ಆ ಸಮಯದಲ್ಲಿ ಒಡಕು ಮೂಡಿಸಿದ ಸಿದ್ಧಾಂತವು ಇಂದಿಗೂ ದೇಶಕ್ಕೆ ಒಂದು ಸವಾಲಾಗಿದೆ ಎಂದು ಸೂಚನೆ

ನವದೆಹಲಿ – ‘ವಂದೇ ಮಾತರಂ’ ಒಂದು ಮಂತ್ರ, ಒಂದು ಕನಸು, ಒಂದು ಸಂಕಲ್ಪ ಮತ್ತು ಒಂದು ಶಕ್ತಿಯಾಗಿದೆ. ಈ ಹಾಡು ಭಾರತಮಾತೆಯ ಪೂಜೆಯಾಗಿದೆ. ‘ವಂದೇ ಮಾತರಂ’ ಭಾರತದ ಸ್ವಾತಂತ್ರ್ಯದ ಘೋಷಣೆಯಾಗಿತ್ತು. ಆದಾಗ್ಯೂ, 1937 ರಲ್ಲಿ ‘ವಂದೇ ಮಾತರಂ’ನ ಕೆಲವು ಭಾಗವನ್ನು ತೆಗೆದುಹಾಕಲಾಯಿತು. ಆ ಗೀತೆಯನ್ನು ತುಂಡರಿಸಲಾಯಿತು. ‘ವಂದೇ ಮಾತರಂ’ನ ಈ ವಿಭಜನೆಯಿಂದಲೇ ದೇಶದ ವಿಭಜನೆಯ ಬೀಜ ಬಿತ್ತಲ್ಪಟ್ಟಿತು.
आज की पीढ़ी के लिए यह जानना भी जरूरी है कि राष्ट्र निर्माण के महामंत्र वन्देमातरम् के महत्वपूर्ण पदों को क्यों हटाया गया, जो एक बड़ा अन्याय था। pic.twitter.com/tWuzf7VqHd
— Narendra Modi (@narendramodi) November 7, 2025
ಆ ವಿಭಜನಕಾರಿ ಸಿದ್ಧಾಂತವು ಇಂದಿಗೂ ದೇಶಕ್ಕೆ ಒಂದು ಸವಾಲಾಗಿದೆ, ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಗೆ ನವೆಂಬರ್ 7 ರಂದು 150 ವರ್ಷ ಪೂರ್ಣಗೊಂಡಿತು. ಈ ಹಿನ್ನೆಲೆಯಲ್ಲಿ ನವೆಂಬರ್ 7 ರಂದು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಈ ಮಾತುಗಳನ್ನಾಡಿದರು.
🇮🇳 "In 1937, key stanzas of Vande Mataram were dropped, sowing the seeds of Partition."
PM Modi in Delhi launched the year-long commemoration marking 150 years of Vande Mataram 🎶
🗣️ “Today’s generation must know this injustice done to our ‘maha mantra’ of nation-building.”… pic.twitter.com/BSoowyvFLa
— Sanatan Prabhat (@SanatanPrabhat) November 7, 2025
ಪ್ರಧಾನಿ ಮಾತು ಮುಂದುವರೆಸಿ, ‘ವಂದೇ ಮಾತರಂ’ನ ಮೂಲ ಪಠ್ಯದಲ್ಲಿ ಭಾರತಮಾತೆಯು ಸರಸ್ವತಿ, ಲಕ್ಷ್ಮಿ ಮತ್ತು ದುರ್ಗೆಯಾಗಿದ್ದಾಳೆ ಎಂದು ಹೇಳಲಾಗಿದೆ. ಯಾವಾಗ ಶತ್ರುಗಳು ಭಯೋತ್ಪಾದನೆಯ ಮೂಲಕ ಭಾರತದ ಭದ್ರತೆ ಮತ್ತು ಗೌರವದ ಮೇಲೆ ಆಕ್ರಮಣ ಮಾಡುವ ದುಸ್ಸಾಹಸ ಮಾಡಿದರೋ, ಆಗ ಇಡೀ ಜಗತ್ತು ಕಂಡಿತು, ನವ ಭಾರತಕ್ಕೆ ಭಯೋತ್ಪಾದನೆಯನ್ನು ನಾಶಮಾಡಲು ದುರ್ಗೆಯಾಗುವುದು ಹೇಗೆ? ಎನ್ನುವುದೂ ತಿಳಿದಿದೆ.

‘ವಂದೇ ಮಾತರಂ’ನ 150 ನೇ ವಾರ್ಷಿಕೋತ್ಸವದ ನಿಮಿತ್ತ ಪ್ರಧಾನಿಯವರು ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಪ್ರಧಾನಿಯವರು ‘ವಂದೇ ಮಾತರಂ’ನ ಸಾಮೂಹಿಕ ಗಾಯನದಲ್ಲೂ ಭಾಗವಹಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!