
ಕಾಬೂಲ್ (ಅಫ್ಘಾನಿಸ್ತಾನ) – ಕೃಷಿ ಸಂಶೋಧನೆಗೆ ಉತ್ತೇಜನ ನೀಡಲು ಭಾರತವು ಅಫ್ಘಾನಿಸ್ತಾನದಲ್ಲಿ ‘ಅಫ್ಘಾನ್ ಹಿಂದೂ ಸಂಶೋಧನಾ ಕೇಂದ್ರ’ವನ್ನು ಪ್ರಾರಂಭಿಸಲಿದೆ. ಭಾರತದ ರಾಜತಾಂತ್ರಿಕ ಅಧಿಕಾರಿ ಕರಣ ಯಾದವ ಮತ್ತು ಅಫ್ಘಾನಿಸ್ತಾನದ ಕೃಷಿ ಸಚಿವ ಅತಾವುಲ್ ಓಮರಿ ಅವರ ಭೇಟಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಓಮರಿ ಅವರು ಮಾತನಾಡಿ,
4 ದಶಕಗಳಿಂದಲೂ ಅಫ್ಘಾನಿಸ್ತಾನದ ಮೇಲೆ ಹವಾಮಾನ ಬದಲಾವಣೆಯ ಗಂಭೀರ ಪರಿಣಾಮ ಬೀರುತ್ತಿದೆ. ಬರಗಾಲ ಮತ್ತು ಬೆಳೆಗಳ ಕೀಟಗಳಿಂದಾಗಿ ದೇಶದ ಕೃಷಿ ಉತ್ಪಾದನೆಯ ಪ್ರಮಾಣ ಮತ್ತು ಗುಣಮಟ್ಟ ಎರಡೂ ಗಮನಾರ್ಹವಾಗಿ ಕಡಿಮೆಯಾಗಿವೆ. ಇದಕ್ಕೆ ಪರಿಹಾರವಾಗಿ, ಹವಾಮಾನ-ನಿರೋಧಕ ಬೆಳೆಗಳ ತಳಿಗಳನ್ನು ಅಭಿವೃದ್ಧಿಪಡಿಸಲು ವೈಜ್ಞಾನಿಕ ಸಂಶೋಧನೆಯ ಅವಶ್ಯಕತೆ ಇದೆ. ಈ ಸಮಯದಲ್ಲಿ ಓಮರಿ ಅವರು ಭಾರತದಲ್ಲಿ ಕೃಷಿ ಮತ್ತು ಪಶುಸಂಗೋಪನಾ ಉತ್ಪನ್ನಗಳನ್ನು ರಫ್ತು ಮಾಡುವ ಅಫ್ಘಾನಿ ವ್ಯಾಪಾರಿಗಳಿಗೆ ವೀಸಾ ಪ್ರಕ್ರಿಯೆಯನ್ನು ಸುಗಮಗೊಳಿಸುವಂತೆ ವಿನಂತಿಸಿದರು.
ಇದಕ್ಕೆ ಯಾದವ ಅವರು ‘ಅಫ್ಘಾನ್ ಹಿಂದೂ ಸಂಶೋಧನಾ ಕೇಂದ್ರ’ವನ್ನು ಪ್ರಾರಂಭಿಸುವ ಸುಳಿವು ನೀಡಿದರು ಮತ್ತು ಇದಕ್ಕಾಗಿ ಪ್ರತ್ಯಕ್ಷ ಮತ್ತು ಆನ್ ಲೈನ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಭರವಸೆ ನೀಡಿದರು. ಇದರ ಜೊತೆಗೆ ಓಮರಿ ಅವರು ಪ್ರಸ್ತಾಪಿಸಿದ ಎಲ್ಲ ಅಂಶಗಳ ಬಗ್ಗೆಯೂ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಸಂಪಾದಕೀಯ ನಿಲುವುಇಸ್ಲಾಮಿಕ್ ದೇಶದಲ್ಲಿರುವ ಹಿಂದೂಗಳ ದುಸ್ಥಿತಿಯನ್ನು ತಡೆಯಲು ಸರಕಾರವು ಇಂತಹ ಒಂದು ಕೇಂದ್ರವನ್ನು ಪ್ರಾರಂಭಿಸಿ, ಈ ಮೂಲಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಹಿಂದೂಗಳ ನಿರೀಕ್ಷೆಯಾಗಿದೆ! |
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದಿಂದ ‘ಲವ್ ಜಿಹಾದ್’ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು
ಶ್ರೀರಾಮಮಂದಿರವನ್ನು ಬಾಂಬ್ನಿಂದ ಸ್ಫೋಟಿಸಲು ಸಂಚು ರೂಪಿಸಿದ್ದ ಸುಹೇಲ್ ದಾವಣಗೆರೆಯಿಂದ ಬಂಧನ
ದೆಹಲಿಯ ಮುಸಲ್ಮಾನ ಬಹುಸಂಖ್ಯಾತ ಸೀಲಂಪುರದಲ್ಲಿ ಮುಸಲ್ಮಾನರಿಂದ 16 ವರ್ಷದ ಹಿಂದೂ ಹುಡುಗನ ಬರ್ಬರ ಹತ್ಯೆ