ಭಾರತದಿಂದ ಆಗುವ ಆಮದಿನ ಮೇಲೆ ಭಾರತ ನಿರ್ಬಂಧ ಹೇರಿದ ಲಾಭ ಪಡೆಯಲು ಪಾಕಿಸ್ತಾನದ ಯತ್ನ

ಇಸ್ಲಾಮಾಬಾದ (ಪಾಕಿಸ್ತಾನ) – ಭಾರತದೊಂದಿಗೆ ಹೆಚ್ಚಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನವು ಬಾಂಗ್ಲಾದೇಶಕ್ಕೆ ಕರಾಚಿ ಬಂದರನ್ನು ಬಳಸುವ ಪ್ರಸ್ತಾಪವನ್ನು ನೀಡಿದೆ. ಪಾಕಿಸ್ತಾನವು ಸೆಣಬಿನ ಉತ್ಪನ್ನಗಳು ಮತ್ತು ಇತರ ವಸ್ತುಗಳ ರಫ್ತಿಗಾಗಿ ಕರಾಚಿ ಬಂದರನ್ನು ಬಳಸಲು ಈ ಪ್ರಸ್ತಾವನೆಯನ್ನು ನೀಡಿದೆ. ಕೆಲವು ತಿಂಗಳ ಹಿಂದೆ ಭಾರತವು ಬಾಂಗ್ಲಾದೇಶದ ಸೆಣಬಿನ ಉತ್ಪನ್ನಗಳ ಭಾರತದ ಮೂಲಕದ ಆಮದಿನ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಆ ಕಾರಣದಿಂದ, ಪಾಕಿಸ್ತಾನವು ಬಾಂಗ್ಲಾದೇಶಕ್ಕೆ ಕರಾಚಿ ಬಂದರನ್ನು ಬಳಸುವ ಪ್ರಸ್ತಾಪವನ್ನು ನೀಡಿದೆ.
ಪಾಕಿಸ್ತಾನದ ಈ ನಡೆ ಕೇವಲ ವ್ಯಾಪಾರದ ದೃಷ್ಟಿಯಿಂದ ಮಾತ್ರವಲ್ಲದೆ, ಭಾರತದ ಪ್ರಭಾವಕ್ಕೆ ಪ್ರತ್ಯುತ್ತರ ನೀಡುವ ಕಾರ್ಯತಂತ್ರದ ಭಾಗವಾಗಿಯೂ ನೋಡಲಾಗುತ್ತಿದೆ. ಕರಾಚಿ ಬಂದರಿನ ಮೂಲಕ ಬಾಂಗ್ಲಾದೇಶಕ್ಕೆ ಕೊಲ್ಲಿ ರಾಷ್ಟ್ರಗಳು ಮತ್ತು ಮಧ್ಯ ಏಷ್ಯಾದೊಂದಿಗೆ ಸಮುದ್ರ ಮಾರ್ಗದ ಮೂಲಕ ಸಂಪರ್ಕ ಕಲ್ಪಿಸುವ ಹೊಸ ಮಾರ್ಗ ದೊರೆಯಬಹುದು. ಹಲವು ತಜ್ಞರ ಪ್ರಕಾರ, ಪಾಕಿಸ್ತಾನವು ರಾಜಕೀಯ ಚಾಣಾಕ್ಷತೆಯನ್ನು ಪ್ರದರ್ಶಿಸಿದ್ದರೂ, ಈ ವ್ಯವಹಾರವು ಬಾಂಗ್ಲಾದೇಶಕ್ಕೆ ಪ್ರಾಯೋಗಿಕವಾಗಿ ಅನುಕೂಲಕರವಾಗಿಲ್ಲ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation