ಅಫ್ಘಾನಿಸ್ತಾನದಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ

ಕಾಬೂಲ್ (ಅಫ್ಘಾನಿಸ್ತಾನ) – ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ, ಇಲ್ಲದಿದ್ದರೆ ಪರಿಣಾಮಗಳು ವಿನಾಶಕಾರಿಯಾಗುತ್ತವೆ, ಎಂದು ಅಫ್ಘಾನಿಸ್ತಾನದ ಗೃಹ ಸಚಿವ ಮತ್ತು ತಾಲಿಬಾನ್ ನಾಯಕ ಖಲೀಫಾ ಸಿರಾಜುದ್ದೀನ್ ಹಕ್ಕಾನಿ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಮ್ ಮುನೀರ್ ಅವರು ಖೈಬರ್ ಪಖ್ತುನ್ಖ್ವಾದಲ್ಲಿ ಬುಡಕಟ್ಟು ಜನಾಂಗದ ಸಭೆಯಲ್ಲಿ, ಅಫ್ಘಾನ್-ತಾಲಿಬಾನ್ ಹಾಗೂ ಭಾರತ, ಪಾಕಿಸ್ತಾನದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿವೆ ಎಂದು ಮುನೀರ್ ಆರೋಪಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಹಕ್ಕಾನಿ ಅವರು ಮೇಲಿನ ಎಚ್ಚರಿಕೆ ನೀಡಿದ್ದಾರೆ.
ಮುನೀರ್ ಅವರು ಮುಂದೆ ಮಾತನಾಡಿ, ಕಾಬೂಲ್‌ನೊಂದಿಗೆ ಸಂಬಂಧ ಸುಧಾರಿಸಲು ಪಾಕಿಸ್ತಾನವು ಪದೇ ಪದೇ ಪ್ರಯತ್ನಿಸಿದರೂ ಸಹ, ಅಫ್ಘಾನಿಸ್ತಾನದ ಭೂಮಿಯು ‘ಫಿತ್ನಾ ಅಲ್-ಖವಾರೀಜ್’ (ಖಾರಿಜಿ ಪಂಥದ ಬಂಡಾಯ) ಮತ್ತು ‘ಫಿತ್ನಾ ಅಲ್-ಹಿಂದೂಸ್ತಾನ್’ (ಭಾರತಕ್ಕೆ ಸಂಬಂಧಿಸಿದ ದೊಡ್ಡ ಸಂಘರ್ಷ, ಯುದ್ಧ ಅಥವಾ ಧಾರ್ಮಿಕ ದಂಗೆ) ನಡೆಸುವ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯತಾಣವಾಗಿದೆ, ಎಂದು ಹೇಳಿದ್ದರು.
ಖಲೀಫಾ ಸಿರಾಜುದ್ದೀನ್ ಅವರು ಮಾತನಾಡಿ,
1. ಅಫ್ಘಾನಿಸ್ತಾನವು ದೂರಗಾಮಿ ಕ್ಷಿಪಣಿಗಳು ಅಥವಾ ದೊಡ್ಡ ಶಸ್ತ್ರಾಸ್ತ್ರಗಳನ್ನು ಹೊಂದಿಲ್ಲದಿದ್ದರೂ, ಸಹ, ಆಕ್ರಮಣವಾದರೆ ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ. ನಮ್ಮ ಭೂಪ್ರದೇಶವನ್ನು ರಕ್ಷಿಸುವುದು ನಮ್ಮ ಆದ್ಯತೆಗಳಲ್ಲಿ ಒಂದಾಗಿದೆ. ಇಷ್ಟೆಲ್ಲಾ ಇದ್ದರೂ, ಪರಸ್ಪರ ತಿಳುವಳಿಕೆಯ ಮಾರ್ಗವು ಮುಕ್ತವಾಗಿದೆ; ಆದರೆ ಯಾರಾದರೂ ಆಕ್ರಮಣ ಮಾಡಿದರೆ, ನಾವು ಜಗತ್ತಿನ ನಾಯಕರೊಂದಿಗೆ ಹೋರಾಡಿದ್ದೇವೆ ಮತ್ತು ನಮ್ಮ ಭೂಪ್ರದೇಶವನ್ನು ರಕ್ಷಿಸುವುದು ನಮಗೆ ಕಷ್ಟಕರ ಕೆಲಸವಲ್ಲ.
2. ಕತಾರ್ ಮತ್ತು ಟರ್ಕಿಯಲ್ಲಿ ಪಾಕಿಸ್ತಾನದೊಂದಿಗೆ ನಡೆದ ಇತ್ತೀಚಿನ ಸಭೆಗಳಲ್ಲಿ, ಪಾಕಿಸ್ತಾನದ ಆಂತರಿಕ ಸಮಸ್ಯೆಗಳನ್ನು ಅಫ್ಘಾನಿಸ್ತಾನದೊಂದಿಗೆ ಜೋಡಿಸಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಸಮಸ್ಯೆ ನಿಮ್ಮದು. ಪರಿಹಾರ ನಿಮ್ಮ ಬಳಿ ಇದೆ; ಹಾಗಾದರೆ ನೀವು ಆ ಸಮಸ್ಯೆಗಳನ್ನು ನಮ್ಮೊಂದಿಗೆ ಏಕೆ ಜೋಡಿಸುತ್ತಿದ್ದೀರಿ? ‘ಅಫ್ಘಾನ್ ಜನರು ಯುದ್ಧಭೂಮಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಮತ್ತು ನಮ್ಮ ತಾಳ್ಮೆಯನ್ನು ಮತ್ತೆ ಪರೀಕ್ಷಿಸಿದರೆ, ಅದರ ಪರಿಣಾಮಗಳು ವಿನಾಶಕಾರಿಯಾಗುತ್ತವೆ’, ಎಂದು ಅವರು ಎಚ್ಚರಿಕೆ ನೀಡಿದರು.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation