|

ನವದೆಹಲಿ – ಭಾರತದಲ್ಲಿ ಮೊದಲ ಬಾರಿಗೆ ಪ್ರಯಾಣಿಕ ವಿಮಾನಗಳ ಉತ್ಪಾದನೆಯ ಕುರಿತು ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)’ ಸಂಸ್ಥೆಯು ರಷ್ಯಾದ ‘ಯುನೈಟೆಡ್ ಏರ್‌ಕ್ರಾಫ್ಟ್ ಕಾರ್ಪೊರೇಷನ್ (ಯುಎಸಿ)’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆಗಳು ಜಂಟಿಯಾಗಿ ಭಾರತದಲ್ಲಿಯೇ ‘ಎಸ್ಜೆ-100’ ಹೆಸರಿನ ವಿಮಾನಗಳನ್ನು ಉತ್ಪಾದಿಸಲಿವೆ. ಭಾರತ ಮತ್ತು ರಷ್ಯಾದ ನಡುವಿನ ಈ ಹೊಸ ಒಪ್ಪಂದವು ಅಮೆರಿಕಾಗೆ ಒಂದು ಹಿನ್ನಡೆ ಎಂದು ಪರಿಗಣಿಸಲಾಗಿದೆ.
‘ಎಸ್ಜೆ-100’ ವಿಮಾನದ ವೈಶಿಷ್ಟ್ಯಗಳು
‘ಎಸ್ಜೆ-100’ ಎರಡು ಇಂಜಿನ್ ಹೊಂದಿರುವ ವಿಮಾನವಾಗಿದೆ. ಇದು 100 ಆಸನ ಸಾಮರ್ಥ್ಯದ ಕಿರಿದಾದ ವಿನ್ಯಾಸದ (ನ್ಯಾರೋ ಬಾಡಿ) ಪ್ರಯಾಣಿಕ ವಿಮಾನವಾಗಿದ್ದು, ಪ್ರಸ್ತುತ ಜಗತ್ತಿನ 26 ಕ್ಕೂ ಹೆಚ್ಚು ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಈ ವಿಮಾನವನ್ನು ನಿರ್ವಹಿಸುತ್ತಿವೆ. ಇಲ್ಲಿಯವರೆಗೆ 200 ಕ್ಕೂ ಹೆಚ್ಚು ‘ಎಸ್ಜೆ-100’ ವಿಮಾನಗಳನ್ನು ಉತ್ಪಾದಿಸಲಾಗಿದೆ. ಎಚ್ ಎ ಎಲ್ ನ ಪ್ರಕಾರ, ಈ ವಿಮಾನವು ಭಾರತದ ‘ಉಡಾನ್’ ಯೋಜನೆಯ ಅಡಿಯಲ್ಲಿ ಕಡಿಮೆ ದೂರದ ವೈಮಾನಿಕ ಸಂಪರ್ಕಕ್ಕಾಗಿ ಒಂದು ದೊಡ್ಡ ಬದಲಾವಣೆಯನ್ನು ತರಲಿದೆ. ಒಪ್ಪಂದದ ಪ್ರಕಾರ, ಎಚ್ ಎ ಎಲ್ ಗೆ ದೇಶೀಯ ಗ್ರಾಹಕರಿಗಾಗಿ ‘ಎಸ್ಜೆ-100’ ವಿಮಾನಗಳನ್ನು ನಿರ್ಮಿಸುವ ಹಕ್ಕು ದೊರೆತಿದೆ.
ಭಾರತಕ್ಕೆ ಸುಮಾರು 550 ‘ಎಸ್ಜೆ-100’ ವಿಮಾನಗಳ ಅಗತ್ಯ
ಭಾರತೀಯ ವಿಮಾನಯಾನ ಕ್ಷೇತ್ರಕ್ಕೆ ಮುಂದಿನ 10 ವರ್ಷಗಳಲ್ಲಿ ಇಂತಹ 200 ಕ್ಕೂ ಹೆಚ್ಚು ಕಿರಿದಾದ ವಿನ್ಯಾಸದ ಪ್ರಯಾಣಿಕ ವಿಮಾನಗಳ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ, ಇದು ಪ್ರಾದೇಶಿಕ ವೈಮಾನಿಕ ಸಂಪರ್ಕದ ಅಗತ್ಯವನ್ನು ಪೂರೈಸುತ್ತದೆ. ಅಲ್ಲದೆ, ಹಿಂದೂ ಮಹಾಸಾಗರ ಪ್ರದೇಶದ ಅಂತರರಾಷ್ಟ್ರೀಯ ಪ್ರವಾಸಿ ತಾಣಗಳಿಗಾಗಿ ಇನ್ನೂ 350 ವಿಮಾನಗಳಿಗೆ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ