‘ಭಾರತ ಅಫ್ಘಾನಿಸ್ತಾನವನ್ನು ನಿಯಂತ್ರಿಸುತ್ತಿದೆ!'(ಅಂತೆ) Pakistan Afghanistan War Pakistan Blames India

ಪಾಕಿಸ್ತಾನ್-ತಾಲಿಬಾನ್ ಮಾತುಕತೆ ವಿಫಲವಾದ ನಂತರ, ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರಿಂದ ಮತ್ತೆ ಭಾರತದ ಮೇಲೆ ಆರೋಪ!

ಇಸ್ಲಾಮಾಬಾದ್ (ಪಾಕಿಸ್ತಾನ) – ಕಾಬೂಲ್‌ನಲ್ಲಿ ಕುಳಿತಿರುವ ಜನರು ಸೂತ್ರದ ಗೊಂಬೆಯಾಟವನ್ನು ಆಡುತ್ತಿದ್ದಾರೆ ಮತ್ತು ಅವರನ್ನು ದೆಹಲಿಯು ನಿಯಂತ್ರಿಸುತ್ತಿದೆ. ಭಾರತವು ತನ್ನ ಪಶ್ಚಿಮ ಗಡಿಯನ್ನು ಕಾಬೂಲ್‌ನ ಮೂಲಕ ಸಮತೋಲನಗೊಳಿಸಲು ಪ್ರಯತ್ನಿಸುತ್ತಿದೆ ಮತ್ತು ಅದಕ್ಕಾಗಿ ಕಾಬೂಲ್ ಅನ್ನು ಬಳಸಲಾಗುತ್ತಿದೆ. ಒಂದು ವೇಳೆ ಕಾಬೂಲ್ ಇಸ್ಲಾಮಾಬಾದ್ ಮೇಲೆ ದಾಳಿ ಮಾಡಿದರೆ, ಪಾಕಿಸ್ತಾನ ೫೦ ಪಟ್ಟು ಹೆಚ್ಚು ಕಠಿಣ ಪ್ರತಿಕ್ರಿಯೆ ನೀಡಲಿದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಅಫ್ಘಾನಿಸ್ತಾನದ ಮೇಲೆ ಆರೋಪ ಮಾಡುತ್ತಾ ಬೆದರಿಕೆ ಹಾಕಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಕದನ ವಿರಾಮ ಮಾತುಕತೆ ವಿಫಲವಾದ ನಂತರ ಅವರು ಈ ಆರೋಪಗಳನ್ನು ಮಾಡಿ ಬೆದರಿಕೆ ನೀಡಿದ್ದಾರೆ.

೧. ಮೂಲಗಳ ಪ್ರಕಾರ, ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿರುವ ‘ತಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (TTP) ನೆಲೆಗಳ ಮೇಲೆ ದಾಳಿ ನಡೆಸಲು ಅನುಮತಿ ಕೇಳಿತ್ತು; ಆದರೆ ತಾಲಿಬಾನ್ ಸರಕಾರ ಅದನ್ನು ನಿರಾಕರಿಸಿದೆ. ಇದರ ನಂತರ ಈ ಚರ್ಚೆ ವಿಫಲವಾಯಿತು. ಪಾಕಿಸ್ತಾನವು, ಅಮೆರಿಕನ್ ಡ್ರೋನ್‌ಗಳ ಮೂಲಕ ದಾಳಿ ಮಾಡಲು ಅನುಮತಿ ಕೇಳಿರುವುದನ್ನು ಒಪ್ಪಿಕೊಂಡಿದೆ. ಅದಕ್ಕೆ ತಾಲಿಬಾನ್ ಅಮೆರಿಕನ್ ಡ್ರೋನ್‌ಗಳಿಗೆ ಅನುಮತಿ ನೀಡಲು ನಿರಾಕರಿಸಿದೆ.

೨. ಭವಿಷ್ಯದಲ್ಲಿ ಪಾಕಿಸ್ತಾನವು ದಾಳಿ ಮಾಡಿದರೆ, ಅದಕ್ಕೆ ಪ್ರತ್ಯುತ್ತರ ನೀಡಲಾಗುವುದು ಎಂದು ಅಫ್ಘಾನ್ ಮೂಲಗಳು ಎಚ್ಚರಿಕೆ ನೀಡಿವೆ. ಇಸ್ಲಾಮಾಬಾದ್ ಅನ್ನು ಗುರಿಯಾಗಿಸಲಾಗುವುದು. (ಚಿಕ್ಕ ಅಫ್ಘಾನಿಸ್ತಾನ ಪಾಕಿಸ್ತಾನಕ್ಕೆ ಬೆದರಿಕೆ ಹಾಕಲು ಸಾಧ್ಯವಾದರೆ, ಭಾರತವು ಪಾಕಿಸ್ತಾನವನ್ನು ಶಾಶ್ವತವಾಗಿ ನಾಶಪಡಿಸಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಭಾರತವು ಅಫ್ಘಾನಿಸ್ತಾನದ ಸರಕಾರವನ್ನು ನಿಯಂತ್ರಿಸಿ ಪಾಕಿಸ್ತಾನಕ್ಕೆ ಪಾಠ ಕಲಿಸುತ್ತಿದ್ದರೆ, ಭಾರತೀಯರಿಗೆ ಅದು ಹೆಮ್ಮೆಯ ವಿಷಯ!