‘ಹಿಂದೂ ಧರ್ಮದಲ್ಲಿಯೂ ಭಯೋತ್ಪಾದಕರಿರುತ್ತಾರೆ’ ಎಂದು ಹೇಳಿದ ಪೊಲೀಸ್ ಇನ್‌ಸ್ಪೆಕ್ಟರ್ ನರೇಂದ್ರ ಶರ್ಮಾ ವಿರುದ್ಧ ಕ್ರಮ Police Inspector Statement Terrorism

ಸಹಾರನ್‌ಪುರ (ಉತ್ತರ ಪ್ರದೇಶ): ದೇವಬಂದ್ ಪೊಲೀಸ್ ಠಾಣೆಯ ಘಟನೆ

ಸಹಾರನ್‌ಪುರ (ಉತ್ತರ ಪ್ರದೇಶ) – ತಪ್ಪು ಮಾಡುವವರು ಯಾರೇ ಆಗಿರಲಿ ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ. ಹಿಂದೂ ಧರ್ಮದಲ್ಲಿಯೂ ಭಯೋತ್ಪಾದಕರಿದ್ದಾರೆ. ನಕ್ಸಲೀಯರು ಹಿಂದೂ ಧರ್ಮಕ್ಕೆ ಸೇರಿದವರು, ಕೆಲವು ಭಯೋತ್ಪಾದಕರು ನೌಕಾದಳ ಮತ್ತು ಭೂಸೇನೆಯಿಂದಲೂ ಸಿಕ್ಕಿಬಿದ್ದಿದ್ದಾರೆ, ಮತ್ತು ಪಂಜಾಬ್‌ನಲ್ಲಿಯೂ ಹಿಂದೂ ಭಯೋತ್ಪಾದಕರು ಬಯಲಾಗಿದ್ದಾರೆ. ಹಾಗಾಗಿ, ಕೇವಲ ಮುಸ್ಲಿಮರೇ ಭಯೋತ್ಪಾದಕರು ಎಂದು ಭಾವಿಸುವುದು ತಪ್ಪು ಎಂದು ಹೇಳಿಕೆ ನೀಡಿದ್ದ ದೇವಬಂದ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನರೇಂದ್ರ ಶರ್ಮಾ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರ ಈ ಹೇಳಿಕೆಯ ವಿಡಿಯೋ ಪ್ರಸಾರವಾದ ನಂತರ, ಅವರ ವಿರುದ್ಧ ಕೇವಲ ಹಾಜರಾತಿ ತೋರಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದ್ದು, ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ.

ಈ ವಿಡಿಯೋದ ಬಗ್ಗೆ ಶರ್ಮಾ ಅವರು ಸ್ಪಷ್ಟೀಕರಣ ನೀಡಲು ಪ್ರಯತ್ನಿಸಿದರು.  “ಈ ವಿಡಿಯೋ ಶಾಂತಿ ಸಮಿತಿಯ ಸಭೆಯದ್ದಾಗಿದ್ದು, ಅದರಲ್ಲಿ ಅವರು ಜನರಿಗೆ ತಿಳಿಹೇಳುತ್ತಿದ್ದರು. ಕೆಲವರು ಉದ್ದೇಶಪೂರ್ವಕವಾಗಿ ವಿಡಿಯೋದಲ್ಲಿ ಬದಲಾವಣೆ ಮಾಡಿ ಅದನ್ನು ಪ್ರಸಾರ ಮಾಡಿದ್ದಾರೆ. ಇದರಿಂದಾಗಿ ತಪ್ಪಾದ ಅರ್ಥವನ್ನು ಪಡೆಯಲಾಗುತ್ತಿದೆ. ನಾನು ಯಾರ ಮನಸ್ಸಿಗೂ ನೋವಾಗುವಂತಹದ್ದನ್ನು ಮಾತನಾಡಿಲ್ಲ” ಎಂದು ಶರ್ಮಾ ಹೇಳಿದರು.

ಸಂಪಾದಕೀಯ ನಿಲುವು

ಭಾರತದ ಯಾವ ಪೊಲೀಸ್ ಅಧಿಕಾರಿಯೂ ಕೂಡ ‘ದೇಶದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಮುಸ್ಲಿಂ ಭಯೋತ್ಪಾದಕರಿರುತ್ತಾರೆ’ ಎಂದು ಹೇಳುವ ಧೈರ್ಯ ಮಾಡಿಲ್ಲ; ಆದರೆ, ಪೊಲೀಸರಲ್ಲೊಬ್ಬ ‘ಹಿಂದೂಗಳೂ ಭಯೋತ್ಪಾದಕರಿರುತ್ತಾರೆ’ ಎಂದು ಹೇಳುವ ಧೈರ್ಯ ಮಾಡುತ್ತಾರೆಂದರೆ, ಹಿಂದೂಗಳಲ್ಲಿ ಭಯೋತ್ಪಾದಕರಿಲ್ಲ ಎಂಬುದು ಸ್ಪಷ್ಟವಾಗುತ್ತದೆ!