
ವಾಷಿಂಗ್ಟನ್ (ಅಮೆರಿಕಾ) – ಅಮೆರಿಕಾ ಮತ್ತು ಪಾಕಿಸ್ತಾನದ ನಡುವಿನ ಹೆಚ್ಚುತ್ತಿರುವ ಸಂಬಂಧಗಳ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿಲ್ಲ; ಆದರೆ ಅವರು ಚಿಂತಿತರಾಗಿರಬಹುದು; ಏಕೆಂದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಐತಿಹಾಸಿಕವಾಗಿ ಉದ್ವಿಗ್ನತೆ ಇದೆ; ಆದರೆ ನಮಗೆ ವಿವಿಧ ದೇಶಗಳೊಂದಿಗೆ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಎಂಬುದು ಅವರಿಗೆ ಅರ್ಥವಾಗಿದೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.
ಟ್ರಂಪ್ ಅವರು ತಮ್ಮ ಎರಡನೇ ಅವಧಿಯಲ್ಲಿ ಪಾಕಿಸ್ತಾನದೊಂದಿಗೆ ನಿರಂತರವಾಗಿ ಸಂಬಂಧಗಳನ್ನು ಬಲಪಡಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ಅವರು ಇದುವರೆಗೆ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರನ್ನು ಎರಡು ಬಾರಿ ಭೇಟಿ ಮಾಡಿದ್ದಾರೆ. ಪಾಕಿಸ್ತಾನವು ಟ್ರಂಪ್ ಅವರನ್ನು ‘ನೋಬೆಲ್’ ಪ್ರಶಸ್ತಿಗೆ ಅಧಿಕೃತವಾಗಿ ನಾಮನಿರ್ದೇಶನ ಮಾಡಿದೆ. ಟ್ರಂಪ್ ಅವರು ಪಾಕಿಸ್ತಾನದ ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ಅವರನ್ನು ಸಹ ವೈಟ್‌ಹೌಸ್‌ನಲ್ಲಿ ಭೇಟಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರುಬಿಯೊ ಅವರಿಗೆ ಪ್ರಶ್ನೆ ಕೇಳಿದಾಗ ಅವರು ಈ ಮೇಲಿನ ಉತ್ತರವನ್ನು ನೀಡಿದರು.
ಭಾರತದೊಂದಿಗಿನ ನಮ್ಮ ಸಂಬಂಧಗಳು ಗಾಢವಾದ, ಐತಿಹಾಸಿಕ ಮತ್ತು ಪ್ರಮುಖವಾದವು.
ರುಬಿಯೊ ಮುಂದೆ ಮಾತನಾಡಿ, ನಾವು ಪಾಕಿಸ್ತಾನದೊಂದಿಗೆ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ಅವಕಾಶವನ್ನು ನೋಡುತ್ತಿದ್ದೇವೆ. ನಮ್ಮ ಕೆಲಸ ಅನೇಕ ರಾಷ್ಟ್ರಗಳೊಂದಿಗೆ ಸಾಮಾನ್ಯ ಹಿತಾಸಕ್ತಿಗಳ ಮೇಲೆ ಕೆಲಸ ಮಾಡುವ ಮಾರ್ಗಗಳನ್ನು ಕಂಡು ಹಿಡಿಯುವುದಾಗಿದೆ. ರಾಜತಾಂತ್ರಿಕತೆಯ ವಿಷಯದಲ್ಲಿ ಭಾರತೀಯರು ಅತ್ಯಂತ ಪ್ರಬುದ್ಧರಾಗಿದ್ದಾರೆ. ನೋಡಿ, ಅವರಿಗೆ ಕೆಲವು ದೇಶಗಳೊಂದಿಗೆ ಸಂಬಂಧಗಳಿವೆ, ಆ ದೇಶಗಳೊಂದಿಗೆ ನಮಗೆ ಸಂಬಂಧವಿಲ್ಲ. ಆದ್ದರಿಂದ ಇದು ಒಂದು ಪ್ರಾಯೋಗಿಕ ಮತ್ತು ಪ್ರಬುದ್ಧ ವಿದೇಶಾಂಗ ನೀತಿಯ ಉದಾಹರಣೆಯಾಗಿದೆ. ಪಾಕಿಸ್ತಾನದ ಜೊತೆಗಿನ ನಮ್ಮ ಸಂಬಂಧ ಹಾಗೂ ನಾವು ಅನುಸರಿಸುತ್ತಿರುವ ಬೇರೆ ಯಾವುದೇ ನೀತಿಯಿಂದ ಭಾರತದೊಂದಿಗಿನ ನಮ್ಮ ಸಂಬಂಧಗಳಿಗೆ ಅಥವಾ ಸ್ನೇಹಕ್ಕೆ ಯಾವುದೇ ಅಡ್ಡಿಯಾಗುವುದೆಂದು ನಾನು ಭಾವಿಸುವುದಿಲ್ಲ. ಭಾರತದೊಂದಿಗಿನ ನಮ್ಮ ಸಂಬಂಧಗಳು ಗಾಢವಾದ, ಐತಿಹಾಸಿಕ ಮತ್ತು ಪ್ರಮುಖವಾದದ್ದಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಅಮೆರಿಕಾಗೆ ಈ ವಿಷಯ ತಿಳಿದಿದ್ದರೆ, ರಷ್ಯಾದೊಂದಿಗಿನ ಭಾರತದ ಸಂಬಂಧಗಳ ಬಗ್ಗೆ ಅಮೆರಿಕಾ ಏಕೆ ಆಕ್ಷೇಪ ವ್ಯಕ್ತಪಡಿಸುತ್ತಿದೆ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation