ನೇಪಾಳದಲ್ಲಿ ಭಾರತೀಯ ರಾಷ್ಟ್ರಧ್ವಜ ಹಾರಿಸಿದ ಪಾಕಿಸ್ತಾನಿ ‘ರಾಪರ್’ ತಲ್ಹಾ ಅಂಜುಮ್; ಪಾಕ್ ನಲ್ಲಿ ಟೀಕೆ
(ರಾಪ್ ಎಂದರೆ ಒಂದು ರೀತಿಯ ಸಂಗೀತ. ಅಂತಹ ಸಂಗೀತವನ್ನು ಪ್ರಸ್ತುತಪಡಿಸುವವರನ್ನು ರಾಪರ್ ಎನ್ನುತ್ತಾರೆ.)

ನವ ದೆಹಲಿ – ಪಾಕಿಸ್ತಾನಿ ರಾಪರ್ ತಲ್ಹಾ ಅಂಜುಮ್ ಅವರು ನೇಪಾಳದಲ್ಲಿ ನಡೆದ ತಮ್ಮ ಕಾರ್ಯಕ್ರಮದಲ್ಲಿ ಭಾರತೀಯ ಧ್ವಜವನ್ನು ಹಾರಿಸಿರುವ ಒಂದು ವಿಡಿಯೋ ಪ್ರಸಾರವಾಗಿದೆ. ತಲ್ಹಾ ಅಂಜುಮ್ ಅವರು ಒಬ್ಬ ಅಭಿಮಾನಿಯಿಂದ ಭಾರತೀಯ ರಾಷ್ಟ್ರಧ್ವಜವನ್ನು ಸ್ವೀಕರಿಸಿ, ಅದನ್ನು ಹಾರಿಸುತ್ತಾರೆ ಮತ್ತು ನಂತರ ಆ ಧ್ವಜವನ್ನು ತಮ್ಮ ಹೆಗಲ ಮೇಲೆ ಇಟ್ಟುಕೊಳ್ಳುತ್ತಾರೆ. ಈ ಘಟನೆಯನ್ನು ಪಾಕಿಸ್ತಾನದಲ್ಲಿರುವ ಕೆಲವರು ಟೀಕಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ತಲ್ಹಾ ಅಂಜುಮ್ ಅವರು, ನನ್ನ ಹೃದಯದಲ್ಲಿ ದ್ವೇಷಕ್ಕೆ ಜಾಗವಿಲ್ಲ. ನನ್ನ ಕಲೆಗೆ ಯಾವುದೇ ಗಡಿಯಿಲ್ಲ. ಒಂದು ವೇಳೆ ಭಾರತೀಯ ಧ್ವಜ ಹಾರಿಸುವುದರಿಂದ ವಿವಾದವಾದರೆ, ಆಗಲಿ. ನಾನು ಮತ್ತೆ ಅದನ್ನೇ ಮಾಡುತ್ತೇನೆ ಎಂದು ಉತ್ತರಿಸಿದರು. ನನಗೆ ಪ್ರಸಾರಮಾಧ್ಯಮಗಳು, ಯುದ್ಧಪ್ರಿಯ ಸರಕಾರಗಳು ಮತ್ತು ಅವುಗಳ ಪ್ರಚಾರದ ಬಗ್ಗೆ ಕಾಳಜಿಯಿಲ್ಲ. ಉರ್ದು ರಾಪ್ ಯಾವಾಗಲೂ ಎಲ್ಲೆಗಳನ್ನು ಮೀರಿ ನಿಲ್ಲುತ್ತದೆ.
ತಲ್ಹಾ ಅಂಜುಮ್ ಅವರ ಈ ಪ್ರತಿಕ್ರಿಯೆಯ ನಂತರ ವಿವಾದ ಮತ್ತಷ್ಟು ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಎರಡೂ ಕಡೆಯಿಂದ ಅಭಿಪ್ರಾಯಗಳನ್ನು ಮಂಡಿಸಲಾಗುತ್ತಿದೆ.
ತಲ್ಹಾ ಅಂಜುಮ್ ಅವರ ಪರಿಚಯ
ಕರಾಚಿಯಲ್ಲಿ ಹುಟ್ಟಿ ಬೆಳೆದ ತಲ್ಹಾ ಅಂಜುಮ್ ಅವರು ಪಾಕಿಸ್ತಾನದ ಒಬ್ಬ ಪ್ರಮುಖ ಗಾಯಕರಾಗಿದ್ದಾರೆ. 2012 ರಲ್ಲಿ, ಅವರು ತಲ್ಹಾ ಯೂನುಸ್ ಅವರೊಂದಿಗೆ ಉರ್ದು ರಾಪ್ ಜೋಡಿಯಾಗಿ ‘ಯಂಗ್ ಸ್ಟನರ್ಸ್’ ಅನ್ನು ಆರಂಭಿಸಿದರು. ಈ ಜೋಡಿಯು ‘ಬರ್ಗರ್-ಎ-ಕರಾಚಿ’ ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಗಳಿಸಿತು. ನಂತರ ಅವರು ದಕ್ಷಿಣ ಏಷ್ಯಾ ರಾಪ್ ವಲಯದಲ್ಲಿ ಮನೆಮಾತಾದರು. ತಲ್ಹಾ ಅಂಜುಮ್ ಅವರು ನಟನೆ ಕ್ಷೇತ್ರದಲ್ಲೂ ಹೆಸರುಗಳಿಸಿದ್ದಾರೆ. 2024 ರಲ್ಲಿ ಅವರು`ಕಟ್ಟರ್ ಕರಾಚಿ’ ಎಂಬ ಚಲನಚಿತ್ರದಲ್ಲಿ ಅಭಿನಯಿಸಿದ್ದರು. ಅವರ ಇನ್ ಸ್ಟಾಗ್ರಾಮ್ ಖಾತೆಯು 30 ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ ಹೊಂದಿದೆ. ಆದಾಗ್ಯೂ ಅನೇಕ ಪಾಕಿಸ್ತಾನಿ ಕಲಾವಿದರ ಖಾತೆಗಳಂತೆ ಅವರ ಖಾತೆಯನ್ನು ಸಹ ಭಾರತದಲ್ಲಿ ನಿಷೇಧಿಸಲಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation