22 ಜಿಲ್ಲೆಗಳಿಂದ 1 ಸಾವಿರಕ್ಕೂ ಹೆಚ್ಚು ಮಂದಿರ ಧರ್ಮದರ್ಶಿಗಳಿಂದ ಸರ್ಕಾರದ ಬಳಿ ಒಮ್ಮತದ ಬೇಡಿಕೆ!
(‘ಆ್ಯಂಟಿ ಲ್ಯಾಂಡ್ ಗ್ರಾಬಿಂಗ್ ಆಕ್ಟ್’ ಎಂದರೆ ಭೂಮಿ ಕಬಳಿಕೆಯ ವಿರುದ್ಧದ ಕಾಯ್ದೆ)

ಮುಂಬಯಿ – ಮಹಾರಾಷ್ಟ್ರದ ದೇವಸ್ಥಾನಗಳ ಸಾವಿರಾರು ಎಕರೆ ಭೂಮಿಯನ್ನು ಭೂಮಾಫಿಯಾ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ಅಕ್ರಮವಾಗಿ ಕಬಳಿಸಿದ್ದಾರೆ. ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳ ಮಾದರಿಯಲ್ಲಿ ಕಠಿಣ ‘ಆ್ಯಂಟಿ ಲ್ಯಾಂಡ್ ಗ್ರಾಬಿಂಗ್ ಆಕ್ಟ್’ ಜಾರಿಗೆ ತರಬೇಕೆಂದು ಮಹಾರಾಷ್ಟ್ರದ 22 ಜಿಲ್ಲೆಗಳ 1 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳ ಧರ್ಮದರ್ಶಿಗಳು ಏಕಕಾಲದಲ್ಲಿ ಒಮ್ಮತದ ಬೇಡಿಕೆ ಇಟ್ಟಿದ್ದಾರೆ. ಮಂದಿರ ಮಹಾಸಂಘದ ನೇತೃತ್ವದಲ್ಲಿ ಈ ಬೇಡಿಕೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರಿಗೆ ಮನವಿಯ ಸಲ್ಲಿಸಲಾಯಿತು. ಕಂದಾಯ ರಾಜ್ಯ ಸಚಿವ ಯೋಗೇಶ ಕದಮ ಸೇರಿದಂತೆ ಅಂದಾಜು 22 ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳು ಹಾಗೂ ಶಾಸಕರಿಗೆ 300 ಕ್ಕೂ ಹೆಚ್ಚು ಮನವಿಗಳನ್ನು ಸಲ್ಲಿಸಲಾಗಿದೆ.

ಈ ರಾಜ್ಯವ್ಯಾಪಿ ಅಭಿಯಾನದಲ್ಲಿ ರಾಯಗಢದ ಶ್ರೀ ಹರಿಹರೇಶ್ವರ, ಸತಾರಾದ ಶ್ರೀ ಸಜ್ಜನಗಡ, ಪಾಲಿಯ ಶ್ರೀ ಬಲ್ಲಾಳೇಶ್ವರ, ವಸಯಿಯ ಶ್ರೀ ಪರಶುರಾಮ ತಪೋವನ, ನಾಸಿಕ್‌ನ ಶ್ರೀ ಮುಕ್ತಿದಾಮ, ಅಕೋಟ್-ಅಕೋಲಾದ ಶ್ರೀ ಕಾನ್ಹೋಬಾ, ರತ್ನಗಿರಿಯ ಶ್ರೀ ಕಾಶಿ ವಿಶ್ವೇಶ್ವರ, ಕೊಲ್ಲಾಪುರದ ಶ್ರೀ ಉಜಳಾಯಿ ಮತ್ತು ಅನೇಕ ಕ್ಷೇತ್ರಗಳ ದೇವಸ್ಥಾನಗಳು, ಹಾಗೆಯೇ ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಜ್ಯಮಟ್ಟದ ಸಂಚಾಲನಾ ಸಮಿತಿಯ (‘ಕೋರ್ ಟೀಮ್’ನ) ಎಲ್ಲಾ ಸದಸ್ಯರು ಭಾಗವಹಿಸಿದ್ದರು. ವಿವಿಧ ಜಿಲ್ಲೆಗಳ ಹಿಂದುತ್ವನಿಷ್ಠ ಸಂಘಟನೆಗಳೊಂದಿಗೆ ಅಕೋಲಾದ 160 ನ್ಯಾಯವಾದಿಗಳು ಈ ಉಪಕ್ರಮದಲ್ಲಿ ಪಾಲ್ಗೊಂಡಿದ್ದರು, ಹಾಗೂ ವಸಯಿಯಲ್ಲಿ ಸಂತ ಬಿ.ಪಿ. ಸಚಿನ್‌ವಾಲಾ ಅವರು ಉಪಸ್ಥಿತರಿದ್ದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!