
ಕಾಠ್ಮಂಡು – ನವೆಂಬರ್ ೩ ರಂದು ನೇಪಾಳದ ಯಾಲುಂಗ್ ರಿ ಶಿಖರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ೭ ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ ಹಾಗೂ ೪ ಜನರು ಕಾಣೆಯಾಗಿದ್ದಾರೆ. ೫ ಸಾವಿರದ ೬೩೦ ಮೀಟರ್ ಎತ್ತರದಲ್ಲಿರುವ ‘ಬೇಸ್ ಕ್ಯಾಂಪ್’ ಸಮೀಪ ಈ ದುರಂತ ಸಂಭವಿಸಿದೆ. ಮೃತರ ಪೈಕಿ ಅಮೆರಿಕದ ೩, ಕೆನಡಾ ಮತ್ತು ಇಟಲಿಯ ತಲಾ ೧ ಹಾಗೂ ನೇಪಾಳದ ೨ ನಾಗರಿಕರು ಸೇರಿದ್ದಾರೆ.
ಪೊಲೀಸ್ ಮತ್ತು ತುರ್ತು ಪರಿಸ್ಥಿತಿ ತಂಡಗಳು ಕಾಣೆಯಾದವರಿಗಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಗುತ್ತಿದೆ. ಯಾಲುಂಗ್ ರಿ ಇದು ‘ಟ್ರಕ್ಕಿಂಗ್’ ಗಾಗಿ (ಚಾರಣಕ್ಕಾಗಿ) ವಿಶೇಷ ಅನುಮತಿ ಅಗತ್ಯವಿರುವ, ತಾಂತ್ರಿಕವಾಗಿ ಸವಾಲಿನ ಮತ್ತು ಹಿಮಪಾತಕ್ಕೆ ಒಳಗಾಗುವ ಪ್ರದೇಶವೆಂದು ಪರಿಗಣಿಸಲಾಗಿದೆ. ೧೫ ಜನರ ತಂಡವು ಗೌರಿಶಂಕರ ಮತ್ತು ಯಾಲುಂಗ್ ರಿ ಕಡೆಗೆ ಹೋಗುತ್ತಿರುವಾಗ ಬೇಸ್ ಕ್ಯಾಂಪ್ ಸಮೀಪ ಹಿಮಪಾತ ಸಂಭವಿಸಿದೆ. ಈ ಪ್ರದೇಶದಲ್ಲಿ ಈ ಮೊದಲು ಕೂಡ ಹಲವಾರು ಬಾರಿ ಅಪಘಾತಗಳು ಸಂಭವಿಸಿದ್ದು ಅದರಲ್ಲಿ ಕೆಲವು ನಾಗರಿಕರು ಸಾವನ್ನಪ್ಪಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation