|

ಗಾಜಿಯಾಬಾದ (ಉತ್ತರ ಪ್ರದೇಶ) – ಹಿಂದೂ ದೇವತೆಗಳ ಅವಮಾನವಾದರೂ ಹಿಂದೂ ಸಮಾಜವು ಸುಮ್ಮನೆ ಸಹಿಸಿಕೊಂಡು ಕುಳಿತುಕೊಳ್ಳುತ್ತದೆ. ನಿಜವಾಗಿ, ಇಂತಹವರಿಗೆ (ಹಿಂದೂ ವಿರೋಧಿಗಳಿಗೆ) ಸೂಕ್ತ ಪಾಠ ಕಲಿಸಬೇಕು. ಗೋಹತ್ಯೆ ಮಾಡುವವರಿಗೆ ವಿನಂತಿಸುವುದಕ್ಕಿಂತ, ಅವರಿಗೆ ಕಠಿಣ ಶಿಕ್ಷೆಯನ್ನೇ ನೀಡಬೇಕಾಗುತ್ತದೆ. ಗೋವು ನಮ್ಮ ಮಾತೆಯಾಗಿದೆ. ಮಾತೆಯ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದ್ದರಿಂದ, ಗೋಹತ್ಯೆ ಮಾಡುವವರ ಶಿರಚ್ಛೇದ ಮಾಡಬೇಕು ಎಂದು ಭಾಜಪ ಶಾಸಕ ನಂದಕಿಶೋರ ಗುರ್ಜರ ಹೇಳಿದ್ದಾರೆ. ಅವರು ರಾಜ್ಯದ ಸಹರಾನಪುರದಲ್ಲಿ ನಡೆದ ಒಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಿದ್ದರು. ಅವರ ಈ ಹೇಳಿಕೆಯ ವೀಡಿಯೊ ಎಲ್ಲೆಡೆ ಪ್ರಸಾರವಾಗಿದೆ.
ಗುರ್ಜರ ಅವರ ಈ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ವಿರೋಧ ಪಕ್ಷಗಳು ಮತ್ತು ಅನೇಕ ಸಾಮಾಜಿಕ ಸಂಘಟನೆಗಳು ಅವರ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿವೆ. ಸಾರ್ವಜನಿಕ ವೇದಿಕೆಯಿಂದ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುವಂತಹ ಹೇಳಿಕೆ ಇದಾಗಿದೆ ಎಂದು ಅವರು ಹೇಳಿದ್ದಾರೆ. ಗುರ್ಜರ ಅವರು ಲೋನಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.
ಯೋಗಿ ಆದಿತ್ಯನಾಥ ಅವರ ಆಡಳಿತದ ಪ್ರಶಂಸೆ!ಶಾಸಕ ಗುರ್ಜರ ಅವರು ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ ಅವರ ಆಡಳಿತವನ್ನು ಶ್ಲಾಘಿಸಿದರು. ಅವರು ಮಾತನಾಡುತ್ತಾ, ಹಿಂದೆ ಗೋವಿನ ಕಸಾಯಿಖಾನೆ ನಿರ್ಭಯವಾಗಿ ನಡೆಯುತ್ತಿದ್ದವು ಮತ್ತು ಮಹಿಳೆಯರ ಮೇಲೆ ಬಲಾತ್ಕಾರಗಳು ನಡೆಯುತ್ತಿದ್ದವು. ಸಹರಾನಪುರದಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂಧರು ಇದ್ದರು; ಆದರೆ ಈಗ ಬಹಿರಂಗವಾಗಿ ಬೆದರಿಕೆ ಹಾಕುವ ಧೈರ್ಯ ಯಾರಿಗೂ ಇಲ್ಲ. ಹಿಂದೆ ಸಂಜೆಯ ನಂತರ ಪುರುಷರು ಸಹ ಹೊರಗೆ ಹೋಗುತ್ತಿರಲಿಲ್ಲ,ಅಲ್ಲಿ ಇಂದು ಮಹಿಳೆಯರು ಸುರಕ್ಷಿತವಾಗಿ ಆಭರಣಗಳನ್ನು ಧರಿಸಿ ಓಡಾಡಲು ಸಾಧ್ಯವಾಗಿದೆ. ಇದರ ಸಂಪೂರ್ಣ ಶ್ರೇಯಸ್ಸು ಯೋಗಿ ಆದಿತ್ಯನಾಥ ಸರಕಾರದ ಕಠಿಣ ಕ್ರಮಗಳಿಗೆ ಸಲ್ಲುತ್ತದೆ ಎಂದು ಹೇಳಿದರು. |
ಸಂಪಾದಕೀಯ ನಿಲುವುಗೋರಕ್ಷಕರನ್ನು ವಿರೋಧಿಸುವವರು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಗೋಹತ್ಯೆ ಮಾಡುವವರ ವಿರುದ್ಧ ಎಂದಿಗೂ ಮಾತನಾಡದಿರುವುದನ್ನು ಗಮನಿಸಿರಿ! ಗೋಹತ್ಯೆಯನ್ನು ತಡೆಯಲು ಕೇವಲ ಕಾನೂನುಗಳನ್ನು ರೂಪಿಸುವುದು ಸಾಕಾಗುವುದಿಲ್ಲ, ಇಂತಹ ಕೃತ್ಯಗಳನ್ನು ಎಸಗುವವರಿಗೆ ಜೀವಮಾನವಿಡೀ ಬುದ್ಧಿ ಕಲಿಯುವಂತಹ ಶಿಕ್ಷೆಯನ್ನು ಸರಕಾರ ನೀಡಬೇಕು ಮತ್ತು ಸಮಾಜದಲ್ಲಿ ಒಂದು ದಿಗಿಲು ಮೂಡಿಸುವುದು ಸಹ ಆವಶ್ಯಕವಾಗಿದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!