
ನವ ದೆಹಲಿ – ಬಾಂಬ್ ತಯಾರಿಕೆಗಾಗಿ ಅಲ್-ಫಲಾಹ್ ವಿಶ್ವವಿದ್ಯಾಲಯದ ಪ್ರಯೋಗಶಾಲೆಯಿಂದಲೇ ರಾಸಾಯನಿಕಗಳನ್ನು ಕದ್ದಿದ್ದೆವು ಎಂದು ದೆಹಲಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬಂಧಿತರಾಗಿರುವ ಡಾ. ಶಾಹೀನ್ ಸಯೀದ್ ಮತ್ತು ಡಾ. ಮುಜಮ್ಮಿಲ್ ಅವರು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ, ಇ.ಡಿ. (ಜಾರಿ ನಿರ್ದೇಶನಾಲಯ) ತಂಡವು ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್-ಫಲಾಹ್ ಸಮೂಹದ ಅಧ್ಯಕ್ಷ ಜವಾದ್ ಸಿದ್ದಿಕಿ ಅವರ ಮನೆಯ ಮೇಲೆ ದಾಳಿ ನಡೆಸಿ, ಅವರನ್ನು ಬಂಧಿಸಿದೆ.
ಆತ್ಮಾಹುತಿ ದಾಳಿಕೋರರನ್ನು ಸೃಷ್ಟಿಸುವ ಹುನ್ನಾರ
ಬಾಂಬ್ ಸ್ಫೋಟದಲ್ಲಿ ಮೃತನಾಗಿರುವ ಡಾ. ಉಮರ್ ಆತ್ಮಾಹುತಿ ದಾಳಿಕೋರರ ಒಂದು ಪಡೆಯನ್ನು ಕಟ್ಟಲು ಪ್ರಯತ್ನಿಸುತ್ತಿದ್ದನು. ಅವನು ಅಂತಹವರಿಗೆ ತರಬೇತಿ ನೀಡಲು ಪ್ರಯತ್ನಿಸುತ್ತಿದ್ದನು. ಅವನು ಮುಸ್ಲಿಂ ಯುವಕರ ಬ್ರೈನ್‌ವಾಶ್ ಮಾಡಲು ಅವರಿಗೆ ‘ಪ್ರಚೋದನಕಾರಿ’ ವಿಡಿಯೋಗಳನ್ನು ಸಿದ್ಧಪಡಿಸಿ ಕಳುಹಿಸುತ್ತಿದ್ದನು. ಈ ವಿಡಿಯೋಗಳನ್ನು 11 ವ್ಯಕ್ತಿಗಳಿಗೆ ಕಳುಹಿಸಲಾಗಿತ್ತು. ಅವರಲ್ಲಿ 7 ಮಂದಿ ಕಾಶ್ಮೀರಿಗಳಾಗಿದ್ದು, ಅವರೆಲ್ಲರೂ ಯಾವುದೋ ಒಂದು ರೀತಿಯಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಪರ್ಕದಲ್ಲಿದ್ದರು. ಉಳಿದ 4 ಜನ ಉತ್ತರ ಪ್ರದೇಶ, ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಸೇರಿದವರೆಂದು ಹೇಳಲಾಗುತ್ತಿದೆ.
ಡಾ. ಉಮರ್ ನಿಗೆ ‘ಐ20’ ಕಾರನ್ನು ನೀಡಿದ್ದ ಕಾಶ್ಮೀರಿ ವ್ಯಕ್ತಿಯು, ಆತ್ಮಾಹುತಿ ದಾಳಿಕೋರನಾಗಲು ನಿರಾಕರಿಸಿದ ನಂತರ, ಆತನಿಗೆ ಈ ವಿಡಿಯೋಗಳನ್ನು ರವಾನಿಸಲಾಗಿತ್ತು. ಉಮರ್ ಆತ್ಮಾಹುತಿ ದಾಳಿ ನಡೆಸುವವರ ಒಂದು ತಂಡವನ್ನು ರಚಿಸುತ್ತಿದ್ದನು. ಸುಮಾರು 70 ವಿಡಿಯೋಗಳನ್ನು ಪರಿಶೀಲಿಸಲಾಯಿತು. ಅವುಗಳಲ್ಲಿ 12 ವಿಡಿಯೋಗಳನ್ನು ಡಾ. ಉಮರ್ ಚಿತ್ರೀಕರಿಸಿದ್ದನು. ಈ ವಿಡಿಯೋಗಳನ್ನು ಸುಶಿಕ್ಷಿತ ಯುವಕರಿಗೆ ಕಳುಹಿಸಲಾಗಿತ್ತು. ಆ ಯುವಕರನ್ನು ‘ಮಾನವ ಬಾಂಬ್’ಗಳಾಗಿ ಪರಿವರ್ತಿಸಲು ಆತನು ಪ್ರಯತ್ನಿಸುತ್ತಿದ್ದನು.
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಸ್ವದೇಶವೇ ಸರ್ವಸ್ವ !
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ