
ನವದೆಹಲಿ – ಕೆಂಪು ಕೋಟೆಯ ಬಳಿ ಆತ್ಮಹುತಿ ಬಾಂಬ್ ಸ್ಫೋಟ ನಡೆಸಿದ ಭಯೋತ್ಪಾದಕ ವೈದ್ಯರ ಗುಂಪು, ಈ ಹಿಂದೆ ಹಮಾಸ್ ಭಯೋತ್ಪಾದಕ ಸಂಘಟನೆಯ ಮಾದರಿಯಲ್ಲೇ ಡ್ರೋನ್ ಗಳು ಮತ್ತು ರಾಕೆಟ್ ಗಳ ಮೂಲಕ ದಾಳಿ ಮಾಡಲು ಸಂಚು ರೂಪಿಸಿತ್ತು ಎಂಬ ಮಾಹಿತಿ ಹೊರಬಿದ್ದಿದೆ. ಈ ಸ್ಫೋಟ ಪ್ರಕರಣದಲ್ಲಿ ಇಲ್ಲಿಯವರೆಗೆ ಜಮ್ಮು-ಕಾಶ್ಮೀರ ಪೊಲೀಸರು 8 ಜನರನ್ನು ಬಂಧಿಸಿದ್ದಾರೆ.
1. ಆತ್ಮಹುತಿ ಬಾಂಬ್ ಸ್ಫೋಟ ನಡೆಸಿದ ಡಾ. ಉಮರ ಉನ್ ನಬಿ ಅವನ ಸಹಚರ ಜಸೀರ ಬಿಲಾಲ್ ವಾಣಿ ಅಲಿಯಾಸ್ ದಾನಿಶನನ್ನು ಬಂಧಿಸಿದ ನಂತರ ರಾಷ್ಟ್ರೀಯ ತನಿಖಾ ದಳಕ್ಕೆ ಈ ಮಾಹಿತಿ ಲಭಿಸಿದೆ. ದಾನಿಶ ಕಾಶ್ಮೀರದ ಅನಂತನಾಗ ಜಿಲ್ಲೆಯ ಕಾಜಿಗುಂಡ್ ನಿವಾಸಿಯಾಗಿದ್ದಾನೆ. ಇವನನ್ನು 4 ದಿನಗಳ ಹಿಂದೆ ಶ್ರೀನಗರದಲ್ಲಿ ಬಂಧಿಸಲಾಗಿದೆ.
2. ತನಿಖಾ ಸಂಸ್ಥೆ ಮಾಹಿತಿ ನೀಡುವಾಗ, ದಾನಿಶನಿಗೆ ಚಿಕ್ಕ ಡ್ರೋನ್ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಅನುಭವವಿದೆ ಎಂದು ತಿಳಿಸಿದೆ. ಈತ ಭಯೋತ್ಪಾದಕ ದಾಳಿಗಳನ್ನು ನಡೆಸಲು ಡಾ. ಉಮರನಿಗೆ ತಾಂತ್ರಿಕ ನೆರವು ನೀಡಿದ್ದನು. ಅವನು ಈ ಪಿತೂರಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದನು. ಅವನು ಡ್ರೋನ್ ಗಳನ್ನು ಮಾರ್ಪಾಡು ಮಾಡಿ ಭಯೋತ್ಪಾದಕ ದಾಳಿಗಳಿಗೆ ತಾಂತ್ರಿಕ ನೆರವು ನೀಡುವುದರ ಜೊತೆಗೆ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನವನ್ನೂ ಮಾಡುತ್ತಿದ್ದನು. ದಾನಿಶ ನಿಗೆ ತಾಂತ್ರಿಕ ಕೌಶಲ್ಯವಿತ್ತು. ಅವನು ಡ್ರೋನ್ ನ ಎಲೆಕ್ಟ್ರಾನಿಕ್ ಭಾಗಗಳು, ಮೋಟಾರ್ ಮತ್ತು ಲೋಡ್ ಕೆಪಾಸಿಟರ್ ಗಳಲ್ಲಿ ಮಾರ್ಪಾಡುಗಳನ್ನು ಮಾಡಿ, ಅದರ ಮೇಲೆ ಸ್ಫೋಟಕಗಳನ್ನು ಅಳವಡಿಸಲು ಸಾಧ್ಯವಾಗುವಂತಹ ರಚನೆಯನ್ನು (ಸೆಟಪ್) ಮಾಡುತ್ತಿದ್ದನು.
3. ದಾನಿಶ ಕ್ಯಾಮೆರಾಗಳು ಮತ್ತು ಭಾರೀ ಬಾಂಬ್ ಗಳನ್ನು ಹೊತ್ತೊಯ್ಯಬಲ್ಲ ದೊಡ್ಡ ಬ್ಯಾಟರಿಗಳನ್ನು ಹೊಂದಿದ ಶಕ್ತಿಶಾಲಿ ಡ್ರೋನ್ ಗಳನ್ನು ನಿರ್ಮಿಸಲು ಪ್ರಯತ್ನಿಸಿದ್ದನು. ಭಯೋತ್ಪಾದಕ ಗುಂಪು ಗರಿಷ್ಠ ಪ್ರಾಣಹಾನಿ ಉಂಟುಮಾಡಲು ಜನಸಂದಣಿ ಇರುವ ಸ್ಥಳಗಳಲ್ಲಿ ಡ್ರೋನ್ ಮೂಲಕ ಬಾಂಬ್ ಹಾಕಲು ಯೋಜಿಸಿತ್ತು.
4. ತನಿಖಾ ಸಂಸ್ಥೆಯ ಪ್ರಕಾರ, ಈ ಪಿತೂರಿಯು ಕೇವಲ ಕಾರು ಬಾಂಬ್ ಸ್ಫೋಟಕ್ಕೆ ಸೀಮಿತವಾಗಿರಲಿಲ್ಲ, ಬದಲಿಗೆ 3 ಹಂತಗಳಲ್ಲಿ ದಾಳಿ ಮಾಡುವ ಸಂಚು ರೂಪಿಸಿತ್ತು. ಇದರಲ್ಲಿ ಡ್ರೋನ್ ಗಳು, ರಾಕೆಟ್ ಗಳು ಮತ್ತು ಕೊನೆಯಲ್ಲಿ ಕಾರ್ ಬಾಂಬ್ ಸೇರಿವೆ. ಹಮಾಸ್ ಇಸ್ರೇಲ್ ನಲ್ಲಿ ಮತ್ತು ಇಸ್ಲಾಮಿಕ್ ಸ್ಟೇಟ್ ಸಿರಿಯಾ ಮತ್ತು ಇರಾಕ್‌ನಲ್ಲಿ ಇದೇ ವಿಧಾನವನ್ನು ಅನುಸರಿಸಿದ್ದವು.
ಡ್ರೋನ್ ಮತ್ತು ರಾಕೆಟ್ ಗಳ ಮೂಲಕ ಸ್ಫೋಟ ನಡೆಸುವ ಸಂಚು ವಿಫಲವಾದ ನಂತರ ಕಾರ್ ಬಾಂಬ್ ಬಳಕೆ!ತನಿಖೆಯಲ್ಲಿ, ‘ರಾಕೆಟ್ ಲಾಂಚರ್’ ನಂತಹ ‘ಮ್ಯಾನುಯಲ್ ಟ್ಯೂಬ್’ ಅನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು. ಇದರ ಪರೀಕ್ಷೆಯನ್ನು ಸಣ್ಣ ಸ್ಫೋಟಕ ಉಪಕರಣದ ಮೂಲಕ ಮಾಡಲಾಗಿತ್ತು. ಇದರ ಮಾರಕ ಸಾಮರ್ಥ್ಯ ಸುಮಾರು 300 ರಿಂದ 400 ಮೀಟರ್ ಇರಬಹುದೆಂದು ಅಂದಾಜಿಸಲಾಗಿತ್ತು. ಇದೆಲ್ಲವೂ ಆರಂಭಿಕ ಹಂತದಲ್ಲಿತ್ತು; ಆದರೆ, ಡ್ರೋನ್ ಅಥವಾ ರಾಕೆಟ್ ಮೂಲಕ ದಾಳಿ ಮಾಡುವುದು ಎಂಬ ಯೋಜನೆ ಸ್ಪಷ್ಟವಾಗಿತ್ತು. ಇದರ ಅರ್ಥ, ದೆಹಲಿಯಲ್ಲಿ ಮೊದಲು ರಾಕೆಟ್ ಮೂಲಕ ಭಯೋತ್ಪಾದಕ ದಾಳಿಯಾಗುತ್ತಿತ್ತು. ಡ್ರೋನ್ ಮತ್ತು ರಾಕೆಟ್ ಎರಡೂ ಪ್ರಯತ್ನಗಳು ವಿಫಲವಾದ ನಂತರ, ಭಯೋತ್ಪಾದಕರು ಕಾರ್ ಬಾಂಬ್ ನ ಮೂರನೇ ಮತ್ತು ಅಂತಿಮ ಆಯ್ಕೆಯನ್ನು ಆರಿಸಿಕೊಂಡರು ಮತ್ತು ಇದೇ ಸ್ಫೋಟದಿಂದ ದೆಹಲಿ ನಡುಗಿತ್ತು. |
ಆತ್ಮಹುತಿ ಭಯೋತ್ಪಾದಕರನ್ನು ‘ಹುತಾತ್ಮ’ ಎಂದು ನಿರ್ಧರಿಸುವ ಪ್ರಯತ್ನ
ಸ್ಫೋಟಕ್ಕೂ ಮುನ್ನ ಡಾ. ಉಮರ್ ನ ವಿಡಿಯೋ ಬಹಿರಂಗ
ಕೆಂಪು ಕೋಟೆಯ ಬಳಿ ಆತ್ಮಹುತಿ ದಾಳಿ ನಡೆಸಿದ ಭಯೋತ್ಪಾದಕ ಡಾ. ಉಮರ್ ನಬಿಯ ದಾಳಿಗೂ ಮುಂಚಿನ ಒಂದು ವಿಡಿಯೋ ಬಹಿರಂಗವಾಗಿದೆ. ಸ್ಫೋಟದ ಮೊದಲು ಅವನು ವಿಡಿಯೋ ಚಿತ್ರೀಕರಿಸಿದ್ದನು. ಅದರಲ್ಲಿ ಅವನು ಆತ್ಮಹುತಿ ದಾಳಿಯ ಬಗ್ಗೆ ಹೇಳುತ್ತಿದ್ದಾನೆ. ಅದರಲ್ಲಿ ಅವನು, ಅತ್ಯಂತ ದೊಡ್ಡ ತಪ್ಪು ಏನೆಂದರೆ, ಆತ್ಮಹುತಿ ದಾಳಿಯ ನಿಜವಾದ ಕಲ್ಪನೆ ಏನೆಂಬುದು ಜನರಿಗೆ ಅರ್ಥವಾಗುತ್ತಿಲ್ಲ. ಯಾವುದೇ ಸುಸಂಸ್ಕೃತ ಸಮಾಜದಲ್ಲಿ ಅದನ್ನು ಒಪ್ಪಲು ಸಾಧ್ಯವಿಲ್ಲ. ಅದರ ಬಗ್ಗೆ ಅನೇಕ ವಿರೋಧಾಭಾಸಗಳು ಮತ್ತು ವಾದಗಳಿವೆ. ಆತ್ಮಹುತಿ ದಾಳಿಗಳಲ್ಲಿನ ಅತ್ಯಂತ ದೊಡ್ಡ ಸಮಸ್ಯೆ ಏನೆಂದರೆ, ಒಬ್ಬ ವ್ಯಕ್ತಿಯು ನಿರ್ದಿಷ್ಟ ಸಮಯದಲ್ಲಿ ಮತ್ತು ಸ್ಥಳದಲ್ಲಿ ತಾನು ಖಂಡಿತವಾಗಿ ಸಾಯುತ್ತೇನೆ ಎಂದು ನಂಬಿದಾಗ, ಅವನು ಅತ್ಯಂತ ಅಪಾಯಕಾರಿ ಮಾನಸಿಕ ಸ್ಥಿತಿಯನ್ನು ಪ್ರವೇಶಿಸುತ್ತಾನೆ. ಅವನು ತನ್ನನ್ನು ತಾನು ಮರಣವೇ ತನ್ನ ಅಂತಿಮ ಗುರಿ ಎಂದು ಭಾವಿಸುವ ಸ್ಥಿತಿಯಲ್ಲಿ ಇರಿಸಿಕೊಳ್ಳುತ್ತಾನೆ; ಆದರೆ ಸತ್ಯವೇನೆಂದರೆ, ಅಂತಹ ಚಿಂತನೆ ಅಥವಾ ಅಂತಹ ಪರಿಸ್ಥಿತಿಗಳನ್ನು ಯಾವುದೇ ಪ್ರಜಾಪ್ರಭುತ್ವ ಮತ್ತು ಮಾನವೀಯ ವ್ಯವಸ್ಥೆಯಲ್ಲಿ ಒಪ್ಪಲು ಸಾಧ್ಯವಿಲ್ಲ; ಏಕೆಂದರೆ ಅವು ಜೀವನ, ಸಮಾಜ ಮತ್ತು ಕಾನೂನಿನ ಮೂಲಭೂತ ತತ್ವಗಳಿಗೆ ವಿರುದ್ಧವಾಗಿವೆ. (ಇಂತಹ ಆತ್ಮಹುತಿ ದಾಳಿಗಳಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಜಗತ್ತಿನಾದ್ಯಂತದ ಇಂತಹ ಘಟನೆಗಳಿಂದ ಅರ್ಥಮಾಡಿಕೊಳ್ಳಬೇಕು! – ಸಂಪಾದಕರು)
ಸಂಪಾದಕೀಯ ನಿಲುವುಜಿಹಾದಿ ಭಯೋತ್ಪಾದನೆಯ ಸಮಸ್ಯೆಯನ್ನು ಮೂಲದಿಂದಲೇ ನಾಶ ಮಾಡದ ಕಾರಣ, ಈ ಭಯೋತ್ಪಾದಕರು ಹೆಚ್ಚು ಹೆಚ್ಚು ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ. ಇಂದು ಅವರು ವಿಫಲರಾಗಿರಬಹುದು, ಆದರೆ ಭವಿಷ್ಯದಲ್ಲಿ ಏನಾಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ, ಜಿಹಾದಿ ಭಯೋತ್ಪಾದನೆಯನ್ನು ನಾಶಮಾಡಲು ಈಗ ಯುದ್ಧೋಪಾದಿಯಲ್ಲಿ ಪ್ರಯತ್ನಿಸುವುದು ಅನಿವಾರ್ಯವಾಗಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!