ವಿದೇಶಿ ಅಣು ವಿಜ್ಞಾನಿಯೊಂದಿಗೆ ಸಂಪರ್ಕ ಹೊಂದಿದ್ದ!

ನವದೆಹಲಿ – ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ಪೂರೈಸಿದ ಆರೋಪದ ಮೇಲೆ ದೆಹಲಿ ಪೊಲೀಸರು 59 ವರ್ಷದ ಆದಿಲ್ ಹುಸೇನ್ ನನ್ನು ಬಂಧಿಸಿದ್ದಾರೆ. ಈ ಬಂಧನದ ನಂತರ ಪೊಲೀಸರು ಒಂದು ದೊಡ್ಡ ಗೂಢಚರ್ಯೆ ಜಾಲವನ್ನು ಭೇದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅಧಿಕಾರಿಗಳ ಮಾಹಿತಿಯ ಪ್ರಕಾರ, ಹುಸೇನ್ ವಿದೇಶಿ ಅಣು ವಿಜ್ಞಾನಿಯೊಬ್ಬನೊಂದಿಗೆ ಸಂಪರ್ಕ ಹೊಂದಿದ್ದನು ಹಾಗೂ ಝಾರಖಂಡನ ಜಮ್ ಶೆಡ್ ಪುರದಲ್ಲಿ ನಡೆಯುತ್ತಿದ್ದ ನಕಲಿ (ಸುಳ್ಳು) ಪಾಸ್‌ಪೋರ್ಟ್ ಜಾಲದೊಂದಿಗೆ ಸಹ ಸಂಬಂಧ ಹೊಂದಿದ್ದನು. ಎರಡು ದಿನಗಳ ಹಿಂದೆ ದೆಹಲಿಯ ಸೀಮಾಪುರಿ ಪ್ರದೇಶದಲ್ಲಿ ಆತನನ್ನು ಬಂಧಿಸಲಾಯಿತು. ಆತ ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳಿಗೆ ಪ್ರವಾಸ ಮಾಡಿದ್ದನು.
ನಕಲಿ ಗುರುತಿನ ಚೀಟಿಗಳ ಬಳಕೆ
ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರಮೋದಸಿಂಗ್ ಕುಶವಾಹ ಅವರು ಮಾತನಾಡಿ, ಆದಿಲ್ ಜಮ್ ಶೆಡಪುರದ ಟಾಟಾ ನಗರದ ನಿವಾಸಿಯಾಗಿದ್ದಾನೆ. ಆತ ಮತ್ತು ಆತನ ಸಹೋದರ ವಿದೇಶಗಳಿಗೆ ಸೂಕ್ಷ್ಮ ಮಾಹಿತಿಯನ್ನು ಪೂರೈಸಿದ್ದಾನೆ ಮತ್ತು ಸುಳ್ಳು ದಾಖಲೆಗಳ ಮೂಲಕ ಹಲವಾರು ಭಾರತೀಯ ಪಾಸ್ ಪೋರ್ಟ್‌ಗಳನ್ನು ಪಡೆದಿದ್ದಾನೆ ಎಂದು ಶಂಕಿಸಲಾಗಿದೆ. ಆತನ ಸಂಪೂರ್ಣ ಜಾಲವು ಜಮ್ ಶೆಡಪುರದಿಂದ ಕಾರ್ಯನಿರ್ವಹಿಸುತ್ತಿತ್ತು, ಅಲ್ಲಿ ಸುಳ್ಳು ದಾಖಲೆಗಳ ಆಧಾರದ ಮೇಲೆ ಗುರುತಿನ ಚೀಟಿಗಳು ಮತ್ತು ಪಾಸ್‌ಪೋರ್ಟ್‌ಗಳನ್ನು ತಯಾರಿಸಲಾಗುತ್ತಿತ್ತು.
ಮುಂಬಯಿ ಪೊಲೀಸರು ಆದಿಲ್ ನ ಸಹೋದರ ಅಖ್ತರನನ್ನು ಬಂಧಿಸಿದ್ದು, ಆತ ಹಲವು ಕೊಲ್ಲಿ ದೇಶಗಳಿಗೆ ಪ್ರಯಾಣಿಸಿದ್ದನು. ಆತನ ಮೇಲೂ ನಕಲಿ ದಾಖಲೆಗಳ ಆಧಾರದ ಮೇಲೆ ಒಂದು ಸೂಕ್ಷ್ಮ ಕೇಂದ್ರದ ಗುರುತಿನ ಚೀಟಿಯನ್ನು ಪಡೆದಿರುವ ಸಂಶಯ ಇದೆ. ಈ ಜಾಲದ ಮೂಲಕ ಎಷ್ಟು ಜನರಿಗೆ ನಕಲಿ ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಇಂತಹವರಿಗೆ ಸಾರ್ವಜನಿಕವಾಗಿ ಗಲ್ಲಿಗೇರಿಸುವ ಶಿಕ್ಷೆ ನೀಡಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!