
ಮುಂಬಯಿ – ಧರ್ಮಭಾಸ್ಕರ ಪ.ಪೂ. ವಿನಾಯಕ ಮಸುರಕರ್ ಮಹಾರಾಜರು ಗೋರೆಗಾಂವ್‌ನಲ್ಲಿ ಸ್ಥಾಪಿಸಿದ ಮತ್ತು ‘ಮಸುರಾಶ್ರಮ’ ಎಂಬ ಹೆಸರಿನಿಂದ ಗುರುತಿಸಲ್ಪಡುವ ಆಶ್ರಮದ ಕಾರ್ಯಕಾರಿ ಟ್ರಸ್ಟಿ ದಿಲೀಪ್ ಯೆರೂಣಕರ್ ಅವರು ನವೆಂಬರ್ ೩, ೨೦೨೫ ರಂದು ಹೃದಯಾಘಾತದಿಂದ ನಿಧನರಾದರು. ನವೆಂಬರ್ ೪ ರಂದು ಅವರ ಪಾರ್ಥಿವ ಶರೀರಕ್ಕೆ ಅಗ್ನಿಸಂಸ್ಕಾರ ಮಾಡಲಾಯಿತು.
ನವೆಂಬರ್ ೪ ರಂದು ಬೆಳಗ್ಗೆ ಮಸುರಾಶ್ರಮದ ಆವರಣದಲ್ಲಿ ಅವರ ಪಾರ್ಥಿವ ಶರೀರವನ್ನು ದರ್ಶನಕ್ಕಾಗಿ ಇರಿಸಲಾಗಿತ್ತು. ಈ ವೇಳೆ ಅಪಾರ ಸಂಖ್ಯೆಯ ಭಕ್ತರು ದರ್ಶನಕ್ಕಾಗಿ ನೆರೆದಿದ್ದರು. ದಿಲೀಪ್ ಯೆರೂಣಕರ್ ಅವರು ಅತ್ಯಂತ ವಿನಮ್ರ ಮತ್ತು ಮಿತಭಾಷಿಯಾಗಿದ್ದರು. ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಇರುತ್ತಿತ್ತು. ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುವ ಕಾರ್ಯಕರ್ತರಿಗೆ ಅವರು ಆಧಾರಸ್ತಂಭವಾಗಿದ್ದರು.
ಮತಾಂತರಗೊಂಡವರ ಶುದ್ಧೀಕರಣದ ಮಹಾನ್ ಕಾರ್ಯ!
‘ಮತಾಂತರಗೊಂಡ ಹಿಂದೂಗಳು ಮತ್ತೆ ಹಿಂದೂ ಧರ್ಮಕ್ಕೆ ಬರಲು ಇಚ್ಛಿಸಿದರೆ, ಅದಕ್ಕಾಗಿ ವಿಧಿಯನ್ನು ಯಾರು ಮತ್ತು ಎಲ್ಲಿ ಮಾಡುತ್ತಾರೆ?’ ಎಂಬ ದೊಡ್ಡ ಸಮಸ್ಯೆ ಅಂತಹ ಹಿಂದೂಗಳ ಮುಂದೆ ಇರುತ್ತದೆ. ಸ್ವಧರ್ಮಕ್ಕೆ ಬರಲು ಇಚ್ಛಿಸುವ ಅಂತಹ ಮತಾಂತರಗೊಂಡವರಿಗೆ ಮತ್ತೆ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳುವ ವಿಧಿಯನ್ನು ಮಸುರಾಶ್ರಮದಲ್ಲಿ ಮಾಡಲಾಗುತ್ತದೆ. ಪ.ಪೂ. ಮಸೂರಕರ್ ಮಹಾರಾಜರ ಕಾಲದಿಂದಲೂ ಈ ಕಾರ್ಯವು ನಿರಂತರವಾಗಿ ನಡೆಯುತ್ತಿದೆ. ಆಶ್ರಮ ಸ್ಥಾಪನೆಯಾದಾಗಿನಿಂದ ಇಲ್ಲಿ ಅನೇಕ ಮತಾಂತರಗೊಂಡ ಹಿಂದೂಗಳ ಶುದ್ಧೀಕರಣ ಮಾಡಲಾಗಿದೆ. ಆದ್ದರಿಂದ, ವಿವಿಧ ಹಿಂದುತ್ವನಿಷ್ಠರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಈ ಆಶ್ರಮದ ಬಗ್ಗೆ ವಿಶೇಷ ಆಸಕ್ತಿ ಹೊಂದಿವೆ. ದಿಲೀಪ್ ಯೆರೂಣಕರ್ ಅವರು ವಿವಿಧ ಹಿಂದುತ್ವನಿಷ್ಠ ಮತ್ತು ಆಧ್ಯಾತ್ಮಿಕ ಸಂಘಟನೆಗಳೊಂದಿಗೆ ಆತ್ಮೀಯ ಸಂಬಂಧಗಳನ್ನು ಹೊಂದಿದ್ದರು.
ಸನಾತನ ಸಂಸ್ಥೆಯ ಬಗ್ಗೆ ಆತ್ಮೀಯತೆ!ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕಾರ್ಯದ ಬಗ್ಗೆ ದಿಲೀಪ್ ಯೆರೂಣಕರ್ ಅವರಿಗೆ ದೊಡ್ಡ ಗೌರವವಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಬಗ್ಗೆ ಅವರು ಯಾವಾಗಲೂ ಭಾವಪೂರ್ಣವಾಗಿ ಮಾತನಾಡುತ್ತಿದ್ದರು ಮತ್ತು ಕೃತಜ್ಞತೆ ವ್ಯಕ್ತಪಡಿಸುತ್ತಿದ್ದರು. ಸನಾತನದ ಸಾಧಕರು ಮತ್ತು ಸನಾತನ ಸಂಸ್ಥೆಯು ಮಾಡುತ್ತಿರುವ ಕಾರ್ಯದ ಬಗ್ಗೆ ಅವರ ಮನಸ್ಸಿನಲ್ಲಿ ಆತ್ಮೀಯತೆ ಇತ್ತು. ಸನಾತನ ಸಂಸ್ಥೆಯ ಸಾಧಕರಿಗೆ ಅವರು ಯಾವಾಗಲೂ ಸರ್ವತೋಮುಖ ಸಹಾಯ ಮಾಡುತ್ತಿದ್ದರು. ‘ಸನಾತನದ ಗ್ರಂಥಗಳು ಎಲ್ಲರಿಗೂ ತಲುಪಬೇಕು’ ಎಂದು ಅವರಿಗೆ ಯಾವಾಗಲೂ ಅನಿಸುತ್ತಿತ್ತು. ಆದ್ದರಿಂದ ಆಶ್ರಮದಲ್ಲಿ ಯಾವುದೇ ಕಾರ್ಯಕ್ರಮವಿದ್ದಾಗ, ಅವರು ಸನಾತನದ ಸಾಧಕರಿಗೆ ಅಲ್ಲಿ ಗ್ರಂಥ ಪ್ರದರ್ಶನವನ್ನು ಏರ್ಪಡಿಸಲು ತಪ್ಪದೇ ಹೇಳುತ್ತಿದ್ದರು. ಅವರು ನಿಯಮಿತವಾಗಿ ದೈನಿಕ ‘ಸನಾತನ ಪ್ರಭಾತ’ವನ್ನು ಓದುತ್ತಿದ್ದರು. |
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!