|

ನವದೆಹಲಿ – ದೆಹಲಿಯ ಕೆಂಪುಕೋಟೆಯ ಬಳಿ ಜಿಹಾದಿ ಭಯೋತ್ಪಾದಕರು ನಡೆಸಿದ ಬಾಂಬ್ ಸ್ಫೋಟದಲ್ಲಿ ಭಾಗಿಯಾದ ಬಹುತೇಕ ಭಯೋತ್ಪಾದಕರು ವೈದ್ಯರಾಗಿದ್ದು, ಅವರು ಹರಿಯಾಣದ ಫರಿದಾಬಾದನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದರು ಹಾಗೂ ಕೆಲವರು ವಿದ್ಯಾರ್ಥಿಗಳಾಗಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ವೈದ್ಯರಾದ ಡಾ. ಮೋನಿಕಾ ಲಾಂಗೇಹ್ ಅವರು, ಬಂಧಿತ ಭಯೋತ್ಪಾದಕ ವೈದ್ಯರು ವಿಶ್ವವಿದ್ಯಾಲಯದಲ್ಲಿ ನಿರ್ದಿಷ್ಟವಾಗಿ ಹಿಂದೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಹಿಂಸಿಸುತ್ತಿದ್ದರು ಇದರಿಂದಾಗಿ ಓರ್ವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಳು. ಆದ್ದರಿಂದ, ಸರಕಾರವು ಅಲ್-ಫಲಾಹ್ ಕುರಿತು ಸಮಗ್ರ ತನಿಖೆ ನಡೆಸಿದರೆ, ದೊಡ್ಡ ಭಯೋತ್ಪಾದಕ ಪಿತೂರಿ ಬಯಲಾಗಬಹುದು. ಕಾಶ್ಮೀರಕ್ಕೆ ಸಂಬಂಧಿಸಿದ ಹಲವು ಸಾಕ್ಷ್ಯಗಳು ಅಲ್ಲಿ ಲಭ್ಯವಾಗಬಹುದು ಎಂದು ತಿಳಿಸಿದ್ದಾರೆ.
#DNAWithRahulSinha : लड़कियों में डॉ मुजम्मिल का ‘खौफ’ क्यों था? डॉ मुजम्मिल..आतंकी भी, ‘लव जिहादी’ भी!#DNA #DelhiBlast #TerroristDoctors #Muzammil | #ZeeNews @RahulSinhaTV pic.twitter.com/66ICTDEcyJ
— Zee News (@ZeeNews) November 15, 2025
ಡಾ. ಮೋನಿಕಾ ಅವರ ಅಭಿಪ್ರಾಯದಂತೆ,
ಅಲ್ಲಿನ ಕೆಲವು ವೈದ್ಯರು ಮುಸ್ಲಿಂ ವಿದ್ಯಾರ್ಥಿಗಳ ಮನಃಸ್ಥಿತಿಯನ್ನು ಬದಲಾಯಿಸಿ, ಅವರನ್ನು ಜಿಹಾದಿ ಸಂಘಟನೆಗಳಿಗೆ ಸೆಳೆಯುವ ಕೆಲಸ ಮಾಡುತ್ತಿದ್ದರು.
ಭಾರತೀಯ ಸೈನಿಕರ ಮರಣಕ್ಕೆ ಸಂತೋಷ ಆಚರಿಸಲಾಗುತ್ತಿತ್ತು!
ಡಾ. ಮೋನಿಕಾ ಅವರು ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ತಮ್ಮ ಆದೇಶಗಳನ್ನು ಪಾಲಿಸದಿದ್ದರೆ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವ ಬೆದರಿಕೆ ಹಾಕಲಾಗುತ್ತಿತ್ತು. ಡಾ. ಮುಜಮ್ಮಿಲ್ ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ಮಾನಸಿಕ ಒತ್ತಡ ಹೇರುತ್ತಿದ್ದರು. ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳನ್ನೇ ಗುರಿಯಾಗಿಸಲಾಗುತ್ತಿತ್ತು. ಹಲವು ವಿದ್ಯಾರ್ಥಿನಿಯರು ಒತ್ತಡದಿಂದ ನರಳುತ್ತಿದ್ದರು, ಕೆಲವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು, ಮತ್ತು ಒಬ್ಬಳು ಸಾವಿಗೀಡಾಗಿದ್ದಳು. ಭಾರತದ ಸೈನಿಕರು ಗಡಿಯಲ್ಲಿ ವೀರಮರಣ ಹೊಂದಿದಾಗ, ಈ ಜನರು ವಿಶ್ವವಿದ್ಯಾಲಯದಲ್ಲಿ ಸಂತೋಷ ವ್ಯಕ್ತಪಡಿಸುತ್ತಿದ್ದರು. ಈ ಭಯೋತ್ಪಾದಕ ವೈದ್ಯರು ಪ್ಯಾಲೆಸ್ಟೈನ್ ಮತ್ತು ಗಾಜಾಗೆ ಬೆಂಬಲ ನೀಡುತ್ತಿದ್ದರು ಎಂದು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ‘ಲವ್ ಜಿಹಾದ್’
ಡಾ. ಮೋನಿಕಾ ಅವರು, ಕಾಶ್ಮೀರದ ಪರಿಸ್ಥಿತಿ ಈಗಲೂ ಬಹಳ ಗಂಭೀರವಾಗಿದೆ. ವಿಶ್ವವಿದ್ಯಾಲಯದಲ್ಲಿನ ಉಗ್ರ ಪ್ರವೃತ್ತಿಯ ಜನರು ಪಾಕಿಸ್ತಾನದ ಜೊತೆಗೆ ಭಾರತ ವಿರೋಧಿ ಗುಂಪುಗಳನ್ನು ಬೆಂಬಲಿಸುತ್ತಿದ್ದರು. ಡಾ. ಮುಜಮ್ಮಿಲ್ ಮೊದಲಿನಿಂದಲೂ ಭಾರತ ವಿರೋಧಿ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದರು ಮತ್ತು ಹೆಚ್ಚಿನ ಪ್ರಮಾಣದಲ್ಲಿ ‘ಲವ್ ಜಿಹಾದ್’ ನಡೆಯುತ್ತಿದೆ ಎಂದು ಹೇಳುತ್ತಿದ್ದರು.
ಡಾ. ಮುಜಮ್ಮಿಲ್ ಮತ್ತು ಮೋನಿಕಾ ಒಂದೇ ವೈದ್ಯಕೀಯ ಕಾಲೇಜಿನಲ್ಲಿ ಓದಿದ್ದರು. ಕೆಂಪುಕೋಟೆ ಸ್ಫೋಟದ ಪಿತೂರಿಯ ಪ್ರಮುಖ ಆರೋಪಿಗಳಲ್ಲಿ ಮುಜಮ್ಮಿಲ್ ಕೂಡ ಒಬ್ಬನಾಗಿದ್ದಾನೆ. ಆತ ಡಾ. ಮೋನಿಕಾ ಅವರ ಕಿರಿಯ ವಿದ್ಯಾರ್ಥಿಯಾಗಿದ್ದ.
If they can hide an AK-47 in a hospital locker, imagine what is inside their homes.
And what kind of hospital hires such people?
Terrorists in white coats not doctors .#RedFort pic.twitter.com/HasesnqEr3— Dr.Monika Langeh (@drmonika_langeh) November 12, 2025
ಸಂಪಾದಕೀಯ ನಿಲುವುಇಂತಹ ಘಟನೆಗಳು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದರೂ ಪೊಲೀಸರಿಗೆ ಹೇಗೆ ತಿಳಿಯಲಿಲ್ಲ? ಇಂತಹ ಘಟನೆಗಳು ಇನ್ನು ಎಷ್ಟು ಇಸ್ಲಾಮಿಕ್ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿವೆ ಎಂಬುದನ್ನು ಈಗ ಪತ್ತೆ ಮಾಡಬೇಕು! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)