|
(ಮೌಲವಿ ಎಂದರೆ ಇಸ್ಲಾಂನ ಧಾರ್ಮಿಕ ನಾಯಕ)

ಇಸ್ಲಾಮಾಬಾದ (ಪಾಕಿಸ್ತಾನ) – ಹಿಂದೂಗಳು ನಮ್ಮ ಮೇಲೆ ಎಂದಿಗೂ ಅಮಾನವೀಯ ರೀತಿಯಲ್ಲಿ ಮಾಡದಷ್ಟು ದೌರ್ಜನ್ಯವನ್ನು ಪಾಕಿಸ್ತಾನದ ಸೈನಿಕರು ಜೈಲಿನಲ್ಲಿ ಮಾಡಿದ್ದಾರೆ. ಜೈಲಿನಲ್ಲಿರುವ ಅನೇಕ ಉಲೇಮಾಗಳು (ಧಾರ್ಮಿಕ ವಿದ್ವಾಂಸರು) ಕುರಾನ್ ಮೇಲೆ ಕೈ ಇಟ್ಟು, ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿದರೆ, ನಾವು ಭಾರತಕ್ಕೆ ಬೆಂಬಲ ನೀಡುತ್ತೇವೆ, ಎಂದು ಪ್ರಮಾಣ ಮಾಡಿದ್ದಾರೆ ಎನ್ನುವ ಹೇಳಿಕೆ ನೀಡಿದ ಪಾಕಿಸ್ತಾನದ ಖೈಬರ್ ಪಖ್ತೂನ್ ಖ್ವಾ ಪ್ರಾಂತ್ಯದ ಮೌಲವಿ ಗುಲ್ಜಾರ ಅವರನ್ನು ಬಂಧಿಸಲಾಗಿದೆ.
🇵🇰 Shocking truth from within Pakistan
Cleric Maulvi Gulzar arrested in Khyber Pakhtunkhwa after saying:
🗣️ “Hindus never treated us as cruelly as the Pak Army did.”He admitted Pak soldiers tortured Muslims & called Indian troops more humane!
When even a cleric sees the… pic.twitter.com/w20bSQgbnJ
— Sanatan Prabhat (@SanatanPrabhat) October 29, 2025
ಭಾರತೀಯ ಸೇನೆಯು ಪಾಕಿಸ್ತಾನ ಸೇನೆಗಿಂತ ಹೆಚ್ಚು ಮನುಷ್ಯತ್ವ ಹೊಂದಿದೆ!
ಸಾರ್ವಜನಿಕ ಸಭೆಯೊಂದರಲ್ಲಿ ಸೇನೆ ಮತ್ತು ಗುಪ್ತಚರ ಇಲಾಖೆಗಳ ಬಗ್ಗೆ ಗುಲ್ಜಾರ್ ಟೀಕಿಸಿದ ನಂತರ ಪಾಕಿಸ್ತಾನಿ ಗುಪ್ತಚರ ಸಂಸ್ಥೆಗಳು ಅವರನ್ನು ಬಂಧಿಸಿವೆ. ಗುಲ್ಜಾರ್ ತಮ್ಮ ಭಾಷಣದಲ್ಲಿ, ಪಾಕಿಸ್ತಾನಿ ಸೇನೆಯು ಮುಸಲ್ಮಾನರು ಮತ್ತು ಮದರಸಾದ ವಿದ್ಯಾರ್ಥಿಗಳಿಗೆ ನೀಡಿದಷ್ಟು ಅಮಾನವೀಯ ವರ್ತನೆಯನ್ನು ಯಾವುದೇ ಹಿಂದೂ ಅಥವಾ ಭಾರತೀಯ ಸೈನಿಕರು ನೀಡಿಲ್ಲ ಎಂದು ಹೇಳಿದ್ದರು. ಭಾರತೀಯ ಸೇನೆಯು ಪಾಕಿಸ್ತಾನಿ ಸೇನೆಗಿಂತ ಹೆಚ್ಚು ಮನುಷ್ಯತ್ವವನ್ನು ಹೊಂದಿದೆ.
ಗುಲ್ಜಾರ ಅವರ ಹೇಳಿಕೆಯು, ಪಾಕಿಸ್ತಾನ ಜನರಲ್ಲಿ ಹೆಚ್ಚುತ್ತಿರುವ ಅಸಮಾಧಾನ
ತಜ್ಞರ ಪ್ರಕಾರ, ಮೌಲವಿ ಗುಲ್ಜಾರ್ ಅವರ ಹೇಳಿಕೆಯು ಪಾಕಿಸ್ತಾನಿ ಸೇನೆಯ ಪ್ರತಿಷ್ಠೆಯ ಕುಸಿತ ಮತ್ತು ಜನರಲ್ಲಿ ಹೆಚ್ಚುತ್ತಿರುವ ಅಸಮಾಧಾನದ ಸ್ಪಷ್ಟ ಸಂಕೇತವಾಗಿದೆ. ಧಾರ್ಮಿಕ ನಾಯಕರಿಂದ ಬಹಿರಂಗವಾಗಿ ಭಾರತಕ್ಕೆ ಬೆಂಬಲ ದೊರೆಯುತ್ತಿರುವುದು ಪಾಕಿಸ್ತಾನದ ರಾಷ್ಟ್ರೀಯ ಏಕತೆ ಮತ್ತು ಸೇನೆಯ ನಿಯಂತ್ರಣಕ್ಕೆ ದೊಡ್ಡ ಎಚ್ಚರಿಕೆ ಎಂದು ಪರಿಗಣಿಸಲಾಗಿದೆ. ಈ ಘಟನೆಯು ಪಾಕಿಸ್ತಾನದಲ್ಲಿನ ಆಂತರಿಕ ಅಸ್ಥಿರತೆ ಮತ್ತು ಭದ್ರತಾ ವ್ಯವಸ್ಥೆಗಳ ಮಿತಿಗಳಿಗೆ ಸಾಕ್ಷಿಯಾಗಿದೆ, ಇದು ದೇಶದ ಸ್ಥಿರತೆಗೆ ಗಂಭೀರ ಸವಾಲನ್ನು ಒಡ್ಡಬಹುದು.
ಸಂಪಾದಕೀಯ ನಿಲುವು
|
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !