ಆರ್ಥಿಕ ಅಕ್ರಮ ಮತ್ತು ವಿದೇಶಿ ವಿನಿಮಯ ದುರ್ಬಳಕೆಯ ಆರೋಪ

ಸಂತ ಕಬೀರ್ ನಗರ (ಉತ್ತರಪ್ರದೇಶ) – ಇಲ್ಲಿ ಬ್ರಿಟಿಷ್ ಪೌರತ್ವ ಪಡೆದಿದ್ದ ಮೌಲಾನಾ ಶಮ್ಸುಲ್ ಹುಡಾ ಖಾನ್ ವಿರುದ್ಧ ವಂಚನೆ ಮತ್ತು ವಿದೇಶಿ ವಿನಿಮಯ ದುರ್ಬಳಕೆಯ ಆರೋಪದಡಿ ಪ್ರಕರಣ ದಾಖಲಾಗಿದೆ. ಬ್ರಿಟನ್‌ನ ಪೌರತ್ವ ಸ್ವೀಕರಿಸಿದ ನಂತರವೂ ಅವರು ‘ಉತ್ತರಪ್ರದೇಶ ಮದರಸಾ ಶಿಕ್ಷಣ ಮಂಡಳಿ’ಯಿಂದ ವೇತನವನ್ನು ಪಡೆದಿದ್ದರು ಮತ್ತು ಸ್ಥಳೀಯ ಭೂಮಿಯಲ್ಲಿ ಮದರಸಾವನ್ನು ನಡೆಸುತ್ತಿದ್ದರು.
🚨 Case filed against UK-based Maulana Shamsul Huda Khan for collecting illegal foreign funds for a madrasa in UP
💰 UP ATS probe reveals:
– Misuse of foreign currency
– Unauthorised financial transfers
– Links with radical elements in Pakistan & Kashmir
Serious threat to… pic.twitter.com/LXAuOURR5S
— Sanatan Prabhat (@SanatanPrabhat) November 3, 2025
ವಿದೇಶದಿಂದ ಹಣ ಸಂಗ್ರಹಿಸಿ ಕಮಿಷನ್ ಪಡೆದ ಆರೋಪ
ಮದರಸಾ ಶಿಕ್ಷಣ ಮಂಡಳಿಯ ನೋಂದಣಿ ಅಧಿಕಾರಿಗಳ ಆದೇಶದ ಮೇರೆಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಪ್ರವೀಣ್ ಕುಮಾರ್ ಮಿಶ್ರಾ ಅವರು ಈ ಸಂಬಂಧ ದೂರು ನೀಡಿದ್ದರು. ದೂರಿನ ಪ್ರಕಾರ, ಖಾನ್ ವಿವಿಧ ವಿದೇಶಿ ಸಂಸ್ಥೆಗಳು ಮತ್ತು ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ ಮದರಸಾಗಳಿಗಾಗಿ ಆರ್ಥಿಕ ನಿಧಿಯನ್ನು ಸಂಗ್ರಹಿಸುತ್ತಿದ್ದನು ಮತ್ತು ಅದನ್ನು ತಮ್ಮ ಮೂಲಕ ವಿತರಿಸುತ್ತಿದ್ದರು. ಈ ಪ್ರಕ್ರಿಯೆಯಲ್ಲಿ ಅವನು ತಮಗಾಗಿ ನಿರ್ದಿಷ್ಟ ಕಮಿಷನ್ ಇಟ್ಟುಕೊಳ್ಳುತ್ತಿದ್ದನು.
ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ಮತ್ತು ಮದರಸಾ ಮೂಲಕ ಇಸ್ಲಾಮೀಕರಣದ ಪ್ರಸಾರ
ಮೌಲಾನಾ ಅವರು ‘ಕುಲಿಯಾತುಲ್ ಬನಾತಿರ್ ರಜಬಿಯಾ ಎಜುಕೇಷನಲ್ ಅಂಡ್ ವೆಲ್‌ಫೇರ್ ಸೊಸೈಟಿ’ ಮತ್ತು ‘ರಜಾ ಫೌಂಡೇಶನ್’ ಎಂಬ 2 ಸಂಸ್ಥೆಗಳ ಮೂಲಕ, ಹಾಗೆಯೇ ಖಲೀಲಾಬಾದ್‌ನಲ್ಲಿ ಸ್ಥಾಪಿಸಲಾದ ಮದರಸಾದ ಮೂಲಕ ವಿದೇಶದಿಂದ ಹಣವನ್ನು ಸಂಗ್ರಹಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿಚಾರಣೆಯಲ್ಲಿ, ಬ್ರಿಟಿಷ್ ಪೌರತ್ವ ಸ್ವೀಕರಿಸಿದ ನಂತರವೂ ಅವರು ಪದೇ ಪದೇ ವಿದೇಶಕ್ಕೆ ಪ್ರಯಾಣ ಮಾಡುತ್ತಿದ್ದರು ಮತ್ತು ಭಾರತದಲ್ಲಿನ ಇಸ್ಲಾಮೀಕರಣಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದ್ದರು ಎಂಬುದು ಕಂಡುಬಂದಿದೆ.
ತನಿಖೆಯ ನಂತರ, ಸಂಬಂಧಪಟ್ಟ ಮದರಸಾಗಳು ಮತ್ತು ಸಂಸ್ಥೆಗಳ ಮಾನ್ಯತೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಮತ್ತು ಇಲಾಖೆಯು ಪ್ರಕರಣವನ್ನು ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಅಗತ್ಯವನ್ನು ವ್ಯಕ್ತಪಡಿಸಿದೆ.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers