ಇಂದಿರಾ ಗಾಂಧಿಯವರು ಪಾಕಿಸ್ತಾನದ ಅಣು ಸ್ಥಾವರದ ಮೇಲೆ ದಾಳಿ ಮಾಡಲು ನಿರಾಕರಿಸಿದ್ದರು!

ಅಮೆರಿಕಾದ ಗೂಢಚಾರ ಸಂಸ್ಥೆ ‘ಸಿಐಎ’ಯ ಮಾಜಿ ಅಧಿಕಾರಿಯ ದಾವೆ !

(‘ಸಿಐಎ’ ಎಂದರೆ ‘ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ’ – ಕೇಂದ್ರೀಯ ಗೂಢಚಾರ ಸಂಸ್ಥೆ)

ವಾಷಿಂಗ್ಟನ್ (ಅಮೆರಿಕಾ) – ಅಮೆರಿಕಾದ ಗೂಢಚಾರ ಸಂಸ್ಥೆ ‘ಸಿಐಎ’ಯ ಮಾಜಿ ಅಧಿಕಾರಿ ರಿಚರ್ಡ್ ಬಾರ್ಲೋ ಅವರ ಪ್ರಕಾರ ೧೯೮೦ ರ ದಶಕದ ಆರಂಭದಲ್ಲಿ ಭಾರತ ಮತ್ತು ಇಸ್ರೇಲ್ ಒಂದು ಜಂಟಿ ಕಾರ್ಯಾಚರಣೆಯ ಪ್ರಸ್ತಾವನೆಯನ್ನು ಮುಂದಿಟ್ಟಿದ್ದವು. ಈ ಕಾರ್ಯಾಚರಣೆಯ ಪ್ರಕಾರ ಪಾಕಿಸ್ತಾನದ ಕಹುಟಾದಲ್ಲಿರುವ ಅಣು ಸ್ಥಾವರದ ಮೇಲೆ ದಾಳಿ ಮಾಡುವ ಯೋಜನೆ ಇತ್ತು; ಆದರೆ ಆ ಸಮಯದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಈ ಕಾರ್ಯಾಚರಣೆಗೆ ಅನುಮತಿ ನೀಡಲಿಲ್ಲ. ರಿಚರ್ಡ್ ಬಾರ್ಲೋ ಅವರು ಇಂದಿರಾ ಗಾಂಧಿಯವರ ಈ ನಿರ್ಧಾರವನ್ನು ‘ನಾಚಿಕೆಗೇಡಿನದು’ ಎಂದು ಕರೆದಿದ್ದಾರೆ.

ಕಾರ್ಯಾಚರಣೆಯಿಂದ ಹಲವು ಪ್ರಶ್ನೆಗಳು ಬಗೆಹರಿಯುತ್ತಿದ್ದವು!

ಬಾರ್ಲೋ ಅವರು, ನಾನು ೧೯೮೨ ರಿಂದ ೧೯೮೫ ರವರೆಗೆ ಸರಕಾರಿ ಸೇವೆಯಲ್ಲಿ ಇರಲಿಲ್ಲ; ಆದರೆ ನನಗೆ ಈ ಯೋಜನೆಯ ಬಗ್ಗೆ ಮಾಹಿತಿ ಸಿಕ್ಕಿತ್ತು; ಆದರೂ ನಾನು ಆ ಸಮಯದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಂದಿರಾ ಗಾಂಧಿಯವರು ಈ ಕಾರ್ಯಾಚರಣೆಗೆ ಅನುಮತಿ ನೀಡದಿರುವುದು ದುರದೃಷ್ಟಕರವಾಗಿತ್ತು. ಈ ಕಾರ್ಯಾಚರಣೆಯಿಂದ ಹಲವು ಪ್ರಶ್ನೆಗಳು ಬಗೆಹರಿಯುತ್ತಿದ್ದವು, ಎಂದು ಸ್ಪಷ್ಟಪಡಿಸಿದರು.

ಅಮೆರಿಕಾ ವಿರೋಧ ವ್ಯಕ್ತಪಡಿಸುತ್ತಿತ್ತು!

ರಿಚರ್ಡ್ ಬಾರ್ಲೋ ಅವರು ೧೯೮೦ ರ ದಶಕದಲ್ಲಿ ಪಾಕಿಸ್ತಾನದ ರಹಸ್ಯ ಅಣು ಚಟುವಟಿಕೆಗಳ ಸಮಯದಲ್ಲಿ ‘ಪ್ರತಿರೋಧ ಪ್ರಸಾರ ಅಧಿಕಾರಿ’ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು, ಆ ಸಮಯದ ಅಮೆರಿಕಾದ ಅಧ್ಯಕ್ಷ ರೊನಾಲ್ಡ್ ರೀಗನ್ ಅವರು ಈ ರೀತಿಯ ದಾಳಿವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು, ವಿಶೇಷವಾಗಿ ಅದು ಇಸ್ರೇಲ್‌ನಿಂದ ಆಗಿದ್ದರೆ; ಏಕೆಂದರೆ ಆ ಸಮಯದಲ್ಲಿ ಅಫ್ಘಾನಿಸ್ತಾನದಲ್ಲಿ ಸೋವಿಯತ್ ಒಕ್ಕೂಟದ ವಿರುದ್ಧ ಅಮೆರಿಕಾದ ರಹಸ್ಯ ಯುದ್ಧ ನೀತಿಯನ್ನು ಜಾರಿಗೊಳಿಸಲಾಗುತ್ತಿತ್ತು ಮತ್ತು ಅದರಲ್ಲಿ ಪಾಕಿಸ್ತಾನ ಅಮೆರಿಕಾದ ಪ್ರಮುಖ ಸಹಯೋಗಿ ರಾಷ್ಟ್ರವಾಗಿತ್ತು. ಆದ್ದರಿಂದ, ರೀಗನ್ ಅವರು ಇಸ್ರೇಲ್‌ನ ಆಗಿನ ಪ್ರಧಾನಮಂತ್ರಿ ಮೆನಾಕೆಮ್ ಬೆಗಿನ್ ಅವರನ್ನು ತೀವ್ರವಾಗಿ ಖಂಡಿಸುತ್ತಿದ್ದರು, ಎಂದು ಹೇಳಿದರು.

ಯೋಜನೆ ಏನಿತ್ತು?

ಗೂಢಚಾರ ವರದಿಗಳು ಮತ್ತು ಕೆಲವು ದಾಖಲೆಗಳ ಪ್ರಕಾರ ಇಸ್ರೇಲ್ ಮತ್ತು ಭಾರತ ಪಾಕಿಸ್ತಾನದ ಕಹುಟಾದಲ್ಲಿರುವ ಯುರೇನಿಯಂ ಸಂವರ್ಧನಾ ಕೇಂದ್ರದ ಮೇಲೆ ಯುದ್ಧ ವಿಮಾನಗಳ ಮೂಲಕ ದಾಳಿ ಮಾಡುವ ಯೋಜನೆಯನ್ನು ಸಿದ್ಧಪಡಿಸಿದ್ದವು. ಈ ಸಂವರ್ಧನಾ ಕೇಂದ್ರವು ಪಾಕಿಸ್ತಾನದ ಅಣ್ವಸ್ತ್ರ ಕಾರ್ಯಕ್ರಮದ ಪ್ರಮುಖ ಕೇಂದ್ರವಾಗಿತ್ತು. ಈ ಕಾರ್ಯಾಚರಣೆಯ ಉದ್ದೇಶ ಪಾಕಿಸ್ತಾನವನ್ನು ಅಣ್ವಸ್ತ್ರಗಳನ್ನು ಅಭಿವೃದ್ಧಿಪಡಿಸುವುದರಿಂದ ತಡೆಯುವುದು ಆಗಿತ್ತು.

ಸಂಪಾದಕೀಯ ನಿಲುವು

  • ಈ ಹೇಳಿಕೆ ನಿಜವಾಗಿದ್ದರೆ, ಈಗಿನ ಪಾಕಿಸ್ತಾನದ ಸ್ಥಿತಿ ನೋಡಿದರೆ ಭಾರತ ದಾಳಿ ಮಾಡಬೇಕಿತ್ತು ಎಂಬುದು ಸ್ಪಷ್ಟವಾಗುತ್ತದೆ!
  • ಒಂದು ವೇಳೆ ಭಾರತ ಹಾಗೆ ಮಾಡಿದ್ದರೆ, ಇದೇ ಅಮೆರಿಕಾ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಭಾರತದ ಮೇಲೆ ದಾಳಿ ಮಾಡುತ್ತಿತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ!
  • ಇಂದಿಗೂ ಪಾಕಿಸ್ತಾನದೊಂದಿಗೆ ಯುದ್ಧವಾದರೆ, ಭಾರತವು ಇಂತಹ ನಿರ್ಧಾರ ತೆಗೆದುಕೊಂಡು ದಾಳಿ ಮಾಡಲೇಬೇಕಾಗುತ್ತದೆ ಎಂಬುದು ಕೂಡ ಅಷ್ಟೇ ಸತ್ಯ!