
ನವ ದೆಹಲಿ – ಕರ್ಣಾವತಿಯಲ್ಲಿ ಜೂನ್ 12, 2025 ರಂದು ನಡೆದ ವಿಮಾನ ಅಪಘಾತಕ್ಕೆ ಪೈಲಟ್ ಅನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಯಾರೂ ಕೂಡ ಪೈಲಟ್ ನ ತಪ್ಪಿದೆ ಎಂದು ಒಪ್ಪುವುದಿಲ್ಲ. ಪ್ರಾಥಮಿಕ ತನಿಖಾ ವರದಿಯಲ್ಲೂ ಪೈಲಟ್ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಈ ಅಪಘಾತದಲ್ಲಿ ಮೃತಪಟ್ಟ ಪೈಲಟ್ ರಲ್ಲಿ ಒಬ್ಬರಾದ ಸುಮಿತ್ ಸಭರವಾಲ್ ಅವರ 91 ವರ್ಷದ ತಂದೆ ಪುಷ್ಕರ ರಾಜ ಸಭರವಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯವು ಈ ಹೇಳಿಕೆ ನೀಡಿದೆ. ಅವರು ಈ ಅಪಘಾತದ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದು, ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ ಉತ್ತರಗಳನ್ನು ಕೇಳಿದೆ. ಈ ಅರ್ಜಿಯ ಮುಂದಿನ ವಿಚಾರಣೆ ನವೆಂಬರ್ 10 ರಂದು ನಡೆಯಲಿದೆ. ಕರ್ಣಾವತಿಯಿಂದ ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ‘ಎಐ 171’ ಪತನಗೊಂಡ ಅಪಘಾತದಲ್ಲಿ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 241 ಜನರು ಸಾವನ್ನಪ್ಪಿದ್ದರು. ಇದರಲ್ಲಿ ಗುಜರಾತಿನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾಣಿ ಅವರೂ ಸೇರಿದ್ದರು.
SC says the pilot cannot be blamed for the June 12, 2025 Air India AI-171 crash that killed 241, including ex-Gujarat CM Vijay Rupani.
“No one in the country believes it was pilot error,” the court noted.
SC also slammed The Wall Street Journal for “poor reporting,” after it… pic.twitter.com/j7FBdvs0dh
— Sanatan Prabhat (@SanatanPrabhat) November 7, 2025
ವಿದೇಶಿ ವೃತ್ತಪತ್ರಿಕೆಗಳ ಕಳಪೆ ವರದಿಗಾರಿಕೆ! – ಅಮೆರಿಕದ ದಿನಪತ್ರಿಕೆಯ ವಿರುದ್ಧ ನ್ಯಾಯಾಲಯದ ಟೀಕೆ
ಪುಷ್ಕರ ಸಭರವಾಲ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ, ಅಮೆರಿಕಾದ ‘ವಾಲ್ ಸ್ಟ್ರೀಟ್ ಜರ್ನಲ್’ನ ಒಂದು ವರದಿಯಲ್ಲಿ, ಈ ಅಪಘಾತವು ಪೈಲಟ್ ನ ತಪ್ಪಿನಿಂದಾಗಿದೆ ಎಂದು ಹೇಳಲಾಗಿದೆ ಎಂದು ತಿಳಿಸಿದ್ದರು. ವರದಿಯಲ್ಲಿ ಭಾರತ ಸರಕಾರದ ಹೆಸರಿಸದ ಮೂಲವೊಂದನ್ನು ಉಲ್ಲೇಖಿಸಲಾಗಿದೆ. ಆದಾಗ್ಯೂ, ನ್ಯಾಯಪೀಠವು ಇದು ಕಳಪೆ ವರದಿ ಎಂದು ಸ್ಪಷ್ಟಪಡಿಸಿದೆ. (ಪತನಗೊಂಡ ವಿಮಾನವು ಅಮೆರಿಕಾದ ಸಂಸ್ಥೆಗೆ ಸೇರಿದ್ದಾಗಿತ್ತು. ಆದ್ದರಿಂದ, ಆ ಸಂಸ್ಥೆಯ ಹೆಸರಿಗೆ ಕೆಟ್ಟ ಹೆಸರು ಬರಬಾರದು ಎಂದು ಆ ದೇಶದ ವೃತ್ತಪತ್ರಿಕೆಯು ಸಂಸ್ಥೆಯನ್ನು ಸಮರ್ಥಿಸಿಕೊಳ್ಳಲು ಭಾರತೀಯ ಪೈಲಟ್ ನ ಮೇಲೆ ಆರೋಪ ಮಾಡಿದೆ ಎಂಬುದು ಸ್ಪಷ್ಟವಾಗಿದೆ. – ಸಂಪಾದಕರು)
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !