ಅಲ್-ಫಲಾಹ್ ಅಧ್ಯಕ್ಷ ಸಿದ್ದೀಕಿ ₹ ೪೧೫ ಕೋಟಿ ಅಕ್ರಮ ಆದಾಯ ಗಳಿಕೆ! AL-Falah Siddiqui Delhi Blast Case

  • ದೆಹಲಿ ಬಾಂಬ್ ಸ್ಫೋಟ ಪ್ರಕರಣ

  • ವಿದೇಶಕ್ಕೆ ಪಲಾಯನ ಮಾಡುವ ಮುನ್ನವೇ ಬಂಧನ

ನವದೆಹಲಿ – ದೆಹಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಹರಿಯಾಣದ ಫರಿದಾಬಾದ್ ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದ ಅಧ್ಯಕ್ಷ ಅಹಮದ್ ಸಿದ್ದೀಕಿಯನ್ನು ಜಾರಿ ನಿರ್ದೇಶನಾಲಯವು (ಇ.ಡಿ.) ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ಅವರನ್ನು 13 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಸಂದರ್ಭದಲ್ಲಿ ಇ.ಡಿ.ಯು ನ್ಯಾಯಾಲಯಕ್ಕೆ, ಸಿದ್ದಿಕಿ ಅವರು ಅಲ್-ಫಲಾಹ್ ವಿಶ್ವವಿದ್ಯಾಲಯದ ಮೂಲಕ, ಮಾನ್ಯತೆ ಪಡೆದ ಸಂಸ್ಥೆಯೆಂದು ಹೇಳಿಕೊಂಡು ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ದಾರಿ ತಪ್ಪಿಸಿದ್ದಾರೆ ಮತ್ತು 415 ಕೋಟಿ 10 ಲಕ್ಷ ರೂಪಾಯಿಗಳ ಅಕ್ರಮ ಆದಾಯವನ್ನು ಸಂಗ್ರಹಿಸಿದ್ದಾರೆ. ಒಂದು ವೇಳೆ ಇವರನ್ನು ಬಂಧಿಸದೇ ಇದ್ದಿದ್ದರೆ, ಅವರು ವಿದೇಶಕ್ಕೆ ಪಲಾಯನ ಮಾಡಿ ತನಿಖೆಯನ್ನು ತಪ್ಪಿಸಿ, ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇತ್ತು, ಎಂದು ಹೇಳಿದೆ.

ಇ.ಡಿ.ಯು ನ್ಯಾಯಾಲಯಕ್ಕೆ, 1990 ರ ನಂತರ ಅಲ್-ಫಲಾಹ್ ಸಮೂಹವು ವೇಗವಾಗಿ ಬೆಳೆಯಿತು ಮತ್ತು ಒಂದು ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿ ರೂಪುಗೊಂಡಿತು. ಆದಾಗ್ಯೂ, ಸಮೂಹದ ಆರ್ಥಿಕ ಸ್ಥಿತಿ ಮತ್ತು ಅದರ ಆಸ್ತಿಗಳಲ್ಲಿ ಗಮನಾರ್ಹ ವ್ಯತ್ಯಾಸವಿದ್ದು, ಇದು ಸಂಶಯಕ್ಕೆ ಎಡೆಮಾಡಿಕೊಡುತ್ತದೆಯೆಂದು ತಿಳಿಸಿದೆ.

ಅಲ್-ಫಲಾಹ್ ನ 200 ಜನರ ಮೇಲೆ ನಿಗಾ

ಗುಪ್ತಚರ ಮೂಲಗಳು ನೀಡಿರುವ ಮಾಹಿತಿಯನುಸಾರ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಅಥವಾ ಅಲ್ಲಿ ಅಧ್ಯಯನ ಮಾಡುತ್ತಿರುವ 10 ಜನ ನಾಪತ್ತೆಯಾಗಿದ್ದಾರೆ. ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಅವರಲ್ಲಿ ಮೂವರು ಕಾಶ್ಮೀರಿಗಳಿದ್ದಾರೆ. ಅವರ ಮೊಬೈಲ್ ಫೋನ್‌ಗಳು ಸ್ಥಗಿತಗೊಂಡಿವೆ. ಜಮ್ಮು-ಕಾಶ್ಮೀರ ಮತ್ತು ಹರಿಯಾಣ ಪೋಲೀಸರ ಜಂಟಿ ತಂಡವು ಅವರನ್ನು ಪತ್ತೆಹಚ್ಚಲು ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ, ಈ ವಿಶ್ವವಿದ್ಯಾಲಯದ ಒಟ್ಟು 200 ಜನರ ಮೇಲೆ ತನಿಖಾ ಸಂಸ್ಥೆಗಳು ನಿಗಾ ಇರಿಸಿವೆ.

ಸಂಪಾದಕೀಯ ನಿಲುವು

ಈ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿ, ಈ ವಿಶ್ವವಿದ್ಯಾಲಯವನ್ನು ನೆಲಸಮ ಮಾಡುವುದೇ ಸೂಕ್ತ. ಹಾಗೆಯೇ ದೇಶದಲ್ಲಿನ ಇಂತಹ ಎಲ್ಲ ಇಸ್ಲಾಮಿ ವಿಶ್ವವಿದ್ಯಾಲಯಗಳ ಬಗ್ಗೆ ಇದೇ ದೃಷ್ಟಿಯಿಂದ ಸಮರೋಪಾದಿಯಲ್ಲಿ ತನಿಖೆ ಆರಂಭಿಸಬೇಕು!