|

ನವದೆಹಲಿ – ಸರ್ವೋಚ್ಚ ನ್ಯಾಯಾಲಯದ ೨೦೧೯ ರ ಅಯೋಧ್ಯೆ ರಾಮಜನ್ಮಭೂಮಿ ತೀರ್ಪನ್ನು ಅಕ್ರಮ ಎಂದು ಘೋಷಿಸಬೇಕೆಂದು ಕೋರಿ ನ್ಯಾಯವಾದಿ ಮೆಹಮೂದ್ ಪ್ರಾಚಾ ಅವರು ಅರ್ಜಿ ಸಲ್ಲಿಸಿದ್ದರು. ದೆಹಲಿ ಜಿಲ್ಲಾ ನ್ಯಾಯಾಲಯವು ಇತ್ತೀಚೆಗೆ ಈ ಅರ್ಜಿಯನ್ನು ವಜಾಗೊಳಿಸಿದೆ, ಜೊತೆಗೆ, ಅಯೋಧ್ಯೆ ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ನ್ಯಾಯವಾದಿ ಮೆಹಮೂದ್ ಪ್ರಾಚಾ ಅವರು ಸಲ್ಲಿಸಿದ್ದ ಮೊಕದ್ದಮೆಯನ್ನು ವಜಾಗೊಳಿಸಿದ್ದ ಸಿವಿಲ್ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ. ಇದರೊಂದಿಗೆ, ಸಿವಿಲ್ ನ್ಯಾಯಾಲಯವು ಅರ್ಜಿದಾರರಿಗೆ ವಿಧಿಸಿದ್ದ ರೂ ೧ ಲಕ್ಷ ದಂಡವನ್ನು ಜಿಲ್ಲಾ ನ್ಯಾಯಾಲಯವು ೬ ಲಕ್ಷ ರೂಪಾಯಿಗೆ ಹೆಚ್ಚಿಸಿದೆ.
🚨 Delhi Court slams Advocate Mehmood Pracha!
His plea to overturn the Supreme Court’s landmark Ayodhya Ram Janmabhoomi verdict has been dismissed.
💥 Court calls it a “frivolous and abusive” petition and imposes a ₹6 lakh fine.
PC: @LawChakra pic.twitter.com/UFOScTParY
— Sanatan Prabhat (@SanatanPrabhat) October 27, 2025
೧. ನ್ಯಾಯವಾದಿ ಮೆಹಮೂದ್ ಪ್ರಾಚಾ ಅವರು ತಮ್ಮ ಅರ್ಜಿಯಲ್ಲಿ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್ (ಅಯೋಧ್ಯೆ ಪ್ರಕರಣದ ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಒಬ್ಬರು) ಅವರು ಕಳೆದ ವರ್ಷ ಒಂದು ಭಾಷಣದಲ್ಲಿ, ಅಯೋಧ್ಯೆ ತೀರ್ಪನ್ನು ಶ್ರೀರಾಮಲಲ್ಲಾ ವಿರಾಜಮಾನ್ ಅವರು ತಮಗೆ ನೀಡಿದ ಇತ್ಯರ್ಥದ ಪ್ರಕಾರ ನೀಡಲಾಗಿದೆ ಎಂದು ಒಪ್ಪಿಕೊಂಡಿದ್ದರು, ಎಂದು ಹೇಳಿದ್ದರು.
೨. ಜಿಲ್ಲಾ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ನ್ಯಾಯವಾದಿ ಮೆಹಮೂದ್ ಪ್ರಾಚಾ ಅವರ ಮೊಕದ್ದಮೆಯು ‘ಕ್ಷುಲ್ಲಕ, ತಪ್ಪು ತಿಳುವಳಿಕೆಯುಳ್ಳ ಮತ್ತು ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ’ ಎಂದಿದ್ದಾರೆ.
೩. ಜಿಲ್ಲಾ ನ್ಯಾಯಾಧೀಶ ರಾಣಾ ಅವರು ಅಯೋಧ್ಯೆ ತೀರ್ಪು ಮತ್ತು ಮಾಜಿ ಮುಖ್ಯ ನ್ಯಾಯಮೂರ್ತಿಗಳ ಭಾಷಣದ ಆಯ್ದ ಭಾಗಗಳನ್ನು ನ್ಯಾಯಾಲಯದಲ್ಲಿ ಮರುಸಲ್ಲಿಸಿ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ‘ದೇವರ ಮುಂದೆ ಪ್ರಾರ್ಥನೆ’ ಮಾಡಿದ್ದನ್ನು ಉಲ್ಲೇಖಿಸಿದ್ದು ಒಂದು ಆಧ್ಯಾತ್ಮಿಕ ಪ್ರತಿಬಿಂಬವೇ ಹೊರತು ಪಕ್ಷಪಾತ ಅಥವಾ ಬಾಹ್ಯ ಹಸ್ತಕ್ಷೇಪದ ಸ್ವೀಕಾರವಲ್ಲ ಎಂದು ತೀರ್ಮಾನಕ್ಕೆ ಬಂದಿದ್ದಾರೆ.
೪. ‘ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಭಾಷಣದಲ್ಲಿ ಶ್ರೀರಾಮಲಲ್ಲಾ ಅವರ ಬಗ್ಗೆ ಪ್ರಸ್ತಾಪ ಮಾಡಿಲ್ಲ, ಬದಲಾಗಿ ಅಯೋಧ್ಯೆ ಪ್ರಕರಣದ ಇತ್ಯರ್ಥಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದರು’ ಎಂದು ನ್ಯಾಯಾಧೀಶ ರಾಣಾ ಸ್ಪಷ್ಟಪಡಿಸಿದ್ದಾರೆ.
೫. ವೈಯಕ್ತಿಕ ಶ್ರದ್ಧೆಯಿಂದ ದೈವಿಕ ಮಾರ್ಗದರ್ಶನವನ್ನು ಪಡೆಯುವುದು ಕಾನೂನಿನ ಪ್ರಕಾರ ‘ವಂಚನೆ’ ಆಗುವುದಿಲ್ಲ ಎಂದು ನ್ಯಾಯಾಧೀಶ ರಾಣಾ ಅವರು ಹೇಳಿದರು. ನ್ಯಾಯವಾದಿ ಮೆಹಮೂದ್ ಪ್ರಾಚಾ ಅವರು ತಮ್ಮ ಅರ್ಜಿಯಲ್ಲಿ ‘ಮಾಜಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ದೇವರ ‘ಮುಂದಿನ ಸ್ನೇಹಿತರು’ ಎಂದು ತಪ್ಪಾಗಿ ಸ್ಥಾನ ನೀಡಿದ್ದರು’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ