ಪಾಕಿಸ್ತಾನ ಪ್ರತಿ ಸೈನಿಕನಿಗಾಗಿ 8 ಲಕ್ಷ 86 ಸಾವಿರ ರೂಪಾಯಿ ಕೇಳಿದೆ! Asim Munir Pakistan Army Peace Keeping

  • ಗಾಜಾ ಪಟ್ಟಿಯಲ್ಲಿ ನಿಯೋಜಿಸುವ ಸೇನೆಯಲ್ಲಿ ಪಾಕಿಸ್ತಾನ ಸೈನಿಕರು?

  • ಪಾಕಿಸ್ತಾನ ಸೈನಿಕರನ್ನು ಹರಾಜು ಹಾಕುತ್ತಿರುವುದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಸೇನೆಯ ‘ಫೀಲ್ಡ್ ಮಾರ್ಷಲ್’ (ಸೇನೆಯಲ್ಲಿನ ಸರ್ವೋಚ್ಚ ಹುದ್ದೆ) ಅಸೀಮ ಮುನೀರ ಅವರು ತಮ್ಮ ಸೈನ್ಯದ ಹರಾಜು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಇಸ್ರೇಲಗೆ ಒಬ್ಬ ಸೈನಿಕನನ್ನು 10 ಸಾವಿರ ಡಾಲರ್‌ಗೆ (ಅಂದಾಜು 8 ಲಕ್ಷ 86 ಸಾವಿರ ರೂಪಾಯಿಗೆ) ಹರಾಜು ಮಾಡಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಇಸ್ರೇಲ್ ಕಡೆಯಿಂದ ಈ ಒಪ್ಪಂದವು ಪ್ರತಿ ಸೈನಿಕನಿಗೆ 100 ಡಾಲರ್ (8 ಸಾವಿರ 864 ರೂಪಾಯಿ) ಆಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.

1. ಈ ಒಪ್ಪಂದದ ರಹಸ್ಯವನ್ನು ಪಾಕಿಸ್ತಾನದ ಪ್ರಸಿದ್ಧ ಪತ್ರಕರ್ತೆ ಆಸ್ಮಾ ಶಿರಾಜಿ ಅವರು ಬಹಿರಂಗಪಡಿಸಿದ್ದಾರೆ. ಅವರು ಇತ್ತೀಚೆಗೆ ‘ಎಕ್ಸ್’ ನಲ್ಲಿ, ಅಸೀಮ ಮುನೀರ ಅವರು ಈಜಿಪ್ಟಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಇಸ್ರೇಲ್ ಮತ್ತು ಅಮೆರಿಕದ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾದರು. ಅಲ್ಲಿ ಸಭೆಯೂ ನಡೆಯಿತು ಮತ್ತು ಈ ಗೌಪ್ಯ ಸಭೆಯಲ್ಲಿ ಪಾಕಿಸ್ತಾನ ಸೈನಿಕರ ಬಗ್ಗೆ ಒಪ್ಪಂದ ಮಾಡಲಾಯಿತು.

2. ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಗಾಜಾ ಶಾಂತಿ ಒಪ್ಪಂದಕ್ಕಾಗಿ ಇಸ್ರೇಲ್ ಮತ್ತು ಹಮಾಸ್ ಎರಡನ್ನೂ ಸಿದ್ಧಪಡಿಸಿದ್ದರು. ಈ ಒಪ್ಪಂದದ ಅಡಿಯಲ್ಲಿ ಒಂದು ವಿಶೇಷ ಸೇನೆಯನ್ನು ರಚಿಸಲಾಗುತ್ತಿದೆ. ಅದನ್ನು ‘ಇಂಟರ ನ್ಯಾಷನಲ್ ಸ್ಟೆಬಿಲೈಸೇಷನ್ ಫೋರ್ಸ್’ (ಅಂತರರಾಷ್ಟ್ರೀಯ ಸ್ಥಿರೀಕರಣ ದಳ) ಎಂದು ಹೆಸರಿಸಲಾಗುವುದು. ಈ ಸೇನೆಯು ಸಂಪೂರ್ಣ ಗಾಜಾ ಪಟ್ಟಿಯಲ್ಲಿ ತಾತ್ಕಾಲಿಕವಾಗಿ ನಿಯೋಜನೆಯಾಗಲಿದೆ. ಈ ಸೇನೆಯಲ್ಲಿ ಪಾಕಿಸ್ತಾನದ ಸೈನಿಕರೂ ಇರುತ್ತಾರೆ. ಈ ಸೈನ್ಯವು ಪ್ಯಾಲೆಸ್ತೀನ್ ಪೊಲೀಸರಿಗೆ ಮಿಲಿಟರಿ ತರಬೇತಿಯನ್ನು ನೀಡುತ್ತದೆ. ಗಡಿ ಪ್ರದೇಶದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡಲು ಈ ಸೇನೆಯು ಕಾರ್ಯನಿರ್ವಹಿಸುತ್ತದೆ. ಈ ಸೈನ್ಯವು ಭಯೋತ್ಪಾದಕರು ಮತ್ತು ಮತಾಂಧರನ್ನು ತಡೆಯುತ್ತದೆ, ಹಾಗೆಯೇ ಅವರನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಇದರೊಂದಿಗೆ ಇದು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ವಿವಾದಗಳು ಉಂಟಾಗದಂತೆ ಜಾಗೃತೆ ವಹಿಸುತ್ತದೆ. ಈ ಸೇನೆಯಲ್ಲಿ ಅಮೆರಿಕದ ಸೈನಿಕರು ಇರುವುದಿಲ್ಲ, ಬದಲಾಗಿ ಅರಬ್ ದೇಶಗಳ ಸೈನಿಕರು ಇರುತ್ತಾರೆ. ಅದಕ್ಕಾಗಿಯೇ ಈ ಸಂಪೂರ್ಣ ಒಪ್ಪಂದವು ನಡೆಯುತ್ತಿದೆ ಎಂದು ಹೇಳಲಾಗಿದೆ.