
ಒಟ್ಟಾವಾ (ಕೆನಡಾ) – ಕೆನಡಾ ಮತ್ತು ಭಾರತದ ನಡುವಿನ ಸಂಬಂಧಗಳಲ್ಲಿ ಖಲಿಸ್ತಾನಿ ಭಯೋತ್ಪಾದನೆಯು ಯಾವಾಗಲೂ ಸೂಕ್ಷ್ಮ ವಿಷಯವಾಗಿದೆ. ಈಗ ಈ ಸಮಸ್ಯೆ ನೇರವಾಗಿ ಕೆನಡಾದ ಸಂಸತ್ತನ್ನು ತಲುಪಿದೆ. ಹೊಸ ಸರಕಾರ ರಚನೆಯ ನಂತರ ನಡೆದ ಮಹತ್ವದ ಸರ್ವಪಕ್ಷಗಳ ಸಭೆಯಲ್ಲಿ, ದೇಶದಲ್ಲಿ ಹೆಚ್ಚುತ್ತಿರುವ ಖಲಿಸ್ತಾನಿ ಭಯೋತ್ಪಾದಕ ಜಾಲ ಮತ್ತು ವಿದೇಶಿ ಪ್ರಭಾವದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಲಾಯಿತು. ಈ ಚರ್ಚೆಯಲ್ಲಿ ಭಾರತೀಯ, ಇರಾನ್, ವೆನೆಜುವೆಲಾ, ಕ್ಯೂಬಾ, ಕ್ರಿಶ್ಚಿಯನ್ ಮತ್ತು ಜ್ಯೂ ಸೇರಿದಂತೆ 12 ವಿವಿಧ ಸಮುದಾಯಗಳ ಸಂಘಟನೆಗಳು ಭಾಗವಹಿಸಿದ್ದವು.
ಪ್ರಜಾಪ್ರಭುತ್ವದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿ ಕೊಳ್ಳುವ ಗುಂಪುಗಳು
ಕೆಲವು ಭಯೋತ್ಪಾದಕ ಮತ್ತು ವಿಭಜಕ ಸಂಘಟನೆಗಳು ಕೆನಡಾದ ಪ್ರಜಾಪ್ರಭುತ್ವದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿ ಕೊಂಡು ದೇಶದ ಏಕತೆ ಮತ್ತು ಘನತೆಗೆ ಧಕ್ಕೆ ತರುತ್ತಿವೆ. ಈ ಸಂಘಟನೆಗಳು ರಾಜಕೀಯ ಸಕ್ರಿಯತೆಯ ಹೆಸರಿನಲ್ಲಿ ಹಿಂಸೆ ಮತ್ತು ಪ್ರತ್ಯೇಕತೆಯನ್ನು ಪ್ರೋತ್ಸಾಹಿಸುತ್ತಿವೆ ಎಂದು ಸ್ಪಷ್ಟಪಡಿಸಲಾಯಿತು.
‘ಮುಸ್ಲಿಂ ಬ್ರದರ್‌ಹುಡ್’ ಅನ್ನು ಭಯೋತ್ಪಾದಕ ಎಂದು ಘೋಷಿಸುವ ಬೇಡಿಕೆ
ಈ ಸಭೆಯಲ್ಲಿ ದೇಶಕ್ಕೆ ಖಲಿಸ್ತಾನಿ ಮತ್ತು ಇತರ ಕಟ್ಟರ ಗುಂಪುಗಳಿಂದ ಉಂಟಾಗುವ ಅಪಾಯವು ಕೇಂದ್ರಬಿಂದುವಾಗಿತ್ತು. ಹಾಜರಿದ್ದ ಪ್ರತಿನಿಧಿಗಳು ಈ ಗುಂಪುಗಳು ಕೆನಡಾದ ಮುಕ್ತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ತಿಳಿಸಿದರು. ಈ ವೇಳೆ, ಇತರ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳು ಈಗಾಗಲೇ ಮಾಡಿರುವಂತೆ, ‘ಮುಸ್ಲಿಂ ಬ್ರದರ್‌ಹುಡ್’ ಅನ್ನು ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವಂತೆ ಬೇಡಿಕೆ ಇಡಲಾಯಿತು.
ವಿದೇಶಿ ನಿಧಿ ಮತ್ತು ಸಿದ್ಧಾಂತಗಳ ಪ್ರಭಾವ
ಸಭೆಯಲ್ಲಿ ಕೆಲವು ಗುಂಪುಗಳಿಗೆ ವಿದೇಶದಿಂದ ವಿಚಾರ ಸರಣಿ ಅಥವಾ ಆರ್ಥಿಕ ಬೆಂಬಲ ಸಿಗುತ್ತಿದೆ ಎಂದು ಗಮನಿಸಲಾಯಿತು. ಇದರ ಉದ್ದೇಶ ಕೆನಡಾದಂತಹ ಬಹುಸಾಂಸ್ಕೃತಿಕ ದೇಶಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸುವುದಾಗಿದೆ. ಕೆನಡಾದ ಮೂಲ ಮೌಲ್ಯಗಳಾದ ಮಾನವ ಹಕ್ಕುಗಳು, ಸಮಾನತೆ ಮತ್ತು ಶಾಂತಿಯುತ ಸಹಬಾಳ್ವೆಯ ಮೇಲೆ ದೇಶವು ದೃಢವಾಗಿ ನಿಲ್ಲಬೇಕು, ಹಿಂಸೆ ಮತ್ತು ಒಡಕು ಉಂಟುಮಾಡುವ ಶಕ್ತಿಗಳಿಗೆ ಮಣಿಯಬಾರದು ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಆಡಳಿತ ಮತ್ತು ವಿರೋಧ ಪಕ್ಷಗಳು ಒಗ್ಗಟ್ಟು
ಈ ವಿಷಯದ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಎರಡೂ ಒಮ್ಮತದ ನಿಲುವನ್ನು ತೆಗೆದುಕೊಂಡವು. ಎಲ್ಲರೂ ವಿದೇಶಿ ಹಸ್ತಕ್ಷೇಪ ಮತ್ತು ಭಯೋತ್ಪಾದಕ ಸಿದ್ಧಾಂತಗಳು ಕೆನಡಾದ ರಾಷ್ಟ್ರೀಯ ಭದ್ರತೆ ಮತ್ತು ಪ್ರಜಾಪ್ರಭುತ್ವದ ರಚನೆಗೆ ಗಂಭೀರ ಅಪಾಯ ಎಂದು ಒಪ್ಪಿಕೊಂಡರು.
ಭಾರತಕ್ಕೆ ಸಂಬಂಧಿಸಿದ ವಿಷಯಗಳು
ಇತ್ತೀಚೆಗೆ ಕೆನಡಾದಲ್ಲಿ ಗ್ಯಾಂಗ್ ವಾರ್‍ನ ಅನೇಕ ಘಟನೆಗಳು ನಡೆದಿವೆ. ಕೆನಡಾವು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಅದರ ಸದಸ್ಯರು ಭಾರತದಲ್ಲಿಯೂ ಪಲಾಯನ ಮಾಡಿದ್ದಾರೆ. ಭಾರತವು ಹಲವು ಬಾರಿ ಕೆನಡಾ ಸರಕಾರದ ಬಳಿ ಖಲಿಸ್ತಾನಿ ಭಯೋತ್ಪಾದಕರ ಮೇಲೆ ನಿಯಂತ್ರಣ ತರಲು ಮತ್ತು ಅವರನ್ನು ನಿಷೇಧಿಸಲು ಬೇಡಿಕೆ ಇಟ್ಟಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation