ಪಾಕಿಸ್ತಾನದಿಂದ ಅಫ್ಘಾನಿಸ್ತಾನದ ಮೇಲೆ ಮತ್ತೆ ದಾಳಿ: ತಾಲಿಬಾನ್‌ನಿಂದಲೂ ಪ್ರತ್ಯುತ್ತರ Pakistan Afghanistan War

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನಿ ಸೇನೆಯು ನವೆಂಬರ್ 6 ರಂದು ಸಂಜೆ 5 ಗಂಟೆಯ ಸುಮಾರಿಗೆ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸೀತು. ಈ ದಾಳಿಯಲ್ಲಿ 5 ಜನರು ಮೃತಪಟ್ಟರು. ಪಾಕಿಸ್ತಾನಿ ಸೇನೆಯು ನೇರವಾಗಿ ನಾಗರಿಕರನ್ನು ಗುರಿಯಾಗಿಸಿ ದಾಳಿ ಮಾಡಿದೆ ಎಂದು ಒಬ್ಬ ಅಫ್ಘಾನ್ ಸೇನಾಧಿಕಾರಿ ತಿಳಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ಅಫ್ಘಾನಿಸ್ತಾನವೂ ಸಹ ಪಾಕಿಸ್ತಾನದ ಮೇಲೆ ಭಾರಿ ದಾಳಿ ಮಾಡಿದೆ.

ವಿಶೇಷವೆಂದರೆ, ಈ ದಾಳಿ ನಡೆದ ದಿನ, ಅಂದರೆ ನವೆಂಬರ್ 6 ರಂದು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ಶಾಂತಿ ಮಾತುಕತೆಯ ಮೂರನೇ ಸಭೆಯು ಟರ್ಕಿಯಲ್ಲಿ ನಡೆಯಬೇಕಿತ್ತು. ಅಕ್ಟೋಬರ್ 19 ರಂದು ಎರಡೂ ದೇಶಗಳು ಕತಾರ್‌ ನಲ್ಲಿ ಕದನ ವಿರಾಮಕ್ಕೆ ಸಹಿ ಹಾಕಿದ್ದವು; ಆದರೆ ಕಳೆದ ವಾರ ಟರ್ಕಿಯಲ್ಲಿ ನಡೆದ ಮಾತುಕತೆಯ ಎರಡನೇ ಹಂತವು ಯಾವುದೇ ಒಪ್ಪಂದವಿಲ್ಲದೆ ಕೊನೆಗೊಂಡಿತ್ತು.

ಪಾಕಿಸ್ತಾನದ ಕಡೆಯಿಂದ ಐ.ಎಸ್.ಐ. (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್ – ಅಂತರ್ಸೇವೆ ಗೂಢಚಾರ ಸಂಸ್ಥೆ) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಸೀಮ್ ಮಲಿಕ ಶಾಂತಿ ಮಾತುಕತೆಯ ನೇತೃತ್ವವನ್ನು ವಹಿಸಿದ್ದರು, ತಾಲಿಬಾನ್ ಕಡೆಯಿಂದ ಗೂಢಚಾರ ಮುಖ್ಯಸ್ಥ ಅಬ್ದುಲ್ ಹಕ್ ವಸಿಕ್, ಉಪ ಗೃಹಸಚಿವ ರಹಮತುಲ್ಲಾ ನಜೀಬ್ ಮತ್ತು ವಕ್ತಾರ ಸುಹೇಲ್ ಶಾಹೀನ್ ಭಾಗವಹಿಸಿದ್ದಾರೆ.