ಪಹಲ್ಗಾಮ್ ದಾಳಿಯ ನಂತರ ರೋಹಿಂಗ್ಯಾಗಳ ಮೇಲೆ ಒತ್ತಡ ಹೆಚ್ಚಾಯಿತು ಎಂಬ ವಿಚಿತ್ರ ಶೋಧ!

ನವದೆಹಲಿ – ಭಾರತವು ಮ್ಯಾನಮಾರ್ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವರದಿಯನ್ನು ‘ಪಕ್ಷಪಾತಿ’ ಮತ್ತು ‘ಧಾರ್ಮಿಕ ಪೂರ್ವಾಗ್ರಹ ಪೀಡಿತ’ ಎಂದು ಕರೆದು ತೀವ್ರ ಪದಗಳಲ್ಲಿ ಖಂಡಿಸಿದೆ. ಈ ವರದಿಯು, ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಾರತದಲ್ಲಿನ ರೋಹಿಂಗ್ಯಾ ವಲಸಿಗರ ಸ್ಥಿತಿಯ ಮೇಲೆ ಪರಿಣಾಮ ಬೀರಿದೆ’, ಎಂದು ಉಲ್ಲೇಖಿಸಿತ್ತು.
ವಿಶ್ವಸಂಸ್ಥೆಯ ಮ್ಯಾನಮಾರನ ಮಾನವ ಹಕ್ಕುಗಳ ಕುರಿತ ವಿಶೇಷ ಪ್ರತಿನಿಧಿ ಥಾಮಸ ಆಂಡ್ರ್ಯೂಸ್ ಅವರು ಈ ಭಾರತ-ವಿರೋಧಿ ವರದಿಯನ್ನು ಮಂಡಿಸಿದ್ದರು. ಈ ವರದಿಗೆ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಉತ್ತರಿಸಿದ ಭಾಜಪ ಸಂಸದ ದಿಲೀಪ ಸೈಕಿಯಾ ಅವರು, ಏಪ್ರಿಲ್ 2025 ರಲ್ಲಿ ನಡೆದ ಪಹಲ್ಗಾಮ್ ದಾಳಿಯ ಅಮಾಯಕ ಸಂತ್ರಸ್ತರ ಕುರಿತು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಗಳ ಪಕ್ಷಪಾತಿ ನಿಲುವನ್ನು ನಾವು ಬಲವಾಗಿ ಖಂಡಿಸುತ್ತೇವೆ. ‘ಈ ದಾಳಿಯು ಮ್ಯಾನಮಾರನ ನಿರಾಶ್ರಿತರ ಮೇಲೆ ಪರಿಣಾಮ ಬೀರಿದೆ’ ಎಂಬ ಆರೋಪವು ಸಂಪೂರ್ಣವಾಗಿ ತಪ್ಪು ಮತ್ತು ದಾರಿತಪ್ಪಿಸುವಂತದ್ದು. ಇಂತಹ ಪೂರ್ವಾಗ್ರಹ ಪೀಡಿತ ಮತ್ತು ಏಕಪಕ್ಷೀಯ ವಿಶ್ಲೇಷಣೆಯನ್ನು ಭಾರತವು ತೀವ್ರವಾಗಿ ಖಂಡಿಸುತ್ತದೆ. ಈ ವರದಿಯು ಮಾಧ್ಯಮಗಳ ಸುಳ್ಳು ಮಾಹಿತಿಯನ್ನು ಆಧರಿಸಿದ್ದು, ಇದು ಭಾರತಕ್ಕೆ ಅಪಕೀರ್ತಿ ತರುವಂತಹದ್ದಾಗಿದೆ. ಭಾರತವು ಎಲ್ಲ ಧರ್ಮಗಳ ದೇಶವಾಗಿದೆ. ಇಲ್ಲಿ 20 ಕೋಟಿಗೂ ಹೆಚ್ಚು ಮುಸ್ಲಿಮರು ವಾಸಿಸುತ್ತಿದ್ದಾರೆ. ಈ ಪ್ರಮಾಣವು ಜಗತ್ತಿನ ಮುಸ್ಲಿಂ ಜನಸಂಖ್ಯೆಯ ಸುಮಾರು ಶೇ10ರಷ್ಟಿದೆ.” ‘ಮ್ಯಾನಮಾರನಲ್ಲಿನ ಹಿಂಸಾಚಾರಕ್ಕೆ ‘ಅರಾಕಾನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ’ ಸಂಘಟನೆಯೇ ಕಾರಣವಾಗಿದೆ. ಭಾರತವು ನಿರಾಶ್ರಿತರಲ್ಲಿ ಬೆಳೆಯುತ್ತಿರುವ ಕಟ್ಟರ್ ಪ್ರವೃತ್ತಿಯನ್ನು ಅನುಭವಿಸುತ್ತಿದೆ ಮತ್ತು ಇದರಿಂದ ದೇಶದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಒತ್ತಡ ಉಂಟಾಗಿದೆ’, ಎಂದು ಕೂಡ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ‘ಆಮ್ನೆಸ್ಟಿ ಇಂಟರ್‌ನ್ಯಾಶನಲ್’ ಸಂಸ್ಥೆಯ ಮಾಹಿತಿಯ ಪ್ರಕಾರ, ‘ಅರಾಕಾನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ’ಯು ಆಗಸ್ಟ್ 2017 ರಲ್ಲಿ ಮ್ಯಾನ್ಮಾರನ ಹಿಂದೂಗಳ ಮೇಲೆ ದಾಳಿ ನಡೆಸಿ 99 ಹಿಂದೂಗಳನ್ನು ಹತ್ಯೆ ಮಾಡಿತ್ತು.
ಆಂಡ್ರ್ಯೂಸ್ ಅವರ ಭಾರತ-ವಿರೋಧಿ ಹೇಳಿಕೆ!
ಥಾಮಸ್ ಆಂಡ್ರ್ಯೂಸ್ ಅವರು ತಮ್ಮ ವರದಿಯಲ್ಲಿ, ಪಹಲ್ಗಾಮ್ ದಾಳಿಯಲ್ಲಿ ಕೈವಾಡ ಇಲ್ಲದಿದ್ದರೂ, ಈ ಘಟನೆಯ ನಂತರ ಮ್ಯಾನಮಾರನಿಂದ ಭಾರತಕ್ಕೆ ಬಂದ ನಿರಾಶ್ರಿತರ ಮೇಲೆ ಒತ್ತಡ ಹೆಚ್ಚಾಯಿತು ಎಂದು ಹೇಳಿದ್ದಾರೆ. ಆಂಡ್ರ್ಯೂಸ್ ಅವರ ಪ್ರಕಾರ, ಕೆಲವು ರೋಹಿಂಗ್ಯಾಗಳನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಸುಮಾರು 40 ಜನರನ್ನು ಸಮುದ್ರ ಮಾರ್ಗವಾಗಿ ಮ್ಯಾನಮಾರ್ ಕರಾವಳಿಗೆ ಬಿಡಲಾಗಿದೆ, ಇನ್ನು ಕೆಲವರನ್ನು ಬಾಂಗ್ಲಾದೇಶಕ್ಕೆ ಮರಳಿ ಕಳುಹಿಸಲಾಗಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಇಂತಹ ಸುಳ್ಳು ಹೇಳುವ ಅಧಿಕಾರಿಗಳನ್ನು ವಿಶ್ವಸಂಸ್ಥೆಯಿಂದ ಹೊರಹಾಕುವಂತೆ ಭಾರತವು ಬಲವಾಗಿ ಬೇಡಿಕೆ ಇಡಬೇಕು! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ