ಹಿಂದೂ ವಿರೋಧಿ ಜೊಹ್ರಾನ ಮಮದಾನಿ ನ್ಯೂಯಾರ್ಕ್‌ನ ಮೇಯರ ! Anti-Hindu Zohran Mamdani Elected Mayor

ನ್ಯೂಯಾರ್ಕ್ (ಅಮೆರಿಕ) – ನ್ಯೂಯಾರ್ಕ್‌ನ ಹೊಸ ಮೇಯರ ಆಗಿ 34 ವರ್ಷದ ಜೊಹ್ರಾನ ಮಮದಾನಿ ಆಯ್ಕೆಯಾಗಿದ್ದಾರೆ. ಡೆಮಾಕ್ರೆಟಿಕ್ ಸೋಷಿಯಲಿಸ್ಟ್ ಪಕ್ಷದ ಮಮದಾನಿ ಅವರು ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ಈ ಸ್ಥಾನವನ್ನು ಪಡೆದಿದ್ದಾರೆ. ಉಗಾಂಡಾದಲ್ಲಿ ಜನಿಸಿದ ಮತ್ತು ಭಾರತೀಯ ಮೂಲದ ಮಮದಾನಿ ಅವರು ನ್ಯೂಯಾರ್ಕ್‌ನ ಮೊದಲ ಭಾರತೀಯ ಮೂಲದ ಮೇಯರ್ ಆಗಿದ್ದಾರೆ. ಮಮದಾನಿ ಅವರು ಭಾರತೀಯ ಮೂಲದವರಾಗಿದ್ದರೂ, ಅವರು ಹಿಂದೂಗಳು ಮತ್ತು ಹಿಂದೂ ಧರ್ಮದ ಬಗ್ಗೆ ನೀಡಿದ ಹಲವಾರು ಹೇಳಿಕೆಗಳಿಂದಾಗಿ ಅವರ ಮೇಲೆ ‘ಹಿಂದೂ ವಿರೋಧಿ’ ಎಂಬ ಕಳಂಕವಿದೆ. ಅವರನ್ನು ‘ಧರ್ಮದ ಆಧಾರದ ಮೇಲೆ ಸಮಾಜದಲ್ಲಿ ಒಡಕುಂಟು ಮಾಡುವ ನಾಯಕ’ ಎಂದೂ ನೋಡಲಾಗುತ್ತದೆ.

ಜೊಹ್ರಾನ್ ಮಮದಾನಿ ಅವರ ಪರಿಚಯ

ಜೊಹ್ರಾನ್ ಮಮದಾನಿ ಅವರು ಪ್ರಸಿದ್ಧ ಚಲನಚಿತ್ರ ನಿರ್ಮಾಪಕಿ ಮತ್ತು ಹಿಂದೂ ಆಗಿರುವ ಅವರ ತಾಯಿ ಮೀರಾ ನಾಯರ್ ಮತ್ತು ಉಗಾಂಡಾ ಮೂಲದ ಲೇಖಕ, ಪ್ರಾಧ್ಯಾಪಕ ಮಹಮೂದ ಮಮದಾನಿ ಅವರ ಪುತ್ರರಾಗಿದ್ದಾರೆ. ಅವರು ಪ್ರತಿಷ್ಠಿತ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು ಮತ್ತು 2020 ರಲ್ಲಿ ನ್ಯೂಯಾರ್ಕ್ ರಾಜ್ಯ ವಿಧಾನಸಭೆಯಲ್ಲಿ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದರು. ಅವರು ತಮ್ಮನ್ನು ‘ಡೆಮಾಕ್ರೆಟಿಕ್ ಸೋಷಿಯಲಿಸ್ಟ್’ ಎಂದು ಕರೆದುಕೊಳ್ಳುತ್ತಾರೆ ಮತ್ತು ಬಡವರಿಗಾಗಿ ಉಚಿತ ಬಸ್ ಸೇವೆ, ಬಾಡಿಗೆ ನಿಯಂತ್ರಣ ಮತ್ತು ಕೈಗೆಟುಕುವ ಮಕ್ಕಳ ಆರೈಕೆ ಯೋಜನೆಗಳಂತಹ ನೀತಿಗಳನ್ನು ಬೆಂಬಲಿಸುತ್ತಾರೆ.

ಮಮದಾನಿ ಅವರ ಹಿಂದೂ ವಿರೋಧಿ ಹೇಳಿಕೆಗಳು ಮತ್ತು ಆಚರಣೆ

1. ಮಮದಾನಿ ಅವರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸಾರ್ವಜನಿಕವಾಗಿ ‘ವಾರ್ ಕ್ರಿಮಿನಲ್’ (ಯುದ್ಧ ಅಪರಾಧಿ) ಎಂದು ಕರೆದಿದ್ದಾರೆ ಮತ್ತು 2002 ರ ಗುಜರಾತ ಗಲಭೆಗಳಿಗೆ ಅವರನ್ನು ದೂಷಿಸಿದ್ದಾರೆ.

2. ಗುಜರಾತಿನಲ್ಲಿ ಈಗ ಒಬ್ಬನೇ ಒಬ್ಬ ಮುಸಲ್ಮಾನ ಉಳಿದಿಲ್ಲ ಎಂದು ಹೇಳಿದ್ದಾರೆ.

3. ಜನವರಿ 2024 ರಲ್ಲಿ, ಮಮದಾನಿ ಅವರು ನ್ಯೂಯಾರ್ಕ್‌ನಲ್ಲಿ ಶ್ರೀರಾಮ ಮಂದಿರದ ಪ್ರಾಣಪ್ರತಿಷ್ಠೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಹಿಂದೂಗಳ ವಿರುದ್ಧ ಅವಮಾನಕರ ಘೋಷಣೆಗಳನ್ನು ಕೂಗಲಾಗಿತ್ತು ಎಂಬ ಆರೋಪವಿದೆ.

4. ಮಮದಾನಿ ಅವರು ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆಯನ್ನು ‘ಮಸೀದಿ ಕೆಡವಿದ ಸಂಭ್ರಮ’ ಮತ್ತು ‘ಹಿಂದುತ್ವ ಫ್ಯಾಸಿಸಂನ (ಮೂಲಭೂತವಾದದ) ಸಂಕೇತ’ ಎಂದು ಕರೆದಿದ್ದಾರೆ.

ಕಟ್ಟರವಾದಿ ಗುಂಪುಗಳೊಂದಿಗೆ ಸಂಬಂಧ

1. ಮಮದಾನಿ ಅವರು ಇತ್ತೀಚೆಗೆ ಇಮಾಮ್ ಸಿರಾಜ್ ವಹಾಜ್ ಅವರನ್ನು ಭೇಟಿ ಮಾಡಿದ್ದರು, ಅವರ ಮೇಲೆ 1993 ರ ನ್ಯೂಯಾರ್ಕ್‌ನಲ್ಲಿ ನಡೆದ ‘ವರ್ಲ್ಡ್ ಟ್ರೇಡ್ ಸೆಂಟರ್’ ಬಾಂಬ್ ಸ್ಫೋಟದ ಪಿತೂರಿಯಲ್ಲಿ ಭಾಗಿಯಾಗಿದ್ದ ಗಂಭೀರ ಆರೋಪವಿದೆ.

2. ಜೊಹ್ರಾನ್ ಮಮದಾನಿ ಅವರು ‘ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್’ ನಂತಹ ಸಂಸ್ಥೆಗಳೊಂದಿಗೆ ಸಹ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಈ ಸಂಸ್ಥೆಗಳ ಮೇಲೆ ಭಾರತ ವಿರೋಧಿ ಪ್ರಚಾರ, ಹಿಂದೂ ಗುಂಪುಗಳ ಮೇಲೆ ‘ಹಿಂದೂ ಭಯೋತ್ಪಾದನೆ’ ಎಂದು ಆರೋಪಿಸಿ ಭಯ ಮತ್ತು ಅಪನಂಬಿಕೆಯ ವಾತಾವರಣವನ್ನು ಸೃಷ್ಟಿಸಿದ ಆರೋಪಗಳಿವೆ.

ಸಂಪಾದಕೀಯ ನಿಲುವು

  • ಜಾತ್ಯತೀತ ಅಮೆರಿಕದಲ್ಲಿ ಧರ್ಮದ್ವೇಷಿಗಳು ಆಯ್ಕೆಯಾಗುತ್ತಾರೆ ಎಂಬುದು ಅಮೆರಿಕದ ಜನರಿಗೆ ನಾಚಿಕೆಗೇಡಿನ ಸಂಗತಿ!
  • ಮತಾಂಧ ಮುಸಲ್ಮಾನರಿಂದ ಯುರೋಪ್ ತತ್ತರಿಸಿ ಹೋಗಿದೆ. ಮುಂದಿನ ಸರದಿ ಅಮೆರಿಕದ್ದೇ ಎಂದು ಯಾರಾದರೂ ಹೇಳಿದರೆ ಆಶ್ಚರ್ಯಪಡಬಾರದು!