
ಗುವಾಹಟಿ (ಅಸ್ಸಾಂ) – ಅಸ್ಸಾಂನ ಸುಪ್ರಸಿದ್ಧ ಗಾಯಕ ಮತ್ತು ರಾಜ್ಯದ ಸಾಂಸ್ಕೃತಿಕ ಪ್ರತೀಕವೆಂದು ಪರಿಗಣಿಸಲ್ಪಟ್ಟಿರುವ ಜುಬಿನ್ ಗರ್ಗ್ ಅವರ ಸಿಂಗಾಪುರದಲ್ಲಿ ಸಂಭವಿಸಿದ ಅನುಮನಾಸ್ಪದ ಸಾವಿನ ಪ್ರಕರಣದಲ್ಲಿ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರಮಾ ಅವರು ದೊಡ್ಡ ಬಹಿರಂಗಪಡಿಸಿದ್ದಾರೆ. ಅವರು, ಜುಬಿನ್ ಗರ್ಗ್ ಅವರದ್ದು ಕೊಲೆಯಾಗಿದೆ; ಆದರೆ ತನಿಖೆ ಇನ್ನೂ ನಡೆಯುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ೭ ಜನರನ್ನು ಬಂಧಿಸಿದ್ದಾರೆ. ಸಿಂಗಾಪುರ ಪೊಲೀಸರು ಸಹ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ ೮ ರೊಳಗೆ ಆರೋಪಪಟ್ಟಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
We remain resolute in our quest to deliver justice to our #BelovedZubeen.
The SIT will submit its chargesheet within December 18-19. pic.twitter.com/govqvSsfCs
— Himanta Biswa Sarma (@himantabiswa) November 3, 2025
ಈ ಪ್ರಕರಣದಲ್ಲಿ ಪೊಲೀಸರು ಜುಬಿನ್ ಗರ್ಗ್ ಅವರ ಸಂಬಂಧಿ ಮತ್ತು ಅಸ್ಸಾಂನ ಪೊಲೀಸ್ ಉಪಾಧೀಕ್ಷಕ ಸಂದೀಪನ್ ಗರ್ಗ್ ಅವರನ್ನು ಬಂಧಿಸಿದ್ದಾರೆ. ಸಿಂಗಾಪುರದ ಕಾರ್ಯಕ್ರಮದ ಆಯೋಜಕ ಶ್ಯಾಮಕನು ಮಹಂತ, ವ್ಯವಸ್ಥಾಪಕ ಸಿದ್ಧಾರ್ಥ ಶರ್ಮಾ ಮತ್ತು ಬ್ಯಾಂಡ್‌ನ ಸದಸ್ಯರಾದ ಶೇಖರ್ ಜ್ಯೋತಿ ಮತ್ತು ಅಮೃತ್ ಪ್ರಭಾ ಮಹಂತ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ, ಹಾಗೆಯೇ ಜುಬಿನ್ ಗರ್ಗ್ ಅವರ ಅಂಗರಕ್ಷಕರಾದ ನಂದೇಶ್ವರ ಬೋರಾ ಮತ್ತು ಪ್ರಬೀರ್ ವೈಶ್ಯ ಅವರನ್ನು ಸಹ ಬಂಧಿಸಲಾಗಿದೆ. ಜುಬಿನ್ ಗರ್ಗ್ ಅವರ ಬ್ಯಾಂಕ್ ಖಾತೆಗಳಿಂದ ಕೆಲವು ದಿನಗಳಲ್ಲಿ ಸುಮಾರು ೧ ಕೋಟಿ ೧೦ ಲಕ್ಷ ರೂಪಾಯಿಗಳ ವಹಿವಾಟುಗಳು ನಡೆದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
🚨 Big Revelation by Assam CM Himanta Biswa Sarma!
🎤 Singer Zubeen Garg’s death in Singapore was not an accident; it was MURDER
👮♂️ 7 Arrested: DSP Sandipan Garg (relative), event organiser, manager, 2 bodyguards & 2 band members.
💰 ₹1.10 crore in suspicious transactions… pic.twitter.com/zFjYrccZg1
— Sanatan Prabhat (@SanatanPrabhat) November 4, 2025
ಅಸ್ಸಾಂನ ಸುಪುತ್ರರಾದ ಜುಬಿನ್ ಗರ್ಗ್ ಅವರು ಸೆಪ್ಟೆಂಬರ್ ೧೯, ೨೦೨೫ ರಂದು ಸಿಂಗಾಪುರದಲ್ಲಿ ‘ಸ್ಕೂಬಾ ಡೈವಿಂಗ್’ ಮಾಡುವಾಗ ಮೃತಪಟ್ಟಿದ್ದರು. ಅವರು ಸೆಪ್ಟೆಂಬರ್ ೨೦-೨೧ ರಂದು ನಡೆಯಲಿರುವ ಸಂಗೀತ ಕಾರ್ಯಕ್ರಮಕ್ಕಾಗಿ ಅಲ್ಲಿಗೆ ಹೋಗಿದ್ದರು.
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ