರಿಂದ ಸಂಜೌಲಿ ಪೊಲೀಸ್ ಠಾಣೆಯ ಬಳಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ವಿರುದ್ಧ ದಾಖಲಿಸಿರುವ ದೂರುಗಳನ್ನು ಹಿಂಪಡೆಯಬೇಕು ಎಂಬುದು ಅವರ ಬೇಡಿಕೆಯಾಗಿದೆ. ಕಳೆದ ವಾರ ನಮಾಜ್ ತಡೆಯಲು ಪ್ರಯತ್ನಿಸಿದ ನಂತರ ಈ ದೂರು ದಾಖಲಾಗಿತ್ತು. ಸಮಿತಿಯು ಮಸೀದಿಯ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನೂ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದೆ.
1. ಸಮಿತಿಯ ಸಹ-ಸಂಯೋಜಕ ವಿಜಯ ಶರ್ಮಾ ಅವರು, ನವೆಂಬರ್ 19 ರಂದು ಸಂಜೆ ಮುಂದಿನ ಕಾರ್ಯತಂತ್ರಕ್ಕಾಗಿ ಸಭೆ ನಡೆಸಲಾಯಿತು ಮತ್ತು ಬೇಡಿಕೆಗಳಿಗೆ ಬದ್ಧರಾಗಿ ನವೆಂಬರ್ 21 ರಂದು ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
2. ವಿಜಯ ಶರ್ಮಾ ಅವರು ಪೋಷಕರಿಗೆ ಕರೆ ನೀಡಿದ್ದು, ಪ್ರತಿಭಟನೆಯ ದಿನದಂದು ಮಕ್ಕಳಿಗೆ ತೊಂದರೆಯಾಗಬಾರದೆಂದು ಶಾಲೆಗೆ ಕಳುಹಿಸಬೇಡಿ. ನವೆಂಬರ್ 21 ರಂದು ಸಂಜೌಲಿ ಮಾರ್ಗವನ್ನು ಬಂದ್ ಮಾಡಲಾಗುವುದು. ಈ ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸ್ಥಳೀಯ ನಾಗರಿಕರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
3. ನ್ಯಾಯಾಲಯವು ಮಸೀದಿಯನ್ನು ಅನಧಿಕೃತ ಎಂದು ಘೋಷಿಸಿರುವುದರಿಂದ ಈ ಸ್ಥಳದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯಬಾರದು ಎಂದು ಸಮಿತಿಯು ವಾದಿಸಿದೆ.
4. ನ್ಯಾಯಾಲಯವು ಅಕ್ರಮ ಕಟ್ಟಡವನ್ನು ಕೆಡವಲು ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲ, ಬದಲಾಗಿ ಸಮಿತಿಯ ಸದಸ್ಯರ ವಿರುದ್ಧ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಸಮಿತಿಯು ಆರೋಪಿಸಿದೆ. ಶರ್ಮಾ ಅವರು ನವೆಂಬರ್ 21 ರಂದು ನಡೆಯುವ ಪ್ರತಿಭಟನೆಯು ಕಳೆದ ವರ್ಷ ಸೆಪ್ಟೆಂಬರ್ 11 ರಂದು ನಡೆದ ಪ್ರತಿಭಟನೆಗಿಂತಲೂ ದೊಡ್ಡದಾಗಿರುತ್ತದೆ ಎಂದು ಹೇಳಿದರು. ಹಿಂದಿನ ಪ್ರತಿಭಟನೆಯ ಸಮಯದಲ್ಲಿ ನಡೆದ ಘರ್ಷಣೆಯಲ್ಲಿ 10 ಜನರು ಗಾಯಗೊಂಡಿದ್ದರು.
ಸಂಪಾದಕೀಯ ನಿಲುವು
|
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !