ಚೀನಾ, ಟರ್ಕಿಯೇ ಮತ್ತು ಯುರೋಪ್ ಸಹಕಾರ!

ಇಸ್ಲಾಮಾಬಾದ್ – ಭಾರತವು ‘ಆಪರೇಷನ್ ಸಿಂದೂರ್’ ಮೂಲಕ ನಡೆಸಿದ ಆಕ್ರಮಣದಲ್ಲಿ ಪಾಕಿಸ್ತಾನದ ಬಹಿರಂಗಗೊಂಡ ದೌರ್ಬಲ್ಯವನ್ನು ತುಂಬಲು ಪಾಕಿಸ್ತಾನವು ಕ್ರಮಗಳನ್ನು ಪ್ರಾರಂಭಿಸಿದೆ. ಆ ಸಮಯದಲ್ಲಿ ಪಾಕಿಸ್ತಾನವು ಭಾರತೀಯ ಸೇನೆಯ ಚಲನವಲನಗಳ ಮೇಲೆ ನಿಗಾ ಇಡುವ ಸಾಮರ್ಥ್ಯವನ್ನು ಹೊಂದಿರಲಿಲ್ಲ. ಇದಕ್ಕೆ ಪರಿಹಾರವಾಗಿ, ಪಾಕಿಸ್ತಾನವು ಈಗ ಉಪಗ್ರಹ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನವು ಸ್ವತಃ ಕಣ್ಗಾವಲು ಉಪಗ್ರಹವನ್ನು ನಿರ್ಮಿಸುವ ತನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಒತ್ತು ನೀಡಿದೆ. ಇದಕ್ಕಾಗಿ, ಟರ್ಕಿಯೇ ಮತ್ತು ಚೀನಾದಿಂದ ಸಹಾಯ ಪಡೆಯುತ್ತಿದ್ದು, ಯುರೋಪ್‌ನಿಂದಲೂ ಸಹಾಯವನ್ನು ಕೋರಲಾಗುತ್ತಿದೆ. ‘ಆಪರೇಷನ್ ಸಿಂದೂರ’ ನಂತರದ ಪರಿಶೀಲನೆಯಲ್ಲಿ ಪಾಕಿಸ್ತಾನದ ಇತರ ಸೌಲಭ್ಯಗಳು ಕೂಡ ಅಷ್ಟೇ ಅಸುರಕ್ಷಿತವಾಗಿವೆ ಎಂದು ತಿಳಿದುಬಂದಿದೆ.
೨೦೨೬-೨೭ರ ಅವಧಿಯಲ್ಲಿ ಚೀನಾದ ಸಹಾಯದಿಂದ ‘ಸಿಂಥೆಟಿಕ್ ಅಪರ್ಚರ್ ರೇಡಾರ್’ ಉಪಗ್ರಹವನ್ನು ಉಡಾವಣೆ ಮಾಡಲು ಪಾಕಿಸ್ತಾನ ಯೋಜಿಸಿದೆ. ಇತ್ತೀಚೆಗೆ, ಪಾಕಿಸ್ತಾನದ ಸುಪಾರ್ಕೋ ಸಂಸ್ಥೆಯಲ್ಲಿ ಅನೇಕ ಚೀನೀ ತಜ್ಞರು ಕಾಣಿಸಿಕೊಂಡಿದ್ದಾರೆ. ಇದರಿಂದ ಚೀನಾ ಪಾಕಿಸ್ತಾನದ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವುದು ಬಹಿರಂಗವಾಗಿದೆ.
ಸಂಪಾದಕೀಯ ನಿಲುವುಶತ್ರುವಿಗೆ ಬಹಿರಂಗವಾಗಿ ಸಹಾಯ ಮಾಡುವ ದೇಶಗಳನ್ನು ಭಾರತ ತರಾಟೆಗೆ ತೆಗೆದುಕೊಳ್ಳುತ್ತದೆಯೇ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation