ಗುಜರಾತ್‌ನಲ್ಲಿ ಬಂಧಿತರಾದ 3 ಜಿಹಾದಿ ಭಯೋತ್ಪಾದಕರಿಂದ ಮಾಹಿತಿ ಬಹಿರಂಗ

ಕರ್ಣಾವತಿ (ಗುಜರಾತ) – ಗುಜರಾತ ಭಯೋತ್ಪಾದನಾ ನಿಗ್ರಹ ದಳದಿಂದ ಬಂಧಿತರಾದ ಡಾ. ಮೊಹಿಯುದ್ದೀನ್, ಸೊಹೇಲ್ ಮತ್ತು ಆಜಾದ್ ಸೈಫಿ ಎಂಬ 3 ಜಿಹಾದಿ ಭಯೋತ್ಪಾದಕರ ವಿಚಾರಣೆಯಲ್ಲಿ, ಅವರು ನವದೆಹಲಿ, ಲಕ್ಷ್ಮಣಪುರಿ (ಉತ್ತರಪ್ರದೇಶ) ಮತ್ತು ಕರ್ಣಾವತಿಯ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರನ್ನು ಪ್ರಸಾದದ ಮೂಲಕ ಗುರಿಯಾಗಿಸಲು ಭೀಕರ ಯೋಜನೆಯನ್ನು ರೂಪಿಸುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಅವರು ಪ್ರಸಾದದಲ್ಲಿ ಅತ್ಯಂತ ಅಪಾಯಕಾರಿ ‘ರಿಸಿನ್’ ಎಂಬ ವಿಷವನ್ನು ಬೆರೆಸಿ ದೊಡ್ಡ ಪ್ರಮಾಣದಲ್ಲಿ ಜನರ ಜೀವ ತೆಗೆಯಲು ಸಿದ್ಧತೆ ನಡೆಸುತ್ತಿದ್ದರು. ಈ ಮೂವರೊಂದಿಗೆ ಇನ್ನೂ ಹೆಚ್ಚಿನ ಜನರು ಈ ಸಂಚಿನಲ್ಲಿ ಭಾಗಿಯಾಗಿರಬಹುದು ಎಂದು ದಳ ಶಂಕಿಸಿದೆ.
‘ರಿಸಿನ್’ ವಿಷ ಮತ್ತು ಆನ್ ಲೈನ್ ತರಬೇತಿ

ದಳದ ಮಾಹಿತಿಯ ಪ್ರಕಾರ, ಈ ಮೂವರು ನೇರವಾಗಿ ಅಫ್ಘಾನಿಸ್ತಾನದಲ್ಲಿರುವ ಅವರ ಸೂತ್ರಧಾರ ‘ಅಬೂ ಖದೀಜಾ’ನೊಂದಿಗೆ ಸಂಪರ್ಕದಲ್ಲಿದ್ದರು. ಅವನು ಅವರಿಗೆ ದೂರವಾಣಿ ಮೂಲಕ ‘ರಿಸಿನ್’ ತಯಾರಿಸುವ ಸಂಪೂರ್ಣ ವಿಧಾನವನ್ನು ತಿಳಿಸಿದ್ದನು, ಹಾಗೂ ಲಕ್ಷ್ಮಣಪುರಿಯ ಹನುಮಾನ್ ಸೇತು ದೇವಸ್ಥಾನ, ಕರ್ಣಾವತಿಯ ಜಗನ್ನಾಥ ದೇವಸ್ಥಾನ ಮತ್ತು ದೆಹಲಿಯ ಪ್ರಮುಖ ದೇವಸ್ಥಾನಗಳ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಕಳುಹಿಸಿ ಸಮೀಕ್ಷೆ ಮಾಡಿಸಿದ್ದನು.
‘ಜೈವಿಕ ಅಸ್ತ್ರ’ವಾಗಿ ಬಳಕೆ
‘ರಿಸಿನ್’ ಎಣ್ಣೆಬೀಜದಿಂದ (ಔಡಲ ಬೀಜ) ಉತ್ಪತ್ತಿಯಾಗುವ ಅತ್ಯಂತ ಅಪಾಯಕಾರಿ ದ್ರವ್ಯವಾಗಿದೆ. ತಜ್ಞರ ಪ್ರಕಾರ, ಇದರ ಕೇವಲ 1 ಮಿಲಿಗ್ರಾಂ ಪ್ರಮಾಣವೂ ಮನುಷ್ಯನನ್ನು ಕೊಲ್ಲಲು ಸಾಕಾಗುತ್ತದೆ. ಬಂಧನದ ಸಮಯದಲ್ಲಿ ಅವರ ಬಳಿ ರಿಸಿನ್ ಸಂಗ್ರಹವೂ ಪತ್ತೆಯಾಗಿದೆ. ಪೊಲೀಸರು ಇದನ್ನು ‘ಜೈವಿಕ ಅಸ್ತ್ರ’ ಎಂದು ಪರಿಗಣಿಸುತ್ತಿದ್ದಾರೆ. ಈ ಮಾದರಿಯನ್ನು ಪರೀಕ್ಷೆಗಾಗಿ ನ್ಯಾಯವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪ್ರಸಾದದಲ್ಲಿ ವಿಷ ಬೆರೆಸುವ ತರಬೇತಿ
ಭಯೋತ್ಪಾದಕರು, ಆನ್‌ಲೈನ್ ತರಬೇತಿಯ ಮೂಲಕ ಅವರಿಗೆ ಪ್ರಸಾದದಲ್ಲಿ ‘ರಿಸಿನ್’ ಅನ್ನು ಗುರುತಿಸಲಾಗದ ರೀತಿಯಲ್ಲಿ ಬೆರೆಸುವ ವಿಧಾನವನ್ನು ಕಲಿಸಲಾಗಿತ್ತು. ಅವರ ಸೂತ್ರಧಾರನು, ಧಾರ್ಮಿಕ ಸ್ಥಳಗಳ ಮೇಲೆ ಆಕ್ರಮಣ ಮಾಡಿ ಭಯವನ್ನು ಸೃಷ್ಟಿಸಿ, ಸಮಾಜದಲ್ಲಿ ಒಡಕು ಮೂಡಿಸುವಂತೆ ಆದೇಶ ನೀಡಿದ್ದನು.
ಉತ್ತರಪ್ರದೇಶದವರೆಗೆ ಹರಡಿದ ಜಾಲ
ಭಯೋತ್ಪಾದನಾ ನಿಗ್ರಹ ದಳದ ತನಿಖೆಯ ಪ್ರಕಾರ, ಈ ಆಕ್ರಮಣವನ್ನು ಯಾವುದಾದರೂ ದೊಡ್ಡ ಉತ್ಸವ ಅಥವಾ ಜಾತ್ರೆಯ ಸಮಯದಲ್ಲಿ ನಡೆಸಲು ಯೋಜನೆ ಮಾಡಲಾಗಿತ್ತು. ಡಾ. ಮೊಹಿಯುದ್ದೀನ್ ರಾಸಾಯನಿಕ ಜ್ಞಾನದ ಕಾರಣದಿಂದ ‘ರಿಸಿನ್’ ತಯಾರಿಸುವ ಪ್ರಕ್ರಿಯೆಯಲ್ಲಿ ಮುಖ್ಯ ಸೂತ್ರಧಾರನಾಗಿದ್ದನು. ಸೊಹೇಲ್ ಮತ್ತು ಆಜಾದ್ ಅವರ ಸಂಬಂಧ ಮುಜಫ್ಫರನಗರದ ಒಂದು ಮದರಸಾದೊಂದಿಗೆ ಇತ್ತು ಮತ್ತು ಅವರು ಖುರಾಸಾನ್ ಗುಂಪಿಗೆ ಸೇರಿದ್ದರು. ಸಧ್ಯಕ್ಕೆ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಗುಜರಾತನಲ್ಲಿದ್ದು, ಸೊಹೇಲ ಮತ್ತು ಆಜಾದ ಅವರ ಜಾಲದ ಕುರಿತು ತನಿಖೆ ನಡೆಸುತ್ತಿದೆ.
ಸಂಪಾದಕೀಯ ನಿಲುವು
|
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ