ಜಿಲ್ಲಾಧಿಕಾರಿಗಳ ಆದೇಶದಿಂದಾಗಿ ನಿರಪರಾಧಿ ಯುವಕನಿಗೆ ಒಂದು ವರ್ಷ ಜೈಲಿನಲ್ಲಿರಬೇಕಾಯಿತು!

ಶಹಡೋಲ್ (ಮಧ್ಯಪ್ರದೇಶ) – ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಶಹಡೋಲ್‌ನ ಜಿಲ್ಲಾಧಿಕಾರಿ ಡಾ. ಕೇದಾರ್ ಸಿಂಗ್ ಅವರಿಗೆ ೨ ಲಕ್ಷ ರೂಪಾಯಿಗಳ ದಂಡ ವಿಧಿಸಿದೆ. ಈ ಹಣವನ್ನು ಡಾ. ಸಿಂಗ್ ಅವರು ಸ್ವಂತ ಜೇಬಿನಿಂದ ಪಾವತಿಸುವಂತೆ ಆದೇಶಿಸಿದ್ದು, ಜೊತೆಗೆ ಈ ಹಣವನ್ನು ಸಂತ್ರಸ್ತ ಯುವಕನಿಗೆ ನೀಡುವಂತೆ ಸಹ ಉಚ್ಚ ನ್ಯಾಯಾಲಯವು ಆದೇಶಿಸಿದೆ. ಡಾ. ಕೇದಾರ್ ಸಿಂಗ್ ಅವರು ನಿರ್ದೋಷಿ ಸುಶಾಂತ್ ಬೈಸ್ ಎಂಬ ಯುವಕನ ಮೇಲೆ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ (National Security Act) ಅಡಿಯಲ್ಲಿ ಕ್ರಮ ಕೈಗೊಳ್ಳಲು ಆದೇಶಿಸಿದ್ದರು. ನಿರಪರಾಧಿ ಸುಶಾಂತ್ ಬೈಸ್ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆಯಬೇಕಾಯಿತು. ಈ ಘಟನೆ ಸಪ್ಟೆಂಬರ್ ೨೦೨೪ ರಲ್ಲಿ ನಡೆದಿತ್ತು. ಈ ಸಂಪೂರ್ಣ ಪ್ರಕರಣದ ಬಗ್ಗೆ ಉಚ್ಚ ನ್ಯಾಯಾಲಯವು ಮುಖ್ಯ ಕಾರ್ಯದರ್ಶಿಯವರಿಗೆ ಗೃಹ ಇಲಾಖೆ ಮತ್ತು ಶಹಡೋಲ್ ಜಿಲ್ಲಾಧಿಕಾರಿಗಳ ವಿರುದ್ಧ ವಿಭಾಗೀಯ ವಿಚಾರಣೆ ನಡೆಸಲು ಆದೇಶಿಸಿದೆ.
ಸಂತ್ರಸ್ತ ಸುಶಾಂತ್‌ನ ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ಗುರುತಿಸಿ ಉಚ್ಚ ನ್ಯಾಯಾಲಯವು ಜಿಲ್ಲಾಧಿಕಾರಿ ಡಾ. ಕೇದಾರ್ ಸಿಂಗ್ ಅವರಿಗೆ ಈ ದಂಡವನ್ನು ವಿಧಿಸಿತು. ಸುಳ್ಳು ದಾಖಲೆಗಳು, ಸುಳ್ಳು ಮಾಹಿತಿ ಮತ್ತು ಅದರ ಸಮರ್ಥನೆಯಲ್ಲಿ ಸುಳ್ಳು ಪ್ರಮಾಣಪತ್ರವನ್ನು (affidavit) ಸಲ್ಲಿಸಿದ್ದಕ್ಕಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲು ಸಹ ಉಚ್ಚ ನ್ಯಾಯಾಲಯವು ಆದೇಶಿಸಿದೆ. ನವೆಂಬರ್ ೨೫ ರಂದು ಜಿಲ್ಲಾಧಿಕಾರಿಗಳು ಉಚ್ಚ ನ್ಯಾಯಾಲಯದಲ್ಲಿ ಹಾಜರಿರುವಂತೆ ಸಹ ಆದೇಶ ನೀಡಲಾಗಿದೆ.
ಗುಮಾಸ್ತ ಆದೇಶ ಬರೆಯುತ್ತಾನೆ ಮತ್ತು ನೀವು ಸಹಿ ಮಾಡುತ್ತೀರಿ! – ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಉಚ್ಚ ನ್ಯಾಯಾಲಯದ ಛೀಮಾರಿಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಪ್ರಮಾಣಪತ್ರದಲ್ಲಿ ಅವರ ಗುಮಾಸ್ತ ರಾಕೇಶ್ ತಿವಾರಿ ಈ ತಪ್ಪು ಮಾಡಿದ್ದಾನೆ ಎಂದು ಹೇಳಲಾಗಿದೆ ಎಂದು ಉಚ್ಚ ನ್ಯಾಯಾಲಯ ಉಲ್ಲೇಖಿಸಿದೆ. ಅವರ ವಿರುದ್ಧ ಕಾರಣ ಕೇಳುವ ನೋಟಿಸ್ ಜಾರಿಗೊಳಿಸಲಾಗಿದೆ ಮತ್ತು ವಿಭಾಗೀಯ ವಿಚಾರಣೆ ಪ್ರಾರಂಭಿಸಲಾಗಿದೆ. |
ಇದಕ್ಕೆ ಉಚ್ಚ ನ್ಯಾಯಾಲಯವು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಹೇಳಿಕೆ ಹೆಚ್ಚು ಗಂಭೀರವಾಗಿದೆ, ‘ಒಬ್ಬ ಗುಮಾಸ್ತ ಆದೇಶ ಬರೆಯುತ್ತಿದ್ದ ಮತ್ತು ನೀವು ಸಹಿ ಮಾಡುತ್ತೀರಿ’ ಎಂದು ಹೇಳಲಾಗಿದೆ. ಈಗ ಈ ಪ್ರಕರಣ ನಿಮ್ಮ ಬಳಿ ಬಂದಿದೆ, ನೀವು ಒಬ್ಬ ಗುಮಾಸ್ತನನ್ನು ‘ಬಲಿಪಶು’ವನ್ನಾಗಿ ಬಳಸುತ್ತಿದ್ದೀರಿ” ಎಂದು ನ್ಯಾಯಾಲಯ ಕಟುವಾಗಿ ಟೀಕಿಸಿದೆ.
ಸಂಪಾದಕೀಯ ನಿಲುವುಇಂತಹ ಅಧಿಕಾರಿಗಳಿಗೆ ಕೇವಲ ದಂಡ ವಿಧಿಸದೆ, ಎರಡು ಪಟ್ಟು ಹೆಚ್ಚು ಶಿಕ್ಷೆ ವಿಧಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!