ಕ್ರೈಸ್ತರ ಹತ್ಯೆಗಳನ್ನು ನಿಲ್ಲಿಸದಿದ್ದರೆ, ಸೈನ್ಯ ಕಾರ್ಯಾಚರಣೆ ಶತಸಿದ್ಧ ! – ಡೊನಾಲ್ಡ್ ಟ್ರಂಪ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನೈಜೀರಿಯಾಗೆ ಬೆದರಿಕೆ

ವಾಷಿಂಗ್ಟನ್ (ಅಮೆರಿಕ) – ನೈಜೀರಿಯಾ ಸರಕಾರವು ಅಮಾಯಕ ಕ್ರೈಸ್ತರ ಹತ್ಯೆಗಳನ್ನು ತಡೆಯಲು ವಿಫಲವಾದರೆ, ಅಮೆರಿಕವು ಕೇವಲ ನಿಮ್ಮ ಆರ್ಥಿಕ ಸಹಾಯವನ್ನು ನಿಲ್ಲಿಸುವುದಿಲ್ಲ, ಬದಲಾಗಿ ಸೇನಾ ಕ್ರಮ ಕೈಗೊಳ್ಳುತ್ತದೆ, ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ನೀಡಿದ್ದಾರೆ. ಈ ಕುರಿತು ಅವರು ‘ಟೂತ್ ಸೋಶಿಯಲ್’ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಬರೆದು (ಪೋಸ್ಟ್ ಮಾಡಿ) ಎಚ್ಚರಿಕೆ ನೀಡಿದ್ದಾರೆ.

ರಕ್ಷಣಾ ಇಲಾಖೆಗೆ ಸಿದ್ಧರಾಗಿರುವಂತೆ ಆದೇಶ

ಇದಲ್ಲದೆ, ಟ್ರಂಪ್ ಅವರು ಅಮೆರಿಕದ ರಕ್ಷಣಾ ಇಲಾಖೆಗೆ ಸಂಭವನೀಯ ಕಾರ್ಯಾಚರಣೆಗಾಗಿ ಸಿದ್ಧರಾಗಿರುವಂತೆ ಆದೇಶ ನೀಡಿದ್ದಾರೆ. ‘ದಾಳಿ ನಡೆದರೆ ಅದು ತ್ವರಿತ, ನಿರ್ಣಾಯಕ ಮತ್ತು ಕ್ರೂರವಾಗಿರುತ್ತದೆ, ಭಯೋತ್ಪಾದಕರು ನಮ್ಮ ಕ್ರೈಸ್ತ ಸಹೋದರರ ಮೇಲೆ ಹೇಗೆ ಮಾಡುತ್ತಾರೋ ಅದೇ ರೀತಿಯಲ್ಲಿ ಮಾಡಲಾಗುವುದು. ಇನ್ನು ಮುಂದೆ ಅಮೆರಿಕ ಕೇವಲ ಮಾತನಾಡುವುದಿಲ್ಲ, ಬದಲಾಗಿ ನೇರ ಕ್ರಮ ಕೈಗೊಳ್ಳುತ್ತದೆ’ ಎಂಬ ಎಚ್ಚರಿಕೆಯನ್ನೂ ಟ್ರಂಪ್ ನೀಡಿದ್ದಾರೆ.

ಜಗತ್ತಿನಾದ್ಯಂತ ಕ್ರೈಸ್ತರ ಮೇಲೆ ದೌರ್ಜನ್ಯವಾಗುತ್ತಿದ್ದರೂ ಅಮೆರಿಕ ಮೌನವಾಗಿರುವುದಿಲ್ಲ!

ಟ್ರಂಪ್ ಅವರು ನೈಜೀರಿಯಾವನ್ನು ‘ಸ್ಪೆಷಲ್ ಕನ್ಸರ್ನ್ ಕಂಟ್ರಿ’ (ವಿಶೇಷ ಕಾಳಜಿಯ ದೇಶ) ಎಂದು ಘೋಷಿಸಿ, ದೇಶದಲ್ಲಿ ಕ್ರೈಸ್ತರ ಅಸ್ತಿತ್ವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ. ಸಾವಿರಾರು ಕ್ರೈಸ್ತರ ಹತ್ಯೆಗಳು ನಡೆಯುತ್ತಿದ್ದು, ಇದು ಕಟ್ಟರ್ ಇಸ್ಲಾಮಿ ಶಕ್ತಿಗಳಿಂದ ನಡೆಸಲಾದ ಯೋಜಿತ ನರಮೇಧವಾಗಿದೆ. ಜಗತ್ತಿನಾದ್ಯಂತ ಕ್ರೈಸ್ತರ ಮೇಲೆ ದೌರ್ಜನ್ಯವಾಗುತ್ತಿದ್ದರೂ ಅಮೆರಿಕ ಮೌನವಾಗಿರುವುದಿಲ್ಲ. ಈಗ ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಟ್ರಂಪ್ ಅವರು ಅಮೆರಿಕದ ಸಂಸದರಿಗೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.

ನಮ್ಮ ದೇಶದಲ್ಲಿ ಯಾವುದೇ ಧಾರ್ಮಿಕ ಸಮುದಾಯದ ಮೇಲೆ ಸಂಘಟಿತ ದೌರ್ಜನ್ಯ ನಡೆಯುತ್ತಿಲ್ಲ! – ನೈಜೀರಿಯಾದ ಸ್ಪಷ್ಟೀಕರಣ

ಟ್ರಂಪ್ ಅವರ ಬೆದರಿಕೆಯ ನಂತರ, ನೈಜೀರಿಯಾದ ಅಧ್ಯಕ್ಷರಾದ ಬೋಲಾ ಅಹ್ಮದ್ ಟಿನೂಬೂ ಅವರು ಟ್ರಂಪ್ ಅವರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅವರು, ದೇಶದಲ್ಲಿ ಯಾವುದೇ ಧಾರ್ಮಿಕ ಸಮುದಾಯದ ಮೇಲೆ ಸಂಘಟಿತ ದೌರ್ಜನ್ಯಗಳು ನಡೆಯುತ್ತಿಲ್ಲ ಎಂದು ಹೇಳಿದರು.

ನೈಜೀರಿಯಾದ ಮಾಹಿತಿ ಸಚಿವ ಮೊಹಮ್ಮದ್ ಇದ್ರಿಸ್ ಅವರು, ಅಮೆರಿಕದ ಆರೋಪಗಳು ದಾರಿತಪ್ಪಿಸುವಂತಿದ್ದು, ನೈಜೀರಿಯಾ ಶಾಂತಿ ಮತ್ತು ಧಾರ್ಮಿಕ ಸೌಹಾರ್ದತೆಯನ್ನು ಕಾಪಾಡಲು ಬದ್ಧವಾಗಿದೆ’, ಎಂದು ಹೇಳಿದ್ದಾರೆ.

ಏನು ಈ ಪ್ರಕರಣ?

ನೈಜೀರಿಯಾದಲ್ಲಿ ಕೃಷಿ ಮಾಡುವವರು ಬಹುತೇಕ ಕ್ರೈಸ್ತರು, ಮತ್ತು ಪಶುಸಂಗೋಪನೆ ಮಾಡುವವರು ಮುಸ್ಲಿಮರಾಗಿದ್ದಾರೆ. ಅವರ ನಡುವೆ ನೀರು, ಭೂಮಿ ಇತ್ಯಾದಿ ವಿಷಯಗಳ ಬಗ್ಗೆ ನಿರಂತರ ಸಂಘರ್ಷ ನಡೆಯುತ್ತಿರುತ್ತದೆ. ಇದರಲ್ಲಿ ಕ್ರೈಸ್ತರ ಮೇಲೆ ದಾಳಿ ಮಾಡಲಾಗುತ್ತದೆ. ಅದೇ ಸಮಯದಲ್ಲಿ, ‘ಬೊಕೊ ಹರಾಮ್’ ನಂತಹ ಜಿಹಾದಿ ಭಯೋತ್ಪಾದಕ ಸಂಘಟನೆಗಳು ಸಹ ಚರ್ಚ್‌ಗಳು ಮತ್ತು ಕ್ರೈಸ್ತರ ಮೇಲೆ ದಾಳಿ ಮಾಡಿ ಅವರನ್ನು ಕೊಲ್ಲುತ್ತವೆ.

ಸಂಪಾದಕೀಯ ನಿಲುವು

  • ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ ಸೇರಿದಂತೆ ಇತರ ದೇಶಗಳಲ್ಲಿ ಹಿಂದೂಗಳ ಹತ್ಯೆಗಳ ಬಗ್ಗೆ ಭಾರತದ ಎಲ್ಲಪಕ್ಷ ಸರಕಾರಗಳು ಇದುವರೆಗೆ ಎಂದಾದರೂ ಇಂತಹ ಎಚ್ಚರಿಕೆ ನೀಡಿದ್ದವೆಯೇ?
  • ಸ್ವಧರ್ಮ ಮತ್ತು ಧರ್ಮಬಾಂಧವರ ಬಗ್ಗೆ ಕ್ರೈಸ್ತರು ಮತ್ತು ಮುಸ್ಲಿಮರು ಎಷ್ಟು ಸೂಕ್ಷ್ಮವಾಗಿರುತ್ತಾರೋ, ಅಷ್ಟು ಹಿಂದೂಗಳು ಇರುವುದಿಲ್ಲ, ಅದಕ್ಕಾಗಿಯೇ ಅವರು ಕೊಲ್ಲಲ್ಪಡುತ್ತಾರೆ. ಇದು ಹಿಂದೂಗಳ ಗಮನಕ್ಕೆ ಬರುವುದು ಯಾವಾಗ?
  • ಟ್ರಂಪ್ ಅವರಿಂದ lಆದರ್ಶವನ್ನು ತೆಗೆದುಕೊಂಡು, ಈಗಲಾದರೂ ಭಾರತ ಸರಕಾರವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವ ಹಿಂದೂಗಳ ರಕ್ಷಣೆಗಾಗಿ ಸೇನಾ ಕ್ರಮ ಕೈಗೊಳ್ಳಲು ಸಿದ್ಧವಾಗಲಿದೆಯೇ?