|

ನವದೆಹಲಿ – ಕೆಂಪು ಕೋಟೆಯ ಬಳಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದ ತನಿಖೆಯಲ್ಲಿ ಹೊಸ ಹೊಸ ಸುಳಿವುಗಳು ಸಿಗುತ್ತಿವೆ. ಭಯೋತ್ಪಾದಕರ ಜಾಲವು ಪಾಕಿಸ್ತಾನವನ್ನು ಮೀರಿ ಮಾಲ್ಡೀವ್ಸ್‌ವರೆಗೆ ತಲುಪಿದೆ ಎಂದು ತಿಳಿದುಬಂದಿದೆ. ಹೊಸ ಮಾಹಿತಿಯ ಪ್ರಕಾರ, ಡಾ.ಆದಿಲ್ ಅಹ್ಮದ್ ಅವರ ಸಹೋದರ ಮುಝಫ್ಫರ್, ದುಬೈನಿಂದ ಭಯೋತ್ಪಾದಕರಿಗೆ ನಿರ್ದೇಶನಗಳನ್ನು ನೀಡುತ್ತಿದ್ದನು. ಆತ 5 ವರ್ಷಗಳಿಂದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದನೆಂದು ತನಿಖೆಯಲ್ಲಿ ತಿಳಿದು ಬಂದಿದೆ. ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿ ಮೂಲದ ಸುಮಾರು 200 ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಡಾ.ಶಾಹೀನ್ ನಿಯಮಿತವಾಗಿ 30 ರಿಂದ 40 ವೈದ್ಯರೊಂದಿಗೆ ಸಂಪರ್ಕದಲ್ಲಿರುತ್ತಿದ್ದಳು.
The Delhi Bomb Blast Probe: Over 200 Kashmiri-origin doctors and Medicos in UP are under scrutiny – 15 from Al-Falah University are on the run.
When such a large number of doctors face terror-related suspicion, what message does it send?
Where are the seculars,… https://t.co/y7eExgpQL9 pic.twitter.com/SWVSTEtSJ0
— Sanatan Prabhat (@SanatanPrabhat) November 15, 2025
ಆಲ್-ಫಲಾಹ್ ವಿಶ್ವವಿದ್ಯಾಲಯದ 15 ವೈದ್ಯರು ನಾಪತ್ತೆ
ಹರಿಯಾಣದ ಆಲ್-ಫಲಾಹ್ ವಿಶ್ವವಿದ್ಯಾಲಯದ 15 ವೈದ್ಯರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಪರಾರಿಯಾಗಿರುವ ವೈದ್ಯರು ಪ್ರಮುಖ ಆರೋಪಿ ಮುಝಮ್ಮಿಲ್ ನೊಂದಿಗೆ ಸಂಪರ್ಕದಲ್ಲಿದ್ದರು. ಆತನ ದೂರವಾಣಿ ಕರೆಗಳ ವಿವರಗಳಿಂದ ಅನೇಕ ಜನರು ಪದೇ-ಪದೇ ಸಂಪರ್ಕದಲ್ಲಿರುವುದು ಕಂಡುಬಂದಿದೆ. ಪೊಲೀಸರು ವಿಚಾರಣೆಗಾಗಿ ಅನೇಕರನ್ನು ಸಂಪರ್ಕಿಸಿದಾಗ ಅವರ ಮೊಬೈಲ್ ಫೋನ್‌ಗಳು ಸ್ಥಗಿತಗೊಂಡಿದ್ದವು. ಪೊಲೀಸರು ಅವರನ್ನು ವಿಚಾರಿಸಲು ವಿಶ್ವವಿದ್ಯಾಲಯಕ್ಕೆ ತಲುಪಿದಾಗ ವೈದ್ಯರೆಲ್ಲರೂ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
ಶಾಹೀನ್ ಮತ್ತು ಪರ್ವೇಜ್ ಸಂಪರ್ಕದಲ್ಲಿದ್ದವರಿಗಾಗಿ ಹುಡುಕಾಟ
ಡಾ. ಶಾಹೀನ್ ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಸಂಪರ್ಕ ಜಾಲವನ್ನು ನಿರ್ಮಿಸಿದ್ದಳು. ಪಾಕಿಸ್ತಾನ ಸೇನೆಯ ವೈದ್ಯರು ಸೇರಿದಂತೆ ಹಲವು ಕಾಶ್ಮೀರಿ ವೈದ್ಯರು ಮತ್ತು ವಿದ್ಯಾರ್ಥಿಗಳೊಂದಿಗೆ ಅವಳು ಸಂಪರ್ಕ ಹೊಂದಿದ್ದಳು.
ಶಾಹೀನ್ ಮತ್ತು ಪರ್ವೇಜ್ ಅವರ ಆಪ್ತರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪರ್ವೇಜ್‌ಗೆ ಲಕ್ಷ್ಮಣಪುರಿಯಲ್ಲಿ ವಾಸಿಸುತ್ತಿರುವ ಕಾಶ್ಮೀರದ ಜನರೊಂದಿಗೆ ಸಂಬಂಧವಿರುವುದು ಬೆಳಕಿಗೆ ಬಂದಿದೆ. ಹಾಗಾಗಿ, ಲಕ್ಷಣಪುರಿಯ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.
ದೆಹಲಿ ಸ್ಫೋಟಕ್ಕೆ ಬಳಸಿದ ಕಾರನ್ನು 2 ಲಕ್ಷಕ್ಕೆ ಖರೀದಿಸಲಾಗಿತ್ತು
ಕೆಂಪು ಕೋಟೆಯ ಸಮೀಪ ನಡೆದ ಸ್ಫೋಟಕ್ಕಾಗಿ ಬಳಸಲಾದ ‘ಐ-20’ ಕಾರನ್ನು ಫರಿದಾಬಾದ್ ನ ವಾಹನ ವಿತರಕರಿಂದ 2 ಲಕ್ಷ ರೂಪಾಯಿ ನಗದು ನೀಡಿ ಖರೀದಿಸಲಾಗಿತ್ತು. ಈ ಪ್ರಕರಣದಲ್ಲಿ ನೂಹ್ ನಿಂದ ಇಬ್ಬರು ಮತ್ತು ಬಂಗಾಳದಿಂದ ಒಬ್ಬ ವೈದ್ಯನನ್ನು ಬಂಧಿಸಲಾಗಿದೆ.
5 ವರ್ಷಗಳಿಂದ ಸಕ್ರಿಯವಾಗಿತ್ತು ಭಯೋತ್ಪಾದಕ ಗುಂಪು
ದೆಹಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರ ಗುಂಪು 5 ವರ್ಷಗಳ ಹಿಂದೆಯೇ ರಚನೆಯಾಗಿತ್ತು. ಈ ಗುಂಪಿನ ಪ್ರತಿ ಸದಸ್ಯನು ತನ್ನ ಗುಂಪಿನ ನಾಯಕನಾಗಿದ್ದ; ಆದರೆ ನಿಜವಾದ ನಾಯಕ ಡಾ. ಮುಝಫ್ಫರ್ ಅಲಿ ರಾಠೆರ್. ಈತ ಡಾ.ಆದಿಲ್ ನ ಸಹೋದರ. ಈ ಗುಂಪಿನಲ್ಲಿ ಭಾಗಿಯಾದ ವೈದ್ಯರು 3 ವರ್ಷಗಳಿಂದ ಸ್ಫೋಟಕಗಳನ್ನು ಸಂಗ್ರಹಿಸುತ್ತಿದ್ದರು. ಈ ಉಗ್ರರು ಪ್ರತಿ ತಿಂಗಳು ಒಂದು ಹೊಸ ‘ಚಾಟ್ ಗ್ರೂಪ್’ (ಸಾಮಾಜಿಕ ಮಾಧ್ಯಮಗಳ ಮೂಲಕ ಸಂದೇಶಗಳ ವಿನಿಮಯ) ರಚಿಸುತ್ತಿದ್ದರು. ಅವರು ಬಾಂಗ್ಲಾದೇಶ, ಅಫ್ಘಾನಿಸ್ತಾನ, ದುಬೈ ಮತ್ತು ಸೌದಿ ಅರೇಬಿಯಾಕ್ಕೆ ಹೋಗಿ ಪರಸ್ಪರ ಭೇಟಿಯಾಗುತ್ತಿದ್ದರು. ಅಲ್ಲಿರುವ ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಸಹ ಈ ಉಗ್ರರ ಸಂಪರ್ಕದಲ್ಲಿದ್ದರು.
ಶಿಕ್ಷಣದ ಹೆಸರಿನಲ್ಲಿ ಬ್ರೈನ್‌ವಾಶ್
ಈ ಪ್ರಕರಣದಲ್ಲಿ ಬಹಿರಂಗಗೊಂಡಿರುವ ಅನೇಕ ವೈದ್ಯರು ಕಳೆದ ಎರಡು ವರ್ಷಗಳಲ್ಲಿ ಟರ್ಕಿ, ಸೌದಿ ಅರೇಬಿಯಾ, ಸಂಯುಕ್ತ ಅರಬ್ ಎಮಿರೇಟ್ಸ್, ಬಾಂಗ್ಲಾದೇಶ ಮತ್ತು ಮಲೇಷಿಯಾಗೆ ಹೋಗಿದ್ದರು. ದೆಹಲಿಯ ಖಾಸಗಿ ಸಂಸ್ಥೆಗಳು ಶೈಕ್ಷಣಿಕ ವೀಸಾದ (ಒಂದು ದೇಶವನ್ನು ಪ್ರವೇಶಿಸಲು, ತೊರೆಯಲು ಅಥವಾ ಪ್ರಯಾಣಿಸಲು ಅನುಮತಿ ನೀಡುವ ಅಧಿಕೃತ ದಾಖಲೆ ಅಥವಾ ಮೊಹರು) ಮೂಲಕ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದವು. ಈ ಸಂಸ್ಥೆಗಳನ್ನೂ ಸಹ ವಿಚಾರಣೆ ಮಾಡಲಾಗುತ್ತಿದೆ. ‘ಭಯೋತ್ಪಾದನೆಯ ಅಧ್ಯಯನ: ಸೈನ್ಸ್ ಆಫ್ ಶಹಾದತ್’, ‘ಡ್ಯೂಟಿ ಇನ್ ಫೇಥ್’ ಮತ್ತು ‘ಹೀಲಿಂಗ್ ದಿ ಬಿಲೀವರ್ಸ್’ ಶೀರ್ಷಿಕೆಗಳಿರುವ ಸಂರಕ್ಷಿತ ಫೈಲ್‌ಗಳು ಇರ್ಫಾನ್ ಮತ್ತು ಡಾ.ಮುಝಮ್ಮಿಲ್ ಗನಯಿ ಅವರ ಸಾಮಗ್ರಿಗಳಲ್ಲಿ ಕಂಡುಬಂದಿವೆ. ಯುವ ವೈದ್ಯರ ಮನ ಬದಲಾವಣೆ ಮಾಡುವ ಸಲುವಾಗಿ ಈ ಫೈಲ್‌ಗಳನ್ನು ಬಳಸಲಾಗುತ್ತಿತ್ತು.
ನುಹ್ ನಲ್ಲಿ ಇಬ್ಬರು ನಾಯಕರ ವಿಚಾರಣೆ
ಹರಿಯಾಣದ ನುಹ್ ಜಿಲ್ಲೆಯ ಇಬ್ಬರು ಮುಖಂಡಲ ಮೇಲೆ ಸಂಶಯ ವ್ಯಕ್ತಪಡಿಸಲಾಗಿದೆ. ಫರಿದಾಬಾದ್ ನಿಂದ ಬಂಧಿತನಾದ ವೈದ್ಯನೊಂದಿಗೆ ಈ ಮುಖಂಡರ ಸಂಬಂಧವಿರುವ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಆಲ್-ಫಲಾಹ್ ವಿಶ್ವವಿದ್ಯಾಲಯದಿಂದ ಬಂಧಿತನಾದ ಡಾ. ಮುಝಮ್ಮಿಲ್ ಈ ಮುಖಂಡರೊಂದಿಗೆ ಉತ್ತಮ ಸಂಬಂಧ ಹೊಂದಿದ್ದನು. ಆರೋಪಿ ಮುಝಮ್ಮಿಲ್ ಈ ಮುಖಂಡರಿಗೆ ಅವರ ಅನಾರೋಗ್ಯದ ವೇಳೆ ಚಿಕಿತ್ಸೆ ನೀಡಿದ್ದನು. ಇವರಿಬ್ಬರ ನಡುವಿನ ಸಂಬಂಧ, ಪತ್ರವ್ಯವಹಾರ ಮತ್ತು ಸಭೆಗಳ ಸರಣಿ ಇನ್ನೂ ಮುಂದುವರಿದಿದೆ. ಈ ಸಂಬಂಧಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಲ್-ಫಲಾಹ್ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿ ನುಹ್ ನ ಶಾಸಕರ ಪಾತ್ರವನ್ನೂ ಕೂಡ ತನಿಖೆ ಮಾಡಲಾಗುತ್ತಿದೆ.
ನುಹ್‌ನ ಇಬ್ಬರು ವೈದ್ಯರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಬಂಧಿತರಲ್ಲಿ ಒಬ್ಬ ವೈದ್ಯ ಎಂಬಿಬಿಎಸ್ ಶಿಕ್ಷಣ ಪೂರ್ಣಗೊಳಿಸಿದ ನಂತರ ಆಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಅಪ್ರೆಂಟಿಸ್ ಶಿಪ್ (ಪ್ರಶಿಕ್ಷಣಾರ್ಥಿ ತರಬೇತಿ) ಮಾಡಿದ್ದನು. ಇನ್ನೊಬ್ಬನು ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಯಾಗಿದ್ದನು.
ದೇಶ ತೊರೆಯುವ ಸಿದ್ಧತೆಯಲ್ಲಿದ್ದಳು ಡಾ. ಶಾಹೀನ್
ಬಂಧಿತ ಮಹಿಳಾ ವೈದ್ಯೆ ಶಾಹೀನ ಬಾಂಬ್ ಸ್ಫೋಟದ ನಂತರ ದೇಶದಿಂದ ಪಲಾಯನ ಮಾಡುವ ಸಿದ್ಧತೆಯಲ್ಲಿದ್ದಳು. ದೆಹಲಿ ಬಾಂಬ್ ಸ್ಫೋಟಕ್ಕೆ 7 ದಿನಗಳ ಮೊದಲು ಅವಳು ತನ್ನ ಪಾಸ್ ಪೋರ್ಟ್ ಅನ್ನು ಪರಿಶೀಲಿಸಿಕೊಂಡಿದ್ದಳು. ಅವಳು ದುಬೈಗೆ ಹೋಗಲು ಪ್ರಯತ್ನಿಸುತ್ತಿದ್ದಳು. ಡಾ. ಶಾಹೀನ್ ಗೆ ‘ಮೇಡಂ ಸರ್ಜನ್’ ಎಂಬ ಸಂಕೇತನಾಮ ನೀಡಲಾಗಿತ್ತು. ಜೈಷ್-ಎ-ಮೊಹಮ್ಮದ್‌ಗೆ ಸಂಬಂಧಿಸಿದ ಎಲ್ಲರೂ ಅವಳನ್ನು ಇದೇ ಹೆಸರಿನಿಂದ ಕರೆಯುತ್ತಿದ್ದರು. ಮುಸ್ಲಿಂ ಹುಡುಗಿಯರನ್ನು ‘ಜೈಷ್’ಗೆ ಸೇರಿಸಿಕೊಂಡು, ಅವರನ್ನು ಭಯೋತ್ಪಾದಕ ದಾಳಿಗಳಿಗೆ ಸಿದ್ಧಪಡಿಸುವ ಯೋಜನೆಯನ್ನು ಅವಳು ರೂಪಿಸಿದ್ದಳು. ಶಾಹೀನ್ ನ ದಿನಚರಿಯಲ್ಲಿ (ಡೈರಿ) ಜೈಷ್-ಎ-ಮೊಹಮ್ಮದ್‌ನ ಜಾಲದ ಬಗ್ಗೆ ಮಾಹಿತಿಗಳಿದ್ದವು. 25 ರಿಂದ 30 ವ್ಯಕ್ತಿಗಳನ್ನು ಒಳಗೊಂಡಿರುವ ಈ ಜಾಲವು ಜಮ್ಮು-ಕಾಶ್ಮೀರ ಮತ್ತು ಫರಿದಾಬಾದ್ ವರೆಗೆ ಸಂಪರ್ಕ ಹೊಂದಿದೆ.
4 ವೈದ್ಯರ ನೋಂದಣಿ ರದ್ದು
ಈ ಪ್ರಕರಣದಲ್ಲಿ ಬಂಧಿತರಾಗಿರುವ ಡಾ. ಮುಝಫ್ಫರ್ ಅಹ್ಮದ್, ಡಾ. ಆದಿಲ್ ಅಹ್ಮದ್ ರಾಠೆರ್, ಡಾ. ಮುಝಮ್ಮಿಲ್ ಶಕೀಲ್ ಮತ್ತು ಡಾ. ಶಾಹೀನ್ ಅವರ ನೋಂದಣಿಯನ್ನು ‘ರಾಷ್ಟ್ರೀಯ ವೈದ್ಯಕೀಯ ಮಂಡಳಿ’ ರದ್ದುಗೊಳಿಸಿದೆ.
ದೆಹಲಿಯ ಸ್ಫೋಟಕ್ಕೆ ಕೇವಲ ೨ ಕೆ.ಜಿ. ಸ್ಫೋಟಕಗಳ ಬಳಕೆ
ದೆಹಲಿಯ ಸ್ಫೋಟದಲ್ಲಿ ಕೇವಲ ೨ ಕೆ.ಜಿ. ಅಮೋನಿಯಂ ನೈಟ್ರೇಟ್ ಬಳಸಲಾಗಿದೆ ಎಂದು ತನಿಖೆಯಿಂದ ಬಹಿರಂಗವಾಗಿದೆ. ಬಾಂಬ್ ತಯಾರಿಸಲು ಅಮೋನಿಯಂ, ಪೆಟ್ರೋಲಿಯಂ ಇಂಧನ ಮತ್ತು ಡೇಟೋನೇಟರ್ ಬಳಸಲಾಗಿದೆ. ಇವುಗಳ ಸಹಾಯದಿಂದ ಬಾಂಬ್ ತಯಾರಿಸಲು ಕೇವಲ ೫ ರಿಂದ ೧೦ ನಿಮಿಷಗಳು ಬೇಕಾಗುತ್ತದೆ. ಈ ಸ್ಫೋಟದಲ್ಲಿ ಸಾವನ್ನಪ್ಪಿರುವ ಡಾ. ಉಮರ್ ಎಂಬಾತ ಸುನೇರಿ ಮಸೀದಿ ಬಳಿಯ ವಾಹನ ನಿಲುಗಡೆಯ ಸ್ಥಳದಲ್ಲಿ ನಾಲ್ಕು ಚಕ್ರದ ವಾಹನದಲ್ಲಿ ೩ ಗಂಟೆ ನಿಂತಿರುವಾಗಲೇ ಈ ಬಾಂಬ್‌ಅನ್ನು ತಯಾರಿಸಿರುವ ಸಾಧ್ಯತೆಯಿದೆ. |
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!