ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ರಷ್ಯಾದ ಪ್ರಜೆಯ ಬಂಧನ

ಮಾಸ್ಕೋ (ರಷ್ಯಾ) – ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ನಗರದಲ್ಲಿ ರಷ್ಯಾದ ಒಬ್ಬ ನಾಗರಿಕನನ್ನು ಬಂಧಿಸಲಾಗಿದೆ. ಈತ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ (ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ – ಅಂತರಸೇವಾ ಗುಪ್ತಚರ ಸಂಸ್ಥೆ) ಗೆ ರಷ್ಯಾದ ವಾಯು ರಕ್ಷಣಾ ವ್ಯವಸ್ಥೆ ಮತ್ತು ಮಿಲಿಟರಿ ಹೆಲಿಕಾಪ್ಟರ್ ತಂತ್ರಜ್ಞಾನದ ಮಾಹಿತಿಯನ್ನು ಪೂರೈಸುತ್ತಿದ್ದನು. ಈ ಘಟನೆಯಿಂದ ರಷ್ಯಾ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಹದಗೆಡಬಹುದು, ಎಂದು ಹೇಳಲಾಗುತ್ತಿದೆ.