|

ಸಾಗರ (ಮಧ್ಯಪ್ರದೇಶ) – ಸಾಗರ ಜಿಲ್ಲೆಯ ಝಾನ್ಸಿ ರಸ್ತೆಯಲ್ಲಿರುವ ಮಾನ್ ಜಾಬೋಟ್ ಪ್ರದೇಶದಲ್ಲಿ ವಾಸಿದ ಮುಕೇರಿ ಹೆಸರಿನ ವ್ಯಕ್ತಿಯು ಶಿವ ದೇವಸ್ಥಾನಕ್ಕೆ ನುಗ್ಗಿ ಶಿವಲಿಂಗ ಮತ್ತು ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾನೆ. ಈ ಘಟನೆಯ ನಂತರ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಸ್ಥಳೀಯರು ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು. ಪೊಲೀಸರು ಆರೋಪಿ ವಾಸಿದನನ್ನು ಬಂಧಿಸಿದ್ದಾರೆ. ಆತ ದೇವಸ್ಥಾನದ ಪಕ್ಕದಲ್ಲೇ ಮೊಟ್ಟೆ ಮಾರಾಟದ ಅಂಗಡಿ ನಡೆಸುತ್ತಿದ್ದಾನೆ. ಈ ದೇವಸ್ಥಾನದ ಸುತ್ತಮುತ್ತಲೂ ಮುಸಲ್ಮಾನರ ಮಾಂಸ, ಮೀನು ಮತ್ತು ಮೊಟ್ಟೆ ಮಾರಾಟದ ಅಂಗಡಿಗಳಿವೆ. ಈ ಪ್ರದೇಶದಲ್ಲಿ ಗೋಹತ್ಯೆಯ ಘಟನೆಗಳೂ ಹೆಚ್ಚಾಗಿ ನಡೆಯುತ್ತವೆ. (ಹಿಂದೂಗಳ ದೇವಸ್ಥಾನದ ಪಕ್ಕದಲ್ಲಿ ಮುಸಲ್ಮಾನರ ಇಂತಹ ಅಂಗಡಿಗಳಿರುವುದು ಹೇಗೆ ಸಾಧ್ಯ? ಸರಕಾರವು ತಕ್ಷಣವೇ ಈ ಅಂಗಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು, ಎಂದೇ ಎಲ್ಲ ಹಿಂದೂಗಳಿಗೆ ಅನಿಸುತ್ತದೆ! – ಸಂಪಾದಕರು)
ಹೀಗೆ ಮುಂದುವರಿದರೆ ರಸ್ತೆಗಳಲ್ಲಿ ಶಾಂತಿ ಉಳಿಯುವುದಿಲ್ಲ ! – ಹಿಂದೂ ನಾಯಕ ಕಪಿಲ್ ಸೋನಿ ಅವರ ಎಚ್ಚರಿಕೆ!
ಹಿಂದೂ ನಾಯಕ ಕಪಿಲ ಸೋನಿ ಅವರು ಮಾತನಾಡಿ, ದೇವಸ್ಥಾನದ ಎರಡೂ ಬದಿಗಳಲ್ಲಿ ಮಾಂಸ ಮಾರಾಟದ ಅಂಗಡಿಗಳಿವೆ ಮತ್ತು ಒಬ್ಬ ಮುಸ್ಲಿಂ ಯುವಕ ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾನೆ. ಸಾಗರದಲ್ಲಿ ಧಾರ್ಮಿಕ ಸೌಹಾರ್ದತೆಯನ್ನು ಕೆಡಿಸುವ ಕೆಲಸವನ್ನು ಮುಸ್ಲಿಂ ಸಮುದಾಯದ ಕೆಲವರು ಯಾವಾಗಲೂ ಮಾಡುತ್ತಾರೆ. ‘ಸರ್ ತನ್ ಸೇ ಜುದಾ’ (ಶಿರಚ್ಛೇದ) ನಂತಹ ಘೋಷಣೆಯಾಗಿರಲಿ ಅಥವಾ ದೇವಸ್ಥಾನದಲ್ಲಿ ವಿಗ್ರಹಗಳನ್ನು ಧ್ವಂಸಗೊಳಿಸುವ ಘಟನೆಗಳಾಗಿರಲಿ, ಈಗ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಪರಿಸ್ಥಿತಿ ಹೇಗೆ ಹದಗೆಡುತ್ತದೆ ಎಂಬುದನ್ನು ಸಾಗರದ ಹಿಂದೂಗಳು ತೋರಿಸಿಕೊಡುತ್ತಾರೆ. ಜಿಲ್ಲಾಡಳಿತ ಇಲ್ಲಿಯವರೆಗೆ ಕೇವಲ ಔಪಚಾರಿಕ ಕ್ರಮಗಳನ್ನು ಮಾತ್ರ ಕೈಗೊಂಡಿದೆ. ಹೀಗೆ ಮುಂದುವರಿದರೆ ರಸ್ತೆಗಳಲ್ಲಿ ಶಾಂತಿ ಉಳಿಯುವುದಿಲ್ಲ ಎಂದೂ ಅವರು ಎಚ್ಚರಿಕೆ ನೀಡಿದರು.
ಸಂಪಾದಕೀಯ ನಿಲುವು
|
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್