ಪ್ರಜಾಪ್ರಭುತ್ವ ವಿರೋಧಿ ವಿಚಾರಗಳಿಂದ ಮುಸ್ಲಿಂ ಯುವಕರ ಬ್ರೈನ್‌ವಾಶ್ ಮಾಡುತ್ತಿದ್ದರು

ಬರ್ಲಿನ್ (ಜರ್ಮನಿ) – ಜರ್ಮನಿಯ ಸರಕಾರದಿಂದ ದೇಶದಲ್ಲಿ ಭಯೋತ್ಪಾದಕ ಸಿದ್ಧಾಂತವನ್ನು ಉತ್ತೇಜಿಸುವುದು ಮತ್ತು ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಆರೋಪದ ಮೇಲೆ ಜರ್ಮನಿ ಸರಕಾರವು ಎರಡು ಇಸ್ಲಾಮಿಕ್ ಸಂಘಟನೆಗಳ ಮೇಲೆ ನಿಷೇಧ ಹೇರಿದೆ. ಆ ಸಂಘಟನೆಗಳ ಹೆಸರುಗಳು ‘ಇಸ್ಲಾಮಿಕ್ ಸೆಂಟರ್ ಹ್ಯಾಂಬರ್ಗ್’ ಮತ್ತು ‘ಮುಸ್ಲಿಂ ಇಂಟರಾಕ್ಟಿವ್’ ಎಂದು ಇವೆ. ಕಳೆದ ವರ್ಷ ನವೆಂಬರ್‌ನಲ್ಲಿ ಪೊಲೀಸರು ದೇಶದಾದ್ಯಂತ 55 ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದ್ದರು, ಇದರಿಂದ ಈ ಗುಂಪುಗಳು ತಮ್ಮ ರಾಜಕೀಯ ಉದ್ದೇಶಗಳನ್ನು ರಹಸ್ಯವಾಗಿ ಸಾಧಿಸುತ್ತಿರುವುದು ಬಯಲಾಯಿತು.
ಸಾಮಾಜಿಕ ಮಾಧ್ಯಮಗಳ ಮೂಲಕ ಕಟ್ಟರವಾದಿ ವಿಚಾರಗಳನ್ನು ಪ್ರಸಾರ ಮಾಡಲಾಗುತ್ತಿತ್ತು!
‘ಮುಸ್ಲಿಂ ಇಂಟರಾಕ್ಟಿವ್’ ನಂತಹ ಗುಂಪುಗಳು ಸಾಮಾಜಿಕ ಮಾಧ್ಯಮಗಳ ವಿಶೇಷವಾಗಿ ‘ಟಿಕ್‌ಟಾಕ್’ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಜರ್ಮನಿಯಲ್ಲಿ ‘ಖಿಲಾಫತ್’ ಅಂದರೆ ಇಸ್ಲಾಮಿಕ್ ಆಡಳಿತಕ್ಕಾಗಿ ಬೇಡಿಕೆ ಇಡುತ್ತಿದ್ದರು ಮತ್ತು ಯುವಕರಲ್ಲಿ ಕಟ್ಟರವಾದಿ ವಿಚಾರಗಳನ್ನು ಬಿತ್ತಲು ಪ್ರಯತ್ನಿಸುತ್ತಿದ್ದರು. ಜರ್ಮನ್ ಅಧಿಕಾರಿಗಳು ಈ ಪ್ರವೃತ್ತಿಯನ್ನು ‘ಆಧುನಿಕ ಟಿಕ್‌ಟಾಕ್ ಇಸ್ಲಾಮಿಸಂ’, ಅಂದರೆ ‘ಸಾಮಾಜಿಕ ಮಾಧ್ಯಮದ ಮೂಲಕ ಯುವಕರ ಮೇಲೆ ಪ್ರಭಾವ ಬೀರುವ ತಂತ್ರ’ ಎಂದು ಕರೆದಿದ್ದಾರೆ.
ಜರ್ಮನ್ ಸರಕಾರವು ‘ಇಸ್ಲಾಮಿಕ್ ಸೆಂಟರ್ ಹ್ಯಾಂಬರ್ಗ್’ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ನಿಷೇಧ ಹೇರಿದೆ. ನಂತರ ದೇಶದ 4 ಶಿಯಾ ಮಸೀದಿಗಳನ್ನು ಮುಚ್ಚಲಾಯಿತು ಮತ್ತು ಸಂಸ್ಥೆಯ ಎಲ್ಲಾ ಆಸ್ತಿಯನ್ನು ವಶಪಡಿಸಿಕೊಳ್ಳಲಾಯಿತು. ಗೃಹ ಸಚಿವೆ ನ್ಯಾನ್ಸಿ ಫೇಜರ್ ಅವರು, ಈ ಸಂಘಟನೆಗಳು ಪ್ರಜಾಪ್ರಭುತ್ವ, ಮಾನವ ಹಕ್ಕುಗಳು ಮತ್ತು ಮಹಿಳಾ ಹಕ್ಕುಗಳ ವಿರುದ್ಧ ಕಾರ್ಯನಿರ್ವಹಿಸುತ್ತಿದ್ದವು ಮತ್ತು ಜರ್ಮನಿಯಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವುದು ಅವುಗಳ ಉದ್ದೇಶವಾಗಿತ್ತು ಎಂದು ಹೇಳಿದರು. ಈ ಗುಂಪುಗಳಿಗೆ ಹಿಜ್ಬುಲ್ಲಾ ಮುಂತಾದ ಭಯೋತ್ಪಾದಕ ಸಂಘಟನೆಗಳ ಬೆಂಬಲವಿತ್ತು. ನಿಷೇಧದ ನಿರ್ಧಾರವು ಶಿಯಾ ಮುಸ್ಲಿಮರ ಧಾರ್ಮಿಕ ಹಕ್ಕುಗಳ ವಿರುದ್ಧ ಅಲ್ಲ, ಬದಲಿಗೆ ಇಸ್ಲಾಮಿಕ್ ಕಟ್ಟರವಾದದ ವಿರುದ್ಧವಾಗಿದೆ.
ಸಂಪಾದಕೀಯ ನಿಲುವು‘ಇಸ್ಲಾಂ ಎಂದರೆ ಶಾಂತಿ’ ಎಂದು ಹೇಳಲಾಗುತ್ತದೆ; ಆದರೆ ಜಗತ್ತಿನಲ್ಲಿ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ವಿರುದ್ಧ ಅರ್ಥ ಕಾಣುತ್ತದೆ. ಇದರ ಬಗ್ಗೆ ಇಸ್ಲಾಂನ ಪ್ರಮುಖ ಧಾರ್ಮಿಕ ಮುಖಂಡರು ಯಾವುದೇ ಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿಲ್ಲ. ಆದ್ದರಿಂದ ‘ಇದು ಹೀಗೇ ಇರಲಿದೆಯೇ?’ ಎಂಬ ಪ್ರಶ್ನೆ ಉದ್ಭವಿಸುತ್ತದೆ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation