ಪಾಕಿಸ್ತಾನದ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ಅವರ ಹೇಳಿಕೆ

ಇಸ್ಲಾಮಾಬಾದ್ (ಪಾಕಿಸ್ತಾನ) – ಅಭಿವೃದ್ಧಿಯ ಅವಕಾಶಗಳನ್ನು ಪಾಕಿಸ್ತಾನದ ಆರ್ಥಿಕತೆಯು ಪದೇ-ಪದೇ ಕಳೆದುಕೊಂಡಿದೆ ಮತ್ತು ಪರಿವರ್ತಿತಗೊಳಿಸಬಹುದಾದ ‘ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್’ (‘CPEC’) ನ ಲಾಭ ಪಡೆಯಲು ವಿಫಲವಾಗಿದೆ. ಚೀನಾದ ಹೂಡಿಕೆಯ ಘನತೆಯನ್ನು ಇಮ್ರಾನ್ ಖಾನ್ ಅವರ ‘ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್’ ಸರಕಾರ ಹಾಳುಮಾಡಿದೆ ಎಂದು ಪಾಕಿಸ್ತಾನದ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ಅವರು ಒಂದು ಕಾರ್ಯಕ್ರಮದಲ್ಲಿ ಆರೋಪಿಸಿದರು.
ಈ ಯೋಜನೆಗಾಗಿ ಚೀನಾ ಇದುವರೆಗೆ ಶತಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಸಿಪಿಇಸಿ ಚೀನಾದ ‘ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್’ (BRI) ಎಂಬ ಜಾಗತಿಕ ಮಹತ್ವದ ಯೋಜನೆಯ ಒಂದು ಭಾಗವಾಗಿದ್ದು, ಈ ಯೋಜನೆಯ ಮೂಲಕ ಚೀನಾ ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ತನ್ನ ಕನಸನ್ನು ಪೂರೈಸಲು ಬಯಸುತ್ತಿದೆ.
2018 ರಿಂದ ಈ ಯೋಜನೆಯಲ್ಲಿ ಯಾವುದೇ ಗಮನಾರ್ಹ ಪ್ರಗತಿಯಾಗಿಲ್ಲ.
ಸಿಪಿಇಸಿ ಯಿಂದ ಪಾಕಿಸ್ತಾನಕ್ಕೆ ಕೆಲವು ಸಣ್ಣ-ಪುಟ್ಟ ಪ್ರಯೋಜನಗಳು ದೊರೆತಿವೆ; ಆದರೆ ದೀರ್ಘಕಾಲಿಕ ಉದ್ದೇಶ ಈಡೇರಲಿಲ್ಲ. ಸಿಪಿಇಸಿಯ ಎರಡನೇ ಹಂತವನ್ನು ಸಹ ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ‘ಚೀನೀ ಉದ್ಯಮಗಳನ್ನು ಪಾಕಿಸ್ತಾನಕ್ಕೆ ಸ್ಥಳಾಂತರಿಸುವುದು ಮತ್ತು ದೇಶದ ರಫ್ತು ಹೆಚ್ಚಿಸುವುದಕ್ಕಾಗಿ ಕೈಗಾರಿಕೀಕರಣ ಮಾಡುವುದು’ ಈ ಯೋಜನೆಯ ಎರಡನೇ ಹಂತದ ಉದ್ದೇಶವಾಗಿತ್ತು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara