|

ನವದೆಹಲಿ – ರಾಷ್ಟ್ರಪತಿ ಮತ್ತು ರಾಜ್ಯಪಾಲರು ವಿಧೇಯಕಗಳಿಗೆ ಸಮ್ಮತಿ ನೀಡಲು ಅಂತಿಮ ಕಾಲಮಿತಿ ನಿಗದಿಪಡಿಸುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇದು ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳನ್ನು ಅಲ್ಲಿನ ರಾಜ್ಯಪಾಲರು ಕಾನೂನಾಗಿ ಪರಿವರ್ತಿಸದ ಪ್ರಕರಣವಾಗಿತ್ತು. ಶಾಸಕಾಂಗವು ಅಂಗೀಕರಿಸಿದ ವಿಧೇಯಕಗಳನ್ನು ತಡೆಹಿಡಿಯಲು ರಾಜ್ಯಪಾಲರಿಗೆ ಸಂಪೂರ್ಣ ಅಧಿಕಾರವಿಲ್ಲ; ಆದರೆ ಅವರ ಕಾರ್ಯವಿಧಾನಕ್ಕೆ ಕಾಲಮಿತಿ ವಿಧಿಸುವುದು ಸಹ ಸರಿಯಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ೫ ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಸರ್ವಾನುಮತದಿಂದ ಮಹತ್ವದ ತೀರ್ಪು ನೀಡಿದೆ. ಆದರೂ, ವಿಳಂಬವಾದಲ್ಲಿ, ನಾವು ಮಧ್ಯಪ್ರವೇಶಿಸಬಹುದು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
ಸರ್ವೋಚ್ಚ ನ್ಯಾಯಾಲಯದ ಮಹತ್ವದ ಆದೇಶ!
೧. ಅಂಗೀಕೃತ ವಿಧೇಯಕವು ರಾಜ್ಯಪಾಲರ ಬಳಿ ಬಂದಾಗ ಅವರಿಗೆ ೩ ಆಯ್ಕೆಗಳಿರುತ್ತವೆ – ವಿಧೇಯಕವನ್ನು ಸ್ವೀಕರಿಸಿ ಸಹಿ ಮಾಡುವುದು, ಮರುಪರಿಶೀಲನೆಗಾಗಿ ವಿಧೇಯಕವನ್ನು ಶಾಸಕಾಂಗಕ್ಕೆ ಹಿಂತಿರುಗಿಸುವುದು, ಅಥವಾ ರಾಷ್ಟ್ರಪತಿಯವರಿಗೆ ಕಳುಹಿಸುವುದು.
೨. ವಿಧೇಯಕದ ಮೇಲಿನ ಕಾರ್ಯವಿಧಾನಕ್ಕಾಗಿ ಯಾವುದೇ ಅಂತಿಮ ಕಾಲಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ. ಆದಾಗ್ಯೂ, ವಿಳಂಬವಾದರೆ, ನಾವು ಮಧ್ಯಪ್ರವೇಶಿಸಬಹುದು.
೩. ಕಳೆದ ಕೆಲವು ತಿಂಗಳಿಂದ ನಡೆಯುತ್ತಿರುವ ಈ ಪ್ರಕರಣದಲ್ಲಿ, ಏಪ್ರಿಲ್ ೮ ರಂದು ಸರ್ವೋಚ್ಚ ನ್ಯಾಯಾಲಯವು ರಾಜ್ಯಪಾಲರಿಗೆ ‘ವಿಶೇಷಾಧಿಕಾರ’ (ವೀಟೋ ಪವರ್) ಇಲ್ಲ ಎಂದು ನಿರ್ಣಯ ನೀಡಿತ್ತು. ರಾಜ್ಯಪಾಲರು ಕಳುಹಿಸಿದ ವಿಧೇಯಕದ ಮೇಲೆ ರಾಷ್ಟ್ರಪತಿಗಳು ೩ ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಈ ಪ್ರಕರಣದ ಬಗ್ಗೆ ೧೪ ಪ್ರಶ್ನೆಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಕೇಳಿ ಅದರ ಅಭಿಪ್ರಾಯವನ್ನು ಕೋರಿದ್ದರು. ಈ ಪ್ರಕರಣದ ವಿಚಾರಣೆ ಕಳೆದ ೮ ತಿಂಗಳಿಂದ ನಡೆಯುತ್ತಿದೆ.
೪. ನ್ಯಾಯಾಲಯವು, ಒಂದು ವಿಧೇಯಕವನ್ನು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಮುಂದೆ ಸ್ವೀಕೃತಿಗಾಗಿ ಮಂಡಿಸಿದಾಗ, ಅವರು ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸದಿದ್ದರೆ, ಸಮ್ಮತಿ ನೀಡಲಾಗಿದೆ ಎಂದು ಕಾನೂನು ಭಾವಿಸುತ್ತದೆ, ಎಂದೂ ಸಹ ಹೇಳಿದೆ.
೫. ಆದಾಗ್ಯೂ, ರಾಜ್ಯಪಾಲರ ಸಮ್ಮತಿಯನ್ನು ನ್ಯಾಯಾಲಯವು ರದ್ದುಗೊಳಿಸಲು ಸಾಧ್ಯವಿಲ್ಲ. ವಿಧೇಯಕವನ್ನು ಕಾನೂನಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ರಾಜ್ಯಪಾಲರು ಕೇವಲ ‘ರಬ್ಬರ್ ಸ್ಟಾಂಪ್’ (ಇನ್ನೊಬ್ಬರ ಹೇಳಿಕೆಯಂತೆ ಕೆಲಸ ಮಾಡುವವರು) ಅಲ್ಲ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!