
ಢಾಕಾ (ಬಾಂಗ್ಲಾದೇಶ) – ಪಾಕಿಸ್ತಾನದ ಜನರಲ್ ಸಾಹಿರ್ ಶಮ್ಶಾದ್ ಮಿರ್ಜಾ ಅವರಿಗೆ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥರಾದ ಮಹಮ್ಮದ್ ಯುನೂಸ್ ಅವರು ಒಂದು ನಕ್ಷೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ನಕ್ಷೆಯಲ್ಲಿ, ಭಾರತದ ಈಶಾನ್ಯ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗವೆಂದು ತೋರಿಸಲಾಗಿದೆ. ಯುನೂಸ್ ಅವರು ಮಿರ್ಜಾ ಅವರಿಗೆ ‘ದಿ ಆರ್ಟ್ ಆಫ್ ಟ್ರಯಂಫ್’ (The Art of Triumph) ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಪುಸ್ತಕದ ಮುಖಪುಟದಲ್ಲಿ ಬಾಂಗ್ಲಾದೇಶದ ನಕ್ಷೆಯನ್ನು ಮುದ್ರಿಸಲಾಗಿದೆ. ಇದರಲ್ಲಿ ಭಾರತದ ಈಶಾನ್ಯದ ೭ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗವೆಂದು ತೋರಿಸಲಾಗಿದೆ. ಈ ನಕ್ಷೆಯನ್ನು ಕಟ್ಟರ ಧಾರ್ಮಿಕ ಇಸ್ಲಾಮಿಕ್ ಗುಂಪುಗಳು ‘ಗ್ರೇಟರ್ ಬಾಂಗ್ಲಾದೇಶ’ (Greater Bangladesh) ಎಂದು ಗುರುತಿಸುತ್ತವೆ. ಈ ಪ್ರಕರಣದ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯವು ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಮಹಮ್ಮದ್ ಯುನೂಸ್ ಅವರ ಸಲಹೆಗಾರರಾದ ಮಹಫುಜ್ ಆಲಂ ಅವರು ಬಾಂಗ್ಲಾದೇಶದ ಒಂದು ತಪ್ಪಾದ ನಕ್ಷೆಯನ್ನು ಪೋಸ್ಟ್ ಮಾಡಿದ್ದರು. ಈ ನಕ್ಷೆಯಲ್ಲಿ ಮಹಫುಜ್ ಆಲಂ ಅವರು ಭಾರತದ ಪಶ್ಚಿಮ ಬಂಗಾಳ, ತ್ರಿಪುರ ಮತ್ತು ಅಸ್ಸಾಂ ರಾಜ್ಯಗಳ ಕೆಲವು ಭಾಗಗಳನ್ನು ಬಾಂಗ್ಲಾದೇಶದೊಳಗೆ ಇರುವಂತೆ ತೋರಿಸಿದ್ದರು. ಇದಕ್ಕೆ ವಿರೋಧ ವ್ಯಕ್ತವಾದ ನಂತರ, ಈ ಪೋಸ್ಟ್ ಅನ್ನು ತೆಗೆದುಹಾಕಲಾಗಿತ್ತು.
ಸಂಪಾದಕೀಯ ನಿಲುವುಬಾಂಗ್ಲಾದೇಶದ ವಿಷಯದಲ್ಲಿ ಭಾರತ ಸರಕಾರ ನಿಷ್ಕ್ರಿಯವಾಗಿರುವುದರಿಂದಲೇ, ಅದರ ಧೈರ್ಯ ದಿನೇ ದಿನೇ ಹೆಚ್ಚುತ್ತಿದೆ ಎಂಬುದು ಈ ಘಟನೆಯಿಂದ ತಿಳಿಯುತ್ತದೆ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation