ವಿದೇಶದಿಂದ ಇಬ್ಬರು ಕುಖ್ಯಾತ ಗೂಂಡಾಗಳ ಬಂಧನ

ವಿದೇಶದಲ್ಲಿ ನೆಲೆಸಿ ಭಾರತದಲ್ಲಿ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದರು!

ಚಂಡೀಗಢ – ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಹರಿಯಾಣ ಪೊಲೀಸರು ಜಾರ್ಜಿಯಾದಿಂದ ವೆಂಕಟೇಶ್ ಗಾರ್ಗ್ ಮತ್ತು ಅಮೆರಿಕಾದಿಂದ ಭಾನುರಾಣಾನನ್ನು ಬಂಧಿಸಿದ್ದಾರೆ. ಈ ಇಬ್ಬರೂ ಕುಖ್ಯಾತ ಗೂಂಡಾಗಳಾಗಿದ್ದು, ಅವರು ವಿದೇಶದಲ್ಲಿ ನೆಲೆಸಿ ಭಾರತದಲ್ಲಿ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದರು. ಭಾನು ರಾಣಾ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನಾಗಿದ್ದಾನೆ. ಶೀಘ್ರದಲ್ಲೇ ಇವರಿಬ್ಬರನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು. ಇದುವರೆಗೆ 24ಕ್ಕೂ ಹೆಚ್ಚು ಗೂಂಡಾಗಳು ದೇಶದ ಹೊರಗೆ ಅಡಗಿಕೊಂಡಿದ್ದು, ಅವರು ಪೋರ್ಚುಗಲ್, ಕೆನಡಾ, ಅಮೆರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಸಕ್ರಿಯರಾಗಿದ್ದಾರೆ.

ಸಂಪಾದಕೀಯ ನಿಲುವು

ವಿದೇಶದಲ್ಲಿ ನೆಲೆಸಿ ಅಪರಾಧ ಕೃತ್ಯಗಳು ಮತ್ತು ಭಯೋತ್ಪಾದಕ ದಾಳಿಗಳನ್ನು ನಡೆಸಲಾಗುತ್ತಿದೆ, ಎಂದರೆ ಅದು ಭಾರತೀಯ ಭದ್ರತಾ ಏಜೆನ್ಸಿಗಳಿಗೆ ನಾಚಿಕೆಗೇಡಿನ ಸಂಗತಿ!