ದೆಹಲಿ ಸ್ಫೋಟದ ರಾಜ್ಯದ ಕೊಂಡಿಗಳನ್ನು ಪರಿಶೀಲಿಸಲು ತಂಡದ ಪ್ರಯತ್ನ!

ಪುಣೆ – ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳವು ಎಚ್ಚೆತ್ತುಕೊಂಡಿದ್ದು, ಇಲ್ಲಿನ ಕೊಂಡ್ವಾ ಪ್ರದೇಶದಲ್ಲಿ ನವೆಂಬರ್ 11 ರಂದು ದಾಳಿ ನಡೆಸಿ ಕಾರ್ಯಾಚರಣೆ ಕೈಗೊಂಡಿದೆ. ಈ ಕಾರ್ಯಾಚರಣೆಯಲ್ಲಿ 2 ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಇಬ್ಬರ ಗುರುತನ್ನು ಗೌಪ್ಯವಾಗಿಡಲಾಗಿದ್ದು, ವಿಚಾರಣೆ ನಡೆಯುತ್ತಿದೆ. ದೆಹಲಿ ಸ್ಫೋಟ, ಹಾಗೂ ಜಮ್ಮು ಮತ್ತು ಕಾಶ್ಮೀರ ಮತ್ತು ಫರಿದಾಬಾದ್‌ನಲ್ಲಿ ಸ್ಫೋಟಕಗಳ ದೊಡ್ಡ ಸಂಗ್ರಹ ಸಿಕ್ಕಿದೆ. ಆ ಸಂಬಂಧ ಮಹಾರಾಷ್ಟ್ರದಲ್ಲಿ ಏನಾದರೂ ಕೊಂಡಿಗಳು ಸಿಗುತ್ತವೆಯೇ ಎಂದು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳವು ಹುಡುಕುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ವಿವಿಧ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸುವ ಸಂಚಿನಲ್ಲಿ ಪುಣೆಯಲ್ಲಿ ಬಂಧಿಸಲಾದ ಜುಬೇರ್ ಹಂಗರಗೇಕರ್ ಎಂಬ ಕಂಪ್ಯೂಟರ್ ಇಂಜಿನಿಯರ್‌ಗೆ ಸಂಬಂಧಿಸಿದ ಮಾಹಿತಿ ಪಡೆಯಲು ತಂಡವು ಕೊಂಡ್ವಾದಲ್ಲಿ ಮತ್ತೆ ದಾಳಿ ನಡೆಸಿತು. ಜುಬೇರ್ ಹಂಗರಗೇಕರ್‌ನನ್ನು ಇತ್ತೀಚೆಗೆ ಕೊಂಡ್ವಾ ಪ್ರದೇಶದಿಂದ ತಂಡವು ಬಂಧಿಸಿತ್ತು. ಜುಬೇರ್ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಅಲ್-ಖೈದಾಗೆ ಸಂಬಂಧಿಸಿರುವ ಶಂಕೆಯಿದೆ. ಅವನಿಗೆ ದೆಹಲಿ ಬಾಂಬ್ ಸ್ಫೋಟದೊಂದಿಗೆ ಸಂಬಂಧವಿಲ್ಲ ಎಂದು ತಂಡದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!