ಟ್ರಂಪ ಅವರಿಂದ ಪ್ರಧಾನಿ ಮೋದಿ ಅವರನ್ನು ‘ಸ್ನೇಹಿತ’ ಮತ್ತು ‘ಒಳ್ಳೆಯ ಮನುಷ್ಯ’ ಎಂದು ಉಲ್ಲೇಖ

ವಾಷಿಂಗ್ಟನ (ಅಮೆರಿಕ) – ಪ್ರಧಾನಿ ಮೋದಿ ಅವರು ನನಗೆ ಭಾರತ ಭೇಟಿಗಾಗಿ ಆಮಂತ್ರಣ ನೀಡಿದ್ದಾರೆ ಮತ್ತು ನಾನು ಅಲ್ಲಿಗೆ ಹೋಗುವ ಕುರಿತು ಯೋಚಿಸುತ್ತಿದ್ದೇನೆ, ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನವೆಂಬರ್ 6 ರಂದು ‘ವೈಟ್ ಹೌಸ್’ನ ‘ಓವಲ್ ಆಫೀಸ್’ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮಾಹಿತಿ ನೀಡಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮ್ಮ ಉತ್ತಮ ಚರ್ಚೆಗಳು ನಡೆಯುತ್ತಿವೆ ಮತ್ತು ಎರಡೂ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಕುರಿತ ಚರ್ಚೆಗಳು ಪ್ರಗತಿಯಲ್ಲಿವೆ ಎಂದು ಟ್ರಂಪ್ ಹೇಳಿದರು. ಈ ಸಮಯದಲ್ಲಿ ಟ್ರಂಪ್ ಅವರು ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ತಮ್ಮ ‘ಸ್ನೇಹಿತ’ ಮತ್ತು ‘ಒಳ್ಳೆಯ ಮನುಷ್ಯ’ ಎಂದು ಕರೆದರು.
ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಕಡಿಮೆ ಮಾಡಿದೆ!
ಟ್ರಂಪ್ ಅವರು ಮಾತನಾಡುತ್ತಾ, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಗಣನೀಯವಾಗಿ ಕಡಿಮೆ ಮಾಡಿದೆ.’ (ಕ್ಷಣಕ್ಷಣಕ್ಕೂ ಹೇಳಿಕೆಗಳನ್ನು ಬದಲಾಯಿಸುವ ಮತ್ತು ನಿರಂತರ ಸುಳ್ಳು ಹೇಳುವ ಟ್ರಂಪ್ ಅವರನ್ನು ಯಾರು ನಂಬುತ್ತಾರೆ? – ಸಂಪಾದಕರು)
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation