
ಬೀಜಿಂಗ (ಚೀನಾ): ಜಪಾನ ತೈವಾನನಲ್ಲಿ ಮಧ್ಯಪ್ರವೇಶಿಸಲು ಮಿಲಿಟರಿ ಶಕ್ತಿಯನ್ನು ಆರಿಸಿಕೊಂಡರೆ, ಅದರ ಪರಿಣಾಮಗಳು ಅತ್ಯಂತ ಗಂಭೀರವಾಗಿರುತ್ತವೆ ಮತ್ತು ಅದು ಚೀನೀ ಸೈನ್ಯದಿಂದ ತೀವ್ರ ಪ್ರತ್ಯುತ್ತರವನ್ನು ಎದುರಿಸಬೇಕಾಗುತ್ತದೆ, ಎಂದು ಚೀನಾದ ರಕ್ಷಣಾ ಸಚಿವಾಲಯವು ಜಪಾನ್‌ಗೆ ಎಚ್ಚರಿಕೆ ನೀಡಿದೆ. ಇದರ ನಂತರ, ಜಪಾನ ಸರಕಾರ ಚೀನಾದ ರಾಯಭಾರಿಯನ್ನು ಕರೆಸಿ ಈ ಹೇಳಿಕೆಯ ಬಗ್ಗೆ ಕಠಿಣ ಆಕ್ಷೇಪ ಎತ್ತಿದೆ.
ಜಪಾನಿನ ಪ್ರಧಾನಮಂತ್ರಿ ಏನು ಹೇಳಿದ್ದರು?
ಜಪಾನಿನ ಪ್ರಧಾನ ಮಂತ್ರಿ ಸಾನೆ ತಾಕಾಇಚಿ ಅವರು ಕಳೆದ ವಾರ ಸಂಸತ್ತಿನಲ್ಲಿ ಮಾತನಾಡುತ್ತಿರುವಾಗ, ‘ತೈವಾನನ ಮೇಲೆ ಸಂಭವನೀಯ ಚೀನೀ ಆಕ್ರಮಣವು ಜಪಾನಿನ ಅಸ್ತಿತ್ವಕ್ಕೆ ಅಪಾಯವನ್ನುಂಟು ಮಾಡಬಹುದು ಮತ್ತು ಅದಕ್ಕೆ ಜಪಾನನಿಂದ ಮಿಲಿಟರಿ ಪ್ರತ್ಯುತ್ತರ ಸಿಗಬಹುದು’ ಎಂದು ಹೇಳಿಕೆ ನೀಡಿದ್ದರು. ಜಪಾನಿನ ಒಸಾಕಾದಲ್ಲಿರುವ ಚೀನಾದ ಮಹಾ ವಾಣಿಜ್ಯದೂತ ಝೂ ಜಿಯಾನ್ ಅವರು ಈ ಹೇಳಿಕೆಯ ನಂತರ ಒಂದು ಸುದ್ದಿಯ ಲಿಂಕ್ ಅನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡಿ ಅತ್ಯಂತ ಕಠಿಣ ಟಿಪ್ಪಣಿ ಮಾಡಿದ್ದರು. ವಿವಾದ ಹೆಚ್ಚಾದ ನಂತರ ಅವರು ಅದನ್ನು ತೆಗೆದುಹಾಕಿದರು. |
ಜಪಾನ ಚೀನಾ ರಾಯಭಾರಿಯನ್ನು ಕರೆಸಿ ಖಂಡನೆ ವ್ಯಕ್ತಪಡಿಸಿತು!
ಜಪಾನಿನ ವಿದೇಶಾಂಗ ಸಚಿವಾಲಯವು ಈ ಟಿಪ್ಪಣಿಯನ್ನು ‘ಅತ್ಯಂತ ಅನುಚಿತ’ ಎಂದು ಕರೆದು ಜಪಾನಿನಲ್ಲಿರುವ ಚೀನೀ ರಾಯಭಾರಿಯನ್ನು ಕರೆಸಿ ಕಠಿಣ ಖಂಡನೆಯನ್ನು ದಾಖಲಿಸಿತು. ಕೆಲವು ಹಿರಿಯ ಜಪಾನಿ ನಾಯಕರು ಆ ಚೀನೀ ಅಧಿಕಾರಿಯನ್ನು ದೇಶದಿಂದ ವಜಾಗೊಳಿಸುವಂತೆ ಸಹ ಬೇಡಿಕೆ ಇಟ್ಟಿದ್ದಾರೆ.
ಚೀನಾದಿಂದಲೂ ಜಪಾನ ರಾಯಭಾರಿಯ ಬಳಿ ಖಂಡನೆ ವ್ಯಕ್ತ
ಚೀನಾದ ವಿದೇಶಾಂಗ ಸಚಿವಾಲಯವು ಸಹ ಬೀಜಿಂಗ್ ನಲ್ಲಿರುವ ಜಪಾನಿನ ರಾಯಭಾರಿಯನ್ನು ಕರೆಸಿ ಪ್ರಧಾನಿ ತಾಕಾಇಚಿ ಅವರ ಹೇಳಿಕೆಯ ಬಗ್ಗೆ ಕಠಿಣ ಆಕ್ಷೇಪ ಎತ್ತಿದೆ.

ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers