
ಮುಂಬಯಿ – ಪವೈನಲ್ಲಿರುವ ‘ಮಹಾವೀರ್ ಕ್ಲಾಸಿಕ್’ ಎಂಬ ಕಟ್ಟಡದ ಆರ್.ಎ. ಸ್ಟುಡಿಯೋದಲ್ಲಿ ‘ಆಡಿಶನ್’ ನೀಡಲು ಬಂದಿದ್ದ ೧೭ ಚಿಕ್ಕ ಮಕ್ಕಳನ್ನು ಓರ್ವ ವ್ಯಕ್ತಿ ಒತ್ತೆ ಇರಿಸಿಕೊಂಡಿದ್ದನು. ಈ ಮಕ್ಕಳನ್ನು ಮುಂಬಯಿ ಪೊಲೀಸರು ಬಿಡುಗಡೆಗೊಳಿಸಿದರು ಮತ್ತು ಮಕ್ಕಳನ್ನು ಕೂಡಿ ಹಾಕಿದ್ದ ಆರೋಪಿ ರೋಹಿತ್ ಆರ್ಯ ಪೊಲೀಸರ ಚಕಮಕಿಯಲ್ಲಿ (ಎನ್ ಕೌಂಟರ್) ಸಾವನ್ನಪ್ಪಿದ್ದಾನೆ.
೧. ಕಳೆದ ೬ ದಿನಗಳಿಂದ ಬೆಳಗ್ಗೆ ೧೦ ರಿಂದ ರಾತ್ರಿ ೮ ಗಂಟೆಯವರೆಗೆ ನೂರು ಮಕ್ಕಳು ಸ್ಟುಡಿಯೋದಲ್ಲಿ ಇರುತ್ತಿದ್ದರು. ಇದರಲ್ಲಿ ೧೫ ಕ್ಕಿಂತ ಹೆಚ್ಚು ಮಕ್ಕಳು ಅಪ್ರಾಪ್ತ ವಯಸ್ಕರಾಗಿದ್ದರು. ಈ ಮಕ್ಕಳಿಗೆ ‘ಸಿನಿಮಾದಲ್ಲಿ ಕೆಲಸ ಕೊಡುತ್ತೇವೆ’ ಎಂದು ಹೇಳಲಾಗಿತ್ತು.
೨. ‘ಆಡಿಶನ್’ಗೆ ಬಂದಿದ್ದ ಮಕ್ಕಳಿಗೆ ಮಧ್ಯಾಹ್ನ ಊಟಕ್ಕಾಗಿ ಹೊರಗೆ ಬಿಡದ ಕಾರಣ ಪೋಷಕರು ಮಕ್ಕಳಿಗಾಗಿ ಕಾಯುತ್ತಿದ್ದರು.
೩. ಒತ್ತೆ ಇರಿಸಿಕೊಂಡಿದ್ದ ಮಕ್ಕಳು ಕರುಣಾಜನಕ ಸ್ಥಿತಿಯಲ್ಲಿದ್ದ ಕಾರಣ ಅವರು ಕಿಟಕಿಯಿಂದ ಹೊರಗೆ ಪೋಷಕರ ಕಡೆ ನೋಡುತ್ತಿದ್ದರು. ಹೆದರಿದ ಮಕ್ಕಳನ್ನು ನೋಡಿ ಸ್ಟುಡಿಯೋದ ಕೆಳಗೆ ಪೋಷಕರ ಗುಂಪು ಸೇರಿತು. ಈ ಸಮಯದಲ್ಲಿ ಈ ಘಟನೆಯ ಮಾಹಿತಿಯನ್ನು ಪೊಲೀಸರಿಗೆ ನೀಡಲಾಯಿತು.
೪. ಈ ಸಮಯದಲ್ಲಿ ರೋಹಿತ್ ಒಂದು ವಿಡಿಯೋದ ಮೂಲಕ ಸ್ಟುಡಿಯೋಗೆ ಬೆಂಕಿ ಹಚ್ಚುವ ಬೆದರಿಕೆ ನೀಡಿದ ಮತ್ತು ತನ್ನ ಮಾತನ್ನು ಕೇಳಿಸಿಕೊಳ್ಳುವಂತೆ ಹೇಳಿದ. ಆರೋಪಿಯೊಂದಿಗೆ ಇತರ ಜನರು ಸಹ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಅವನು ವಿಡಿಯೋದಲ್ಲಿ ಹೇಳಿದ್ದನು.
೫. ಪೊಲೀಸರು ಕಾರ್ಯಾಚರಣೆಯ ದೃಷ್ಟಿಯಿಂದ ಶೌಚಾಲಯದ ಮೂಲಕ ಸ್ಟುಡಿಯೋಗೆ ಪ್ರವೇಶಿಸಿದರು. ಆರೋಪಿಯ ಬಳಿ ‘ಏರ್ ಗನ್’ ಇತ್ತು. ಆ ಸಮಯದಲ್ಲಿ ಆರೋಪಿ ಮತ್ತು ಪೊಲೀಸರ ನಡುವೆ ಚಕಮಕಿ ನಡೆದು, ಅದರಲ್ಲಿ ಪೊಲೀಸರು ಆರೋಪಿಯ ಮೇಲೆ ಗುಂಡು ಹಾರಿಸಿದರು. ಅದು ಅವನ ಎಡಭಾಗಕ್ಕೆ ತಗುಲಿದ ನಂತರ ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಆತ ಮೃತಪಟ್ಟಿದ್ದಾನೆ.
೬. ಈ ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರಿಗೆ ಅವನ ಸ್ಟುಡಿಯೋದಲ್ಲಿ ಕೆಲವು ರಸಾಯನಿಕಗಳು ದೊರೆತಿವೆ.
೭. ಈ ಹಿಂದೆ ಯೋಜನೆ ನಿರ್ದೇಶಕನಾಗಿದ್ದ ರೋಹಿತ್ ಆರ್ಯನಿಗೆ ‘ಸ್ವಚ್ಛತಾ ಮಾನಿಟರ್ ಅಭಿಯಾನ’ದ ವಿಷಯವಾಗಿ ಆಡಳಿತ ಮಂಡಳಿಯೊಂದಿಗೆ ವಿವಾದವಿತ್ತು. ಶಿಕ್ಷಣ ಇಲಾಖೆಯಿಂದ ತನಗೆ ಅನ್ಯಾಯವಾಗಿದೆ ಎಂದು ಈ ಹಿಂದೆ ಅವನು ಆರೋಪಿಸಿದ್ದನು. ಅವನು ಈ ಹಿಂದೆ ಶಾಲಾ ಕೆಲಸಗಳಿಗಾಗಿ ಟೆಂಡರ್ ಸಲ್ಲಿಸಿದ್ದನು. ಈ ಕೆಲಸದ ೨ ಕೋಟಿ ರೂಪಾಯಿಗಳು ದೊರೆತಿಲ್ಲ ಎಂದು ಅವನು ಆರೋಪಿಸಿದ್ದನು. ಅಂದಿನ ಸಚಿವರಾಗಿದ್ದ ಕೇಸರಕರ್ ಅವರ ಮನೆಯ ಮುಂದೆ ಅವನು ಉಪವಾಸ ಸತ್ಯಾಗ್ರಹ ಮಾಡಿದ್ದನು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!