
ಬೀಜಿಂಗ್ – ಚೀನಾದ ವಿದ್ವಾಂಸರು ‘ಭಗವದ್ಗೀತೆ’ಯನ್ನು ‘ಜ್ಞಾನದ ಅಮೃತ’ ಮತ್ತು ‘ಭಾರತೀಯ ಸಂಸ್ಕೃತಿಯ ಸಂಕ್ಷಿಪ್ತ ಇತಿಹಾಸ’ ಎಂದು ಬಣ್ಣಿಸಿದ್ದಾರೆ. ಭಗವದ್ಗೀತೆಯನ್ನು ಶ್ಲಾಘಿಸುತ್ತಾ ಅವರು, ಭಗವದ್ಗೀತೆಯು ಆಧುನಿಕ ಜಗತ್ತಿನ ಜನರ ಆಧ್ಯಾತ್ಮಿಕ ಮತ್ತು ಭೌತಿಕ ಸಂಕಷ್ಟಗಳಿಗೆ ಪರಿಹಾರಗಳ ಮೂಲವಾಗಿದೆ ಎಂದು ಹೇಳಿದರು. ‘ಭಾರತೀಯ ತತ್ವಶಾಸ್ತ್ರೀಯ ಸಂಪ್ರದಾಯಗಳ ಸಂಗಮ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಕಾರ್ಯಕ್ರಮವನ್ನು ಭಾರತೀಯ ರಾಯಭಾರ ಕಚೇರಿ ಆಯೋಜಿಸಿತ್ತು.
ಭಾರತ ಪ್ರವಾಸ ಕೈಗೊಂಡಾಗ ಶ್ರೀಕೃಷ್ಣನ ಅಸ್ತಿತ್ವವನ್ನು ಅನುಭವಿಸಿದೆ! – ಪ್ರೊಫೆಸರ್ ಜಾಂಗ್ ಬಾವೊಶೆಂಗ್ ಈ ವಿಚಾರ ಸಂಕಿರಣದಲ್ಲಿ 88 ವರ್ಷದ ಪ್ರೊಫೆಸರ್ ಜಾಂಗ್ ಬಾವೊಶೆಂಗ್ ಮುಖ್ಯ ವಕ್ತಾರರಾಗಿದ್ದರು. ಅವರು ಭಗವದ್ಗೀತೆಯನ್ನು ಚೀನೀ ಭಾಷೆಗೆ ಅನುವಾದಿಸಿದ್ದಾರೆ. ಪ್ರೊ. ಜಾಂಗ್ ಇವರು ಗೀತೆಯನ್ನು ‘ಭಾರತದ ತತ್ವಶಾಸ್ತ್ರ ವಿಶ್ವಕೋಶ ಮತ್ತು ಆಧ್ಯಾತ್ಮಿಕ ಮಹಾಕಾವ್ಯ’ ಎಂದು ಕರೆದರು. ಇಂದಿಗೂ ಭಾರತೀಯರ ಜೀವನದ ಮೇಲೆ ಭಗವದ್ಗೀತೆಯು ಬಹಳ ದೊಡ್ಡ ಪ್ರಭಾವವನ್ನು ಹೊಂದಿದೆ. ಪ್ರೊಫೆಸರ್ ಜಾಂಗ್ ಅವರು 1984 ರಿಂದ 1986 ರ ಅವಧಿಯಲ್ಲಿ ಭಾರತ ಪ್ರವಾಸ ಮಾಡುವಾಗ ಎಲ್ಲೆಡೆ ಭಗವಾನ್ ಶ್ರೀಕೃಷ್ಣನ ಅಸ್ತಿತ್ವವನ್ನು ಅನುಭವಿಸುವುದಾಗಿ ತಿಳಿಸಿದರು.

ಗೀತೆ ಪ್ರಾಚೀನ ಯುದ್ಧಭೂಮಿಯ ಸಂವಾದ! – ಪ್ರೊಫೆಸರ್ ವಾಂಗ್ ಝಿ-ಚೆಂಗ್
‘ಓರಿಯೆಂಟಲ್ ತತ್ವಶಾಸ್ತ್ರ ಸಂಶೋಧನಾ ಕೇಂದ್ರ’ದ ನಿರ್ದೇಶಕರಾದ ಪ್ರೊಫೆಸರ್ ವಾಂಗ್ ಝಿ-ಚೆಂಗ್ ಅವರು, ಗೀತೆ 5 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ಭಾರತೀಯ ಯುದ್ಧಭೂಮಿಯ ಸಂವಾದವಾಗಿದೆ. ಈ ಸಂವಾದವು ಇಂದಿಗೂ ಆಧುನಿಕ ಜೀವನದ ಜಟಿಲತೆಗಳು ಮತ್ತು ಚಿಂತೆಗಳನ್ನು ಬಗೆಹರಿಸಲು ಮಾರ್ಗದರ್ಶಿಯಾಗಿದೆ. ಗೀತೆಯಲ್ಲಿರುವ ಕರ್ಮಯೋಗ, ಸಾಂಖ್ಯಯೋಗ ಮತ್ತು ಭಕ್ತಿಯೋಗಗಳು ಆಧುನಿಕ ಜೀವನಕ್ಕೆ ಮಾರ್ಗದರ್ಶಿ ಎಂದು ಅವರು ಒತ್ತಿ ಹೇಳಿದರು.
ಭಾರತೀಯ ತತ್ವಶಾಸ್ತ್ರದ ಅಧ್ಯಯನ ಅಗತ್ಯ! – ಪ್ರೊಫೆಸರ್ ಯೂ ಲಾಂಗ್ ಯೂ
ಶೆನ್ಜೆನ್ ವಿಶ್ವವಿದ್ಯಾಲಯದ ಭಾರತೀಯ ಅಧ್ಯಯನ ಕೇಂದ್ರದ ಪ್ರೊಫೆಸರ್ ಯೂ ಲಾಂಗ್ ಯೂ ಅವರು, ಭಾರತೀಯ ತತ್ವಶಾಸ್ತ್ರ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳು ಅಧ್ಯಯನಕ್ಕೆ ಉಪಯುಕ್ತವಾಗಿವೆ ಮತ್ತು ಚೀನಾದ ವಿದ್ವಾಂಸರು ಅವುಗಳನ್ನು ಶ್ರದ್ಧೆಯಿಂದ ಅಳವಡಿಸಿಕೊಳ್ಳಬೇಕು, ಎಂದು ಹೇಳಿದರು.
ಭಗವದ್ಗೀತೆ ಆಧುನಿಕ ಜೀವನಕ್ಕೆ ನೈತಿಕ ಮತ್ತು ಆಧ್ಯಾತ್ಮಿಕ ದಿಕ್ಕನ್ನು ನೀಡುವ ಅಮೂಲ್ಯ ಮಾರ್ಗದರ್ಶನ! – ಭಾರತೀಯ ರಾಯಭಾರಿ ಪ್ರದೀಪಕುಮಾ್ ರಾವತ್

ಭಾರತೀಯ ರಾಯಭಾರಿ ಪ್ರದೀಪಕುಮಾರ ರಾವತ್ ಅವರು, ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ, ಬದಲಿಗೆ ಆಧುನಿಕ ಜೀವನಕ್ಕೆ ನೈತಿಕ ಮತ್ತು ಆಧ್ಯಾತ್ಮಿಕ ದಿಕ್ಕನ್ನು ನೀಡುವ ಅಮೂಲ್ಯ ಮಾರ್ಗದರ್ಶನವಾಗಿದೆ. ಭಾರತದ ತತ್ವಶಾಸ್ತ್ರವು ಮಾನವೀಯತೆ ಎದುರಿಸುತ್ತಿರುವ ಅತ್ಯಂತ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸುತ್ತದೆ, ಎಂದು ಹೇಳಿದರು.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !